ಇತ್ತೀಚಿನ ಸುದ್ದಿ
*ಮಸ್ಕಿ ನಾಗಲೀಕ ಸಿಂಪಿ ಸಮಾಜದ ಕುಲ ಗುರುವಾದ ಶ್ರೀ ಜಡೆಯ ಶಂಕರಲಿಂಗ ಜಯಂತೋತ್ಸವ*
03/08/2025, 22:32

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ನಾಗಲೀಕ ಸಿಂಪಿ ಸಮಾಜದ ಉದ್ಧಾರಕ್ಕಾಗಿ ಅವತರಿಸಿದ ಮಹಾ ಮಹಿಮರಾದ ಶ್ರೀ ಶರಣ ಶಂಕರದಾಸಿಮಯ್ಯನವರ ಜಯಂತೋತ್ಸವದ ಅಂಗವಾಗಿ ಶ್ರಾವಣ ಮಾಸದ ಪ್ರಥಮ ಸೋಮವಾರ ಮಸ್ಕಿಯ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಶ್ರೀ ಶರಣ ಶಂಕರದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಾಮಂಗಳಾರತಿಯ ಮುಖಾಂತರ ಜಯಂತೋತ್ಸವ ಆಚರಿಸಲಾಯಿತು.
ಮಸ್ಕಿ ನಾಗಲೀಕ ಸಿಂಪಿ ಸಮಾಜದ ಗೌರವ ಅಧ್ಯಕ್ಷ ದೊಡ್ಡಪ್ಪ ಬುಳ್ಳಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂದ್ಗಲ ಕಾರ್ಯದರ್ಶಿ
ಸಾಹಿತಿ ಶ್ರೀಧರ ಮಸ್ಕಿ ಹಾಗೂ ಸಹ ಖಜಾಂಚಿ ವೀರೇಶ ತಾವರಗೇರಾ ಪದಾಧಿಕಾರಿಗಳಾದ ಶ್ರೀ ಶಿವಪ್ಪ ಇನ್ನಿತರ ಸಮಾಜದ ಬಾಂಧವರು ಭಾಗವಹಿಸಿದ್ದರು.