ಇತ್ತೀಚಿನ ಸುದ್ದಿ
Shrigeri | ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮೃತಪಟ್ಟವರ ಕುಟುಂಬಗಳಿಗೆ ಶೃಂಗೇರಿ ಸ್ವಾಮೀಜಿ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ
02/05/2025, 15:38

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಶ್ಮೀರದ ಪೆಹಲ್ಗಾವ್ ನಲ್ಲಿ ಉಗ್ರರ ದಾಳಿ ಘಟನೆಯನ್ನು ಶೃಂಗೇರಿ ಶ್ರೀಗಳ ಖಂಡಿಸಿದ್ದು, ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಪೆಹಲ್ಗಾವ್ ನಲ್ಲಿ ಉಗ್ರರ ದಾಳಿಯಿಂದ ಮೃತರ ಕುಟುಂಬಗಳಿಗೆ ಶೃಂಗೇರಿ ಶ್ರೀಗಳು ಸ್ವಾಂತನ ಹೇಳಿದ್ದು, ಮೃತಪಟ್ಟಿರುವ ಹಿಂದೂಗಳ ಕುಟುಂಬಗಳಿಗೆ ಹಿಂದೂಗಳೇ ನೆರವಾಗಬೇಕು ಎಂದರು.
ಮೃತಪಟ್ಟಿರುವ ಕುಟುಂಬಗಳು ಸಂಕಷ್ಟದಲ್ಲಿರುವ ಸಮಯದಲ್ಲಿ ಈ ಧನಸಹಾಯ ನೆರವಾಗಲಿದೆ.
ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಮಠದಿಂದ ಪ್ರಸಾದದ ರೂಪದಲ್ಲಿ ಧನಸಹಾಯ ಮಾಡಲಾಗುತ್ತದೆ. ಮಠದ ಆಡಳಿತಾಧಿಕಾರಿಗಳು ಆ ಕುಟುಂಬಗಳಿಗೆ ಧನಸಹಾಯದ ವ್ಯವಸ್ಥೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.