11:33 PM Sunday29 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ… ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಇತ್ತೀಚಿನ ಸುದ್ದಿ

ಸಿಕಂದರಾಬಾದ್​​ ಎಲೆಕ್ಟ್ರಿಕ್ ವಾಹನಗಳ ಶೋ ರೂಮ್​ನಲ್ಲಿ ಅಗ್ನಿ ದುರಂತ; ಮಹಿಳೆ ಸಹಿತ 8 ಮಂದಿ ಸಾವು

13/09/2022, 18:41

ಸಿಕಂದರಾಬಾದ್ (reporterkarnataka.com): ಎಲೆಕ್ಟ್ರಿಕ್ ವಾಹನಗಳ ಶೋ ರೂಮ್​ನಲ್ಲಿ ದಿಢೀರ್​ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ  8 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ  ನಡೆದಿದೆ.

ಸಿಕಂದರಾಬಾದ್​​ ಶೋ ರೂಮ್​ನಲ್ಲಿ​ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಶೋ ರೂಮ್​ ಮೇಲ್ಭಾಗದಲ್ಲಿರುವ ಲಾಡ್ಜ್​ನಲ್ಲಿ ತಂಗಿದ್ದವರಲ್ಲಿ 8 ಮಂದಿ ಉಸಿರುಗಟ್ಟಿ ದುರ್ಮರಣಕ್ಕೀಡಾಗಿದ್ದಾರೆ. ಮೃತರಲ್ಲಿ 7 ಮಂದಿ ಪುರುಷರು ಹಾಗೂ ಓರ್ವ ಮಹಿಳೆ ಸೇರಿದ್ದಾರೆ. ಉಳಿದಂತೆ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸೋಮವಾರ ತಡರಾತ್ರಿ ಈ ಅಗ್ನಿ ಅವಘಡ ಸಂಭವಿಸಿದ್ದು, ದಟ್ಟ ಹೊಗೆಯಿಂದ ಉಸಿರಾಡಲು ಸಮಸ್ಯೆಯಾಗಿ ಇವರೆಲ್ಲರೂ ದುರ್ಮರಣಕ್ಕೀಡಾಗಿದ್ದಾರೆ. ಮೃತರೆಲ್ಲರೂ 35 ರಿಂದ 40 ವರ್ಷದೊಳಗಿನವರು ಎನ್ನಲಾಗಿದೆ. ಮೃತರನ್ನು ವಿಜಯವಾಡ ಮೂಲದ ಎಂ ಹರೀಶ್​, ಚೆನ್ನೈ ಮೂಲದ ಸೀತಾರಾಮನ್ ಹಾಗೂ ದೆಹಲಿಯ ವೀತೇಂದ್ರ ಎಂದು ಗುರುತಿಸಲಾಗಿದ್ದು, ಉಳಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.

ಭೀಕರ ಅಗ್ನಿ ದುರಂತ: ಐದು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿರುವ ಎಲೆಕ್ಟ್ರಿಕ್​ ವಾಹನದ ಶೋರೂಮ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ, ದಟ್ಟ ಹೊಗೆ ಹರಡಿದ್ದು, ಮೇಲ್ಮಹಡಿಯಲ್ಲಿರುವ ಲಾಡ್ಜ್​​ನ ಕೊಠಡಿಯಲ್ಲಿ ಹೊಗೆ ವ್ಯಾಪಿಸಿದೆ. ಅಲ್ಲಿ ವಾಸ್ತವ್ಯ ಹೂಡಿದ್ದ ಅನೇಕರಿಗೆ ಉಸಿರಾಡಲು ಸಮಸ್ಯೆ ಉಂಟಾಗಿ ಸಾವನ್ನಪ್ಪಿದ್ದಾರೆ. ಲಾಡ್ಜ್​ನ ವಿವಿಧ ಕೊಠಡಿ ಹಾಗೂ ಹೊರಗಡೆ ದಟ್ಟ ಹೊಗೆ ಸೇವಿಸಿರುವ ಕಾರಣ ಅನೇಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು ಎಂದು ವರದಿಯಾಗಿದೆ.

ಹೈದರಾಬಾದ್​​ನ ಪಾಸ್​ಪೋರ್ಟ್ ಕಚೇರಿಯ ಪಕ್ಕದಲ್ಲಿ ರೂಬಿ ಲಕ್ಸುರಿ ಪ್ರೈಡ್​ ಎಂಬ ಐದು ಅಂತಸ್ತಿನ ಕಟ್ಟಡವಿದೆ. ಇದರಲ್ಲಿ ಎಲೆಕ್ಟ್ರಿಕ್​ ವಾಹನಗಳ ಶೋ ರೂಮ್​ ನೆಲಮಾಳಿಗೆಯಲ್ಲಿದ್ದು, ಉಳಿದ ನಾಲ್ಕು ಕಟ್ಟಡಗಳಲ್ಲಿ ಹೋಟೆಲ್​ ಕಮ್​ ಲಾಡ್ಜ್ ಇದೆ. ಸೋಮರಾತ್ರಿ ರಾತ್ರಿ 9:40ರ ವೇಳೆ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​​ನಿಂದ ಈ ಅವಘಡ ಸಂಭವಿಸಿದ್ದು, ತಕ್ಷಣವೇ ಶೋ ರೂಮ್​​ನಲ್ಲಿದ್ದ ಎಲೆಕ್ಟ್ರಿಕ್​ ವಾಹನಗಳ ಬ್ಯಾಟರಿ ಸ್ಫೋಟಗೊಂಡಿವೆ. ಹೀಗಾಗಿ, ವಿಷಕಾರಿ ಹೊಗೆ ಲಾಡ್ಜ್​ ರೂಂಗಳಿಗೆ ವ್ಯಾಪಿಸಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಸಚಿವರಾದ ತಲಸಾನಿ ಶ್ರೀನಿವಾಸ್ ಯಾದವ್​, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹೋಟೆಲ್​​ನಲ್ಲಿ 25-30 ಪ್ರವಾಸಿಗರು ತಂಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. 8 ಜನರು ಸಾವನ್ನಪ್ಪಿದ್ದಾರೆಂದು ಹೈದರಾಬಾದ್​ ಉತ್ತರ ವಲಯದ ಡಿಸಿಪಿ ಚಂದನಾ ದೀಪ್ತಿ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಕಚೇರಿ ಪರಿಹಾರ ಘೋಷಣೆ: ಸಿಕಂದರಾಬಾದ್​ ಅಗ್ನಿ ಅವಘಡಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಾಣಹಾನಿ ಬೇಸರ ತಂದಿದೆ. ಮೃತರ ಕುಟುಂಬಗಳಿಗೆ ಸಂತಾಪ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದಿದ್ದಾರೆ. ಇದರ ಜೊತೆಗೆ PMNRFನಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿ ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು