ಇತ್ತೀಚಿನ ಸುದ್ದಿ
Shocking News | ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಮುಡಾ ಕಮಿಷನರ್ ವಿರುದ್ಣ ಉರ್ವ ಠಾಣೆಯಲ್ಲಿ ದೂರು ದಾಖಲು
07/01/2024, 22:03
ಮಂಗಳೂರು(reporterkarnataka.com): ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಕಮಿಷನರ್ ಮನ್ಸೂರು ಆಲಿ ವಿರುದ್ಧ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತು ದೂರು ದಾಖಲಾಗಿದೆ.
ಮುಡಾ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಬೆರಳಚ್ಚುಗಾರ್ತಿಯಾಗಿ ಕೆಲಸಮಾಡಿಕೊಂಡಿರುವ ಮಹಿಳೆಯೊಬ್ಬರು ತಾವು ಕೆಲಸ ಮಾಡುತ್ತಿರುವ ಮುಡಾ ಕಚೇರಿಯ ಆಯುಕ್ತರಾದ ಮನ್ಸೂರು ಆಲಿ ಅವರು ಲೈಂಗಿಕ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುತ್ತಾರೆ ಎಂದು ಪೊಲೀಸ್ ಆಯುಕ್ತರಿಗೆ ಜನವರಿ 5ರಂದು ದೂರು ನೀಡಿದ್ದರು.
ಮಹಿಳಾ ಸಿಬ್ಬಂದಿಯ ದೂರಿನಂತೆ ಮುಡಾ ಆಯುಕ್ತರ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಕಲಂ 354, 354A ಐಪಿಸಿಯಡಿ ಪ್ರಕರಣ ದಾಖಲಾಗಿದೆ.