ಇತ್ತೀಚಿನ ಸುದ್ದಿ
Shivamogga | ಭಾರೀ ಮಳೆ: ಶೃಂಗೇರಿ – ಹೊಸಗದ್ದೆ – ಕುಂದಾದ್ರಿ ರಸ್ತೆ ಸಂಪರ್ಕ ಕಡಿತ
26/07/2025, 22:29

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಪುಷ್ಯ ಮಳೆಯ ಆರ್ಭಟಕ್ಕೆ ನದಿ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಮಾಲತಿ ನದಿಯ ನೀರಿನ ಮಟ್ಟ ಹೆಚ್ಚಳವಾಗಿ ಶೃಂಗೇರಿ – ಹೊಸಗದ್ದೆ – ಕುಂದಾದ್ರಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹೋನ್ನೆತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ
ನಾಬಳ ಬಳಿ ರಸ್ತೆ ಬಂದ್ ಆಗಿದ್ದು ರಸ್ತೆ ಮೇಲೆ ನೀರು ಹರಿಯುತ್ತಿದೆ. ಶೃಂಗೇರಿಯಿಂದ ಕುಂದಾದ್ರಿ ಹಾಗೂ ಗುಡ್ಡೇಕೇರಿಗೆ ಬರುವ ಪ್ರವಾಸಿಗರು ಬದಲಿ ಮಾರ್ಗದಲ್ಲಿ ಸಂಚರಿಸಬೇಕಿದೆ.