ಇತ್ತೀಚಿನ ಸುದ್ದಿ
ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ ಬಂಧನ
03/10/2025, 21:18

ಹಾಸನ(reporterkarnataka.com): ಇಲ್ಲಿನ ಆಲೂರು ತಾಲ್ಲೂಕಿನ ಕದಾಳು ಚನ್ನಾಪುರ ಗ್ರಾಮದಲ್ಲಿ ತಾಯಿ-ಮಗನ ಜಗಳ ಹೆತ್ತಬ್ಬೆಯ ಕೊಲೆಯಲ್ಲಿ ಅಂತ್ಯ ಕಂಡಿದೆ.
ಮನೆಗೆ ಕುಡಿದು ಬಂದ ಮಗ ಸಂತೋಷ್ (19) ತಾಯಿ ಪ್ರೇಮ(45) ಅವರೊಂದಿಗೆ ಅಡುಗೆ ಮಾಡಿಲ್ಲ ಎಂದು ಕ್ಯಾತೆ ತೆಗೆದು ಜಗಳ ಶುರು ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಲುಪುತ್ತಿದ್ದಂತೆ ಅಲ್ಲೇ ಇದ್ದ ಕಟ್ಟಿಗೆಯಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರ ಸ್ವರೂಪದ ಗಾಯಗಳಿಂದ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದು ತಾಯಿಯನ್ನು ತಕ್ಷಣವೇ ಏಚೆತ್ತುಕೊಂಡ ಕುಟುಂಬಸ್ಥರು ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆ ಉಸಿರೇಳೆದಿದ್ದಾರೆ.ಆರೋಪಿ ಸಂತೋಷ್ (19)ನನ್ನು ಆಲೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.