ಇತ್ತೀಚಿನ ಸುದ್ದಿ
Shivamogga | ತೀರ್ಥಹಳ್ಳಿ ದೇವಸ್ಥಾನಕ್ಕೆ ಕನ್ನ ಹಾಕಲು ಬಂದ ಮಾಸ್ಕ್ ಮ್ಯಾನ್..!
12/08/2025, 12:39

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದ ಅಕ್ಕಪಕ್ಕದಲ್ಲಿ ಇರುವ ದೇವಸ್ಥಾನಗಳಿಗೆ ಕನ್ನ ಹಾಕುವ ಸಲುವಾಗಿ ಮಾಸ್ಕ್ ಮ್ಯಾನ್ ಒಬ್ಬ ಬಂದು ದೇವಸ್ಥಾನದ ಬಾಗಿಲು ಮುರಿದು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಪಟ್ಟಣದ ರಥಬೀದಿಯಲ್ಲಿರುವ ದೇವಸ್ಥಾನ ಒಂದರಲ್ಲಿ
ಬೆಳಗಿನ ಜಾವ ಕಳ್ಳತನ ಮಾಡಲು ಪ್ರಯತ್ನ ಮಾಡಿದ್ದು ದೇವಸ್ಥಾನದ ಮುಂಭಾಗದ ಬಾಗಿಲಿನ ಚಿಲಕ ಮುರಿದು ಹಾಕಲಾಗಿದೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ವಿಚಾರ ತಿಳಿದವರೇ ಯಾರೋ ಕಿಡಿಗೇಡಿಗಳು ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂಬ ಸಂಶಯ ಮೂಡಿದೆ.
ವೆಂಕಟರಮಣ ದೇವಸ್ಥಾನದ ಸಿಸಿ ಕ್ಯಾಮರದಲ್ಲಿ ಮಾಸ್ಕ್ ಮ್ಯಾನ್ ಓಡಾಡಿರುವ ದೃಶ್ಯ ಸೆರೆಯಾಗಿದ್ದು ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ದೇವಸ್ಥಾನದಿಂದ ಯಾವುದೇ ವಸ್ತುಗಳು ಕಳ್ಳತನ ಆಗಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಆದರೂ ಆ ಮಾಸ್ಕ್ ಮ್ಯಾನ್ ಯಾರು? ಎಂಬುದು ತಿಳಿದು ಬರಬೇಕಿದೆ.. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.