ಇತ್ತೀಚಿನ ಸುದ್ದಿ
Shivamogga | ತೀರ್ಥಹಳ್ಳಿ ಬಾಳೆಬೈಲು ಬಳಿ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಸಾವು
14/10/2025, 23:27

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಬುಲೆರೋ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ಪಟ್ಟಣದ ಬಾಳೆಬೈಲ ಸಮೀಪ ನಡೆದಿದೆ.
ಮಂಗಳವಾರ ಸಂಜೆ ಬಾಳೆಬೈಲು ಸಮೀಪದಲ್ಲಿ ಅಪಘಾತ ಸಂಭವಿಸಿದ್ದು ಚರಣ್ ( 23 ) ಸ್ಥಳದಲ್ಲೇ ಸಾವನಪ್ಪಿದ್ದಾನೆ. ಹುಂಚದಕಟ್ಟೆಯ ನಿಟ್ಟೂರು ಸಮೀಪದ ಯುವಕ ಮನೆಗೆ ವಾಪಸಾಗುವಾಗ ಈ ಘಟನೆ ಸಂಭವಿಸಿದೆ. ಅಪಘಾತವಾದ ತಕ್ಷಣ ಯುವಕನನ್ನ ಆಸ್ಪತ್ರೆಗೆ ರವಾನಿಸಿದ್ದು ಆಸ್ಪತ್ರೆಗೆ ಸಾಗಿಸುವಾಗ ಯುವಕ ಮೃತಪಟ್ಟಿದ್ದಾನೆ.
ಚರಣ್ ಮೃತದೇಹ ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಇಟ್ಟಿದ್ದು, ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.