ಇತ್ತೀಚಿನ ಸುದ್ದಿ
Shivamogga | ಬಾಳೆಬೈಲು ಬಳಿ ಗ್ಯಾಸ್ ಲಾರಿ – ಬೈಕ್ ನಡುವೆ ಭೀಕರ ಅಪಘಾತ: ಇಬ್ಬರ ದುರ್ಮರಣ
25/11/2025, 13:58
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಗ್ಯಾಸ್ ಲಾರಿ ಹಾಗೂ ಬೈಕ್ ನಡುವೆ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಬಾಳೆಬೈಲು ಸಮೀಪ ನಡೆದಿದೆ.

ಪಟ್ಟಣದ ಬಾಳೆಬೈಲಿನ ಆರ್ ಎಂಸಿ ಯಾರ್ಡ್ ಬಳಿ ತಡ ರಾತ್ರಿ 1:30ರ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ
ಬೈಕ್ ನಲ್ಲಿದ್ದ ಇಬ್ಬರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಸುದೀಪ್ ( 25) ಮತ್ತು ಸುಧೀಶ್ (30) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಇಬ್ಬರು ಇಂದಿರಾನಗರ ಹಾಗೂ ಯಡೆಹಳ್ಳಿಕೆರೆಯವರು ಎಂದು ತಿಳಿದು ಬಂದಿದೆ.
ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ..












