10:11 AM Monday13 - October 2025
ಬ್ರೇಕಿಂಗ್ ನ್ಯೂಸ್
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;…

ಇತ್ತೀಚಿನ ಸುದ್ದಿ

ಸಿದ್ದಕಟ್ಟೆ ಕೊಡಂಗೆ: ಎರಡನೇ ವರ್ಷದ ‘ ರೋಟರಿ ಕಂಬಳ ‘ದ ಸಂಭ್ರಮ

13/10/2025, 10:11

ಬಂಟ್ವಾಳ(reporterkarnataka.com): ದೇಶದಲ್ಲಿ ಸಿಗುವ ಕೆಲವೊಂದು ಜನಪ್ರಿಯ ಆಹಾರ ಮತ್ತು ಪಾನೀಯ ಪೊಟ್ಟಣ ಗಲ್ಲಿ ಕೂಡಾ ದಷ್ಟ -ಪುಷ್ಟ ಕಂಬಳ ಕೋಣಗಳ ಓಟದ ಚಿತ್ರ ಅಳವಡಿಸುವಷ್ಟರ ಮಟ್ಟಿಗೆ ಗ್ರಾಮೀಣ ರೈತರ ಕಂಬಳ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ಆಕರ್ಶಿಸುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ. ಕೆ. ಹೇಳಿದ್ದಾರೆ.
ಇಲ್ಲಿನ ಸಿದ್ದಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಭಾನುವಾರ ಏರ್ಪಡಿಸಿದ್ದ ಎರಡನೇ ವರ್ಷದ ‘ರೋಟರಿ ಕಂಬಳ’ ಉದ್ಘಾಟಿಸಿ ಅವರು ಮಾತನಾಡಿದರು.
ಲೊರೆಟ್ಟೋ ಹಿಲ್ಸ್ ಸೇರಿದಂತೆ ಬಂಟ್ವಾಳ, ಮೊಡಂಕಾಪು, ಮಂಗಳೂರು ಸೆಂಟ್ರಲ್ ಮತ್ತು ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಸಹ ಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಕಿರಿಯ ಮತ್ತು ಸಬ್ ಜೂನಿಯರ್ ವಿಭಾಗದ ಈ ಕಂಬಳ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜಮುಖಿ ಚಟುವಟಿಕೆ ಜೊತೆಗೆ ಪಬ್ಲಿಕ್ ಇಮೇಜ್ ವೃದ್ಧಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ರೋಟರಿ ಕಂಬಳ ಪೂರಕವಾಗಿದೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಭೇಟಿ ನೀಡಿ ಶುಭ ಹಾರೈಸಿದರು.


ಲೊರೆಟ್ಟೋ ಹಿಲ್ಸ್ ಕ್ಲಬ್ಬಿನ ಮಾಜಿ ಅಧ್ಯಕ್ಷ ಎಂ. ಪದ್ಮರಾಜ್ ಬಲ್ಲಾಳ್ ಮಾವಂತೂರು ಇವರು ‘ಕಂಬಳ  ಕರೆ ಉದ್ಘಾಟಿಸಿದರು. ಎಡಿಶನಲ್ ಎಸ್ಪಿ ಅನಿಲ್ ಕುಮಾರ್ ಬೊಮ್ಮರೆಡ್ಡಿ,   ಸಿದ್ದಕಟ್ಟೆ ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಕ್ಯಪದವು ಮೈರ ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್  ಬಜ, ರೋಟರಿ ಸಹಾಯಕ ಗವರ್ನರ್ ಡಾ.ಎ.ಜಯ ಕುಮಾರ ಶೆಟ್ಟಿ, ಉಮೇಶ್ ರಾವ್ ಮಿಜಾರು, ಕೆ.ಪದ್ಮನಾಭ ರೈ ಕಲ್ಲಡ್ಕ,
ಡಾ. ರಾಜಾರಾಮ್ ಉಪ್ಪಿನಂಗಡಿ, ಪ್ರಮುಖರಾದ ಡಾ. ದೇವದಾಸ್ ರೈ, ನಾರಾಯಣ ಹೆಗ್ಡೆ, ಡಾ. ಶಿವಪ್ರಕಾಶ್,
ಲೊರೆಟ್ಟೋ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಬಂಟ್ವಾಳ ಕ್ಲಬ್ಬಿನ ಅಧ್ಯಕ್ಷ ಬಸ್ತಿ ಮಾಧವ ಶೆಣೈ, ಸಿದ್ದಕಟ್ಟೆ ಕ್ಲಬ್ಬಿನ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರಿಂಕಿಜೆ, ಮೊಡಂಕಾಪು ಕ್ಲಬ್ಬಿನ ಅಧ್ಯಕ್ಷೆ ಪ್ರೀಮಾ ವೈಲೆಟ್ ಫೆರ್ನಾಂಡಿಸ್, ಮಂಗಳೂರು ಕ್ಲಬ್ಬಿನ ಅಧ್ಯಕ್ಷ ಭಾಸ್ಕರ ರೈ ಕಟ್ಟ  ಶುಭ ಹಾರೈಸಿದರು.  ಪ್ರಮುಖರಾದ ಶ್ರುತಿ ಮಾಡ್ತಾ, ಡಾ.ಆತ್ಮ ರಂಜನ್ ರೈ,ಗಣೇಶ್ ಶೆಟ್ಟಿ ಸಿದ್ದಕಟ್ಟೆ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ,ಜಾನ್ ಕೆನ್ಯೂಟ್ ಮಸ್ಕರೆನ್ಹಸ್ ಉಪ್ಪಿನಂಗಡಿ, ಡಾ.ಪ್ರಹ್ಲಾದ್ ಮೈಸೂರು, ಪುಷ್ಪರಾಜ ಹೆಗ್ಡೆ, ಕಿರಣ್  ಹೆಗ್ಡೆ ಮಾಣಿ,ಕಿರಣ್ ಕುಮಾರ್ ಮಂಜಿಲ, ಮೈಕಲ್ ಡಿಕೋಸ್ತ, ಮೋಹನ್ ಕೆ.ಶ್ರೀಯಾನ್ ರಾಯಿ, ಮೊಹಮ್ಮದ್ ಯಾಸೀರ್ ಕಲ್ಲಡ್ಕ, ಟೀನಾ ಡಿಕೊಸ್ತ ಸಿದ್ದಕಟ್ಟೆ,ಪ್ರಸನ್ನ ರಾವ್ ಮೊಡಂಕಾಪು, ವಿಕಾಸ್ ಕೋಟ್ಯಾನ್ ಮಂಗಳೂರು, ರಾಜೇಶ್ ಶೆಟ್ಟಿ ಸೀತಾಳ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಮೈಕಲ್ ಡಿಕೋಸ್ತ,ಹೊನ್ನಯ ಕಾಟಿಪಳ್ಳ,ಪಿ.ಎ.ರಹೀಂ ಬಿ.ಸಿ.ರೋಡ್, ಕೆ.ರಮೇಶ್ ನಾಯಕ್, ಅಲೆಕ್ಸಾಂಡರ್ ಲೋಬೋ, ಶಶಿಧರ ಶೆಟ್ಟಿ ಕಲ್ಲಾಪು,ಸೀತಾರಾಮ ಶೆಟ್ಟಿ, ಹರೀಶ ಶೆಟ್ಟಿ, ಜಿಲ್ಲಾ ತೀರ್ಪುಗಾರ ವಿಜಯ ಕುಮಾರ್  ಕಂಗಿನಮನೆ, ಉಮೇಶ್ ಹಿಂಗಾಣಿ ಮತ್ತಿತರರಿದ್ದರು.   

ಇತ್ತೀಚಿನ ಸುದ್ದಿ

ಜಾಹೀರಾತು