5:31 AM Thursday7 - August 2025
ಬ್ರೇಕಿಂಗ್ ನ್ಯೂಸ್
ಮತದಾರರ ಹಕ್ಕು ರಕ್ಷಣೆ ರಾಜಕೀಯ ಪಕ್ಷಗಳ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:… ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ… Shivamogga | ತೀರ್ಥಹಳ್ಳಿ: ಮನೆಗಾಗಿ ಸಾಲ; ಮನನೊಂದ ವೃದ್ದ ದಂಪತಿ ಒಂದೇ ಮರಕ್ಕೆ… Kodagu | ಬೆಕ್ಕೆಸುಡ್ಲೂರಿನಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಪಲ್ಟಿ: ಕುಟ್ಟ- ಪೊನ್ನಂಪೇಟೆ… Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ… SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ…

ಇತ್ತೀಚಿನ ಸುದ್ದಿ

Social Justice | ಕಾನೂನಿನಡಿ ಎಲ್ಲರೂ ಸಮಾನರು ಎಂಬ ಪರಿಕಲ್ಪನೆ ಹೊಂದಬೇಕು: ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ

21/02/2025, 18:27

ಬಳ್ಳಾರಿ(reporterkarnataka.com): ಕಾನೂನಿನಡಿ ಎಲ್ಲ ಮಾನವರು ಸಮಾನರು ಎಂಬ ಪರಿಕಲ್ಪನೆಯಲ್ಲಿ ನಡೆದಾಗ ಸಾಮಾಜಿಕ ನ್ಯಾಯ ದೊರೆಯುತ್ತದೆ. ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾದಲ್ಲಿ ನ್ಯಾಯಾಲಯವು ನ್ಯಾಯ ಒದಗಿಸಿಕೊಡುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರೂ ಆಗಿರುವ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ನಂ.2 ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾನತೆ ಮತ್ತು ಸ್ವಾತಂತ್ರ್ಯ ಇವೆರಡು ದೇಶದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿದಾಗ ನಿಜವಾದ ಸಾಮಾಜಿಕ ಸಮಾನತೆ ದೊರೆಯುತ್ತದೆ. ಅಸಮಾನತೆಯನ್ನು ತೊಲಗಿಸಬೇಕೆಂದರೆ ಸಮಾನತೆಯ ಹಂಚಿಕೆಯನ್ನು ಕ್ರಮವಾಗಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ನಿಂದನೆ, ಅವಮಾನ-ಅಪಮಾನಗಳಂತಹ ಕಷ್ಟ-ಕಾರ್ಪಾಣ್ಯಗಳನ್ನು ಸಹಿಸಿಕೊಂಡು ಕೇವಲ ವಿದ್ಯಾರ್ಜನೆಯಿಂದ ಬದಲಾವಣೆ ಎಂಬುದು ಅರಿತುಕೊಂಡು ಶ್ರೇಷ್ಠ ವ್ಯಕ್ತಿಯಾದರು. ಪ್ರಸ್ತುತ ಜಗತ್ತಿನಲ್ಲಿ ಬಡವ ಮತ್ತು ಶ್ರೀಮಂತ ಎಂಬ ಎರಡು ಜಾತಿ ಇವೆ. ಜ್ಞಾನಾರ್ಜನೆಯಿಂದ ಆರ್ಥಿಕವಾಗಿ ಸಬಲರಾದರೆ ಎಲ್ಲಾರೂ ನಿಮ್ಮ ಹಿಂದೆ ಬರುತ್ತಾರೆ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಯ್ಯನಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ.ಬಿ.,  ಸಹಾಯಕ ನಿರ್ದೇಶಕರಾದ ಮಮತಾ, ನಿಲಯ ಪಾಲಕ ಶಿವಪ್ಪ, ಸರಳಾದೇವಿ ಕಾಲೇಜಿನ ಉಪನ್ಯಾಸಕರಾದ ಮಲ್ಲನ ಗೌಡ, ವಿಜಯ್ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ನಿಲಯದ ಸಿಬ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು.
ನಂತರ ಹಾಸ್ಟೆಲ್‌ನ ಗ್ರಂಥಾಲಯ, ಅಡುಗೆ ಕೋಣೆ ಹಾಗೂ ಅಲ್ಲಿನ ಸ್ವಚ್ಚತೆ ವೀಕ್ಷಣೆ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು