ಇತ್ತೀಚಿನ ಸುದ್ದಿ
ಶ್ರೀ ಕ್ಷೇತ್ರ ಮಂದಾರಬೈಲು: ಕೋಲ ಬಲಿಸೇವೆ; ಧ್ವನಿ ಸುರುಳಿ ಬಿಡುಗಡೆ
04/02/2023, 22:40

ಮಂಗಳೂರು(reporterkarnataka.com): ನಗರದ ದೇರೆಬೈಲ್ ಕೊಂಚಾಡಿ ಸಮೀಪದ ಶ್ರೀ ಕ್ಷೇತ್ರ ಮಂದಾರಬೈಲು ರಕ್ತೇಶ್ವರಿ, ಮಂತ್ರದೇವತೆ, ರಾಹು ಗುಳಿಗ ಸನ್ನಿಧಿಯಲ್ಲಿ ಕೋಲ ಬಲಿ ಸೇವೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಗಿದ್ದು, ಫೆ. 5ರ ವರೆಗೆ ಜರಗಲಿದೆ.
ಇದೇ ಸಂದರ್ಭದಲ್ಲಿ ಶನಿವಾರ ಶ್ರೀ ಕ್ಷೇತ್ರದಲ್ಲಿ ” ಮಂದಾರಬೈಲ್‌ದ ಅಪ್ಪೆ ಮಂತ್ರದೇವತೆಗ್ ಶರಣು” ಎಂಬ ತುಳು ಭಕ್ತಿಗೀತೆಗಳ ಧ್ವನಿ ಸುರುಳಿಯನ್ನು ಶ್ರೀ ಕ್ಷೇತ್ರ ಮಂದಾರ ಬೈಲ್‌ನ ಧರ್ಮದರ್ಶಿಗಳಾದ ಪ್ರಕಾಶ್ ಪಂಡಿತ್ ಬಿಡುಗಡೆಗೊಳಿಸಿದರು.
ಯೋಗಗುರು ಜಗದೀಶ್ ಶೆಟ್ಟಿ ಬಿಜೈ, ಪ್ರಮುಖರಾದ ಕಿರಣ್ ಪಕಳ, ವಿನಯ ಆರ್. ಶೆಟ್ಟಿ, ಕೃಷ್ಣ ಪಂಡಿತ್,ಯತೀಶ್ , ವರುಣ್ ಆಚಾರ್, ಗೋಪಾಲ್ ಶೆಟ್ಟಿ,ರಾಮ ಗುರಿಕಾರರು, ಸುರೇಶ್ ಪೂಜಾರಿ, ಹರೀಶ್ ಪೂಜಾರಿ, ನಿತಿನ್ ಮುಂತಾದವರು ಉಪಸ್ಥಿತರಿದ್ದರು.