ಇತ್ತೀಚಿನ ಸುದ್ದಿ
SIT | ಧರ್ಮಸ್ಥಳ ದೇಗುಲ ಮಾಹಿತಿ ಕೇಂದ್ರ ಬಳಿಯ ಸಾರ್ವಜನಿಕ ಶೌಚಾಲಯ ಸುತ್ತಮುತ್ತ ಮಹಜರು
14/08/2025, 19:57

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು ಇಂದು ದೂರುದಾರನನ್ನು ದೇಗುಲದ ಮಾಹಿತಿ ಕೇಂದ್ರ ಬಳಿಯಿರುವ ಸ್ಥಳಗಳಲ್ಲಿ ಮಹಜರು ನಡೆಸಿದರು.
ಎಸ್ಐಟಿ ಅಧಿಕಾರಿಗಳು ಇಂದು ಸಂಜೆ ವೇಳೆ ದೂರುದಾರ ಅನಾಮಿಕನನ್ನು ಧರ್ಮಸ್ಥಳ ದೇವಾಲಯದ ಮಾಹಿತಿ ಕೇಂದ್ರದ ಸುತ್ತಮುತ್ತಲಿನಲ್ಲಿರುವ ಸಾರ್ವಜನಿಕ ಶೌಚಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಳ ಮಹಜರು ನಡೆಸಿದರು. ದೂರುದಾರ ದೇಗುಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಾಸ್ತವ್ಯ ನಡೆಸುತ್ತಿದ್ದ ಜಾಗದಲ್ಲಿಯೂ ಮಹಜರು ಕಾರ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.