ಇತ್ತೀಚಿನ ಸುದ್ದಿ
ಶಿವನಸಮುದ್ರ: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಕೊಡಗಿನ ಕಾವೇರಿ ವೈಭವ
31/07/2025, 23:21

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗಿನಲ್ಲಿ ಸುರಿದ ಧಾರಕಾರವಾದ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಕನ್ನಂಬಾಡಿ ಆಣೆಕಟ್ಟು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಹರ್ಷ ಮೂಡಿದೆ.
ಕಾವೇರಿ ನದಿ ಸುದೀರ್ಘ ಅವಧಿ ಅಂದಾಜು 84 ವರ್ಷಗಳ ಬಳಿಕ ಶಿವನಸಮುದ್ರದಲ್ಲಿ ಅದ್ಭುತವಾಗಿ ಕಂಡು ಬರುತ್ತಿದ್ಧು, ಕಾವೇರಿ ವೈಭವವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.