ಇತ್ತೀಚಿನ ಸುದ್ದಿ
ಶಿವಮೊಗ್ಗ ಗಲಭೆ: 24 ಪ್ರಕರಣ ದಾಖಲು; 60 ಮಂದಿ ಬಂಧನ; ಪರಿಸ್ಥಿತಿ ಶಾಂತ
03/10/2023, 19:26
ಚಂದ್ರಲೇಖಾ ಪಾಟೀಲ್ ಸೊರಬ ಶಿವಮೊಗ್ಗ
info.reporterkarnataka@gmail.com
ಈದ್ ಮೆರವಣಿಗೆ ವೇಳೆ ಶಿವಮೊಗ್ಗದ ರಾಗಿಗುಡ್ಡ ಬಡಾವಣೆಯಲ್ಲಿ ನಡೆದ ಕಲ್ಲು ತೂರಾಟ, ಗಲಭೆಗೆ ಸಂಬಂಧಿಸಿದಂತೆ 24 ಪ್ರಕರಣ ದಾಖಲಾಗಿದ್ದು, ಇದುವರೆಗೆ 60 ಜನರನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಘಟನೆಯಲ್ಲಿ 4 ವಾಹನಗಳು ಜಖಂಗೊಂಡಿವೆ. 7 ಮನೆಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ರಾಗಿಗುಡ್ಡದಲ್ಲಿ ಪರಿಸ್ಥಿತಿ ಇದೀಗ ಸಂಪೂರ್ಣ
ನಿಯಂತ್ರಣದಲ್ಲಿದೆ. ಶಾಂತ ಪರಿಸ್ಥಿತಿ ನೆಲೆಸಿದೆ. ಘಟನೆ ನಡೆದ ಅರ್ಧ ತಾಸಿನಲ್ಲಿಯೇ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ ಎಂದು
ಮಾಹಿತಿ ನೀಡಿದ್ದಾರೆ.