9:29 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಎಲ್ಲರಿಗಿಂತ ದೊಡ್ಡ ಯೋಗಿ ಶಿವ: ಯೋಗರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ

30/06/2025, 21:50

ಬೆಂಗಳೂರು(reporterkarnataka.com): ಎಲ್ಲರಿಗಿಂತ ದೊಡ್ಡ ಯೋಗಿ ಶಿವ. ಶಿವನ ಜೊತೆ ಯಾವಾಗಲು ನಮ್ಮ ಯೋಗ ಸಂಬಂಧ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.


ಅವರು ಶ್ವಾಸ ಯೋಗ ಸಂಸ್ಥೆ ಹಾಗೂ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಯೋಗ ರತ್ನ ಪ್ರಶಸ್ತಿ 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಕ್ರೇನ್ ನ ಯೋಗಿನಿ ಒಲೈನಾ ತಾರಾಸೋವಾ ಅವರಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು.
ಶ್ವಾಸ ಗುರು ವಚನಾನಂದ ಸ್ವಾಮೀಜಿ ಕರ್ನಾಟಕದಲ್ಲಿ ಯೋಗದ ದೊಡ್ಡ ಕ್ರಾಂತಿ ಮಾಡಿದ್ದಾರೆ. ಕೇವಲ ಯೋಗಿಗೆ ಸೀಮಿತವಾಗಿದ್ದ ಯೋಗವನ್ನು ಮನೆ ಮನೆಗೆ ತಲುಪಿಸುವ ಕೆಲಸ ವಚನಾನಂದ ಸ್ವಾಮಿಜಿ ಮಾಡಿದ್ದಾರೆ. ಯೋಗ ಜಗತ್ತಿನಲ್ಲಿ ಅವರ ದೊಡ್ಡ ಹೆಸರು ಇರುವುದರಿಂದ ಜಗತ್ತಿನ ಅವರ ಅಭಿಮಾನಿಗಳು ಬಂದಿದ್ದಾರೆ ಎಂದರು.
ಎಲ್ಲರಿಗಿಂತ ದೊಡ್ಡ ಯೋಗಿ ಶಿವ. ಶಿವನ ಜೊತೆ ಯಾವಾಗಲು ನಮ್ಮ ಯೋಗ ಸಂಬಂಧ ಇರುತ್ತದೆ. ನಾವು ಶ್ವಾಸ ತೆಗೆದುಕೊಂಡಾಗ ಅದು ಪರಮಾತ್ಮನ ಜೊತೆ ಸಂಪರ್ಕ ಹೊಂದುತ್ತದೆ. ಕಷ್ಟ ಪಡುವುದು ಯೋಗವಲ್ಲ. ಸಹಜವಾಗಿ ಮಾಡುವುದೇ ಯೋಗ, ಟು ಲೀವ್ ವೆರಿ ಲೆಸ್ ಬದುಕು ಎಷ್ಟು ಸಣ್ಣದು ಮಾಡುತ್ತೇವೆಯೊ ಅದು ಸುಂದರವಾಗಿರುತ್ತದೆ. ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳುತ್ತಾರೆ ಅವರು ಸಾವಿನ ನಂತರ ಬದುಕುವವರು ಸಾಧಕರು ಎಂದು ಹೇಳುತ್ತಾರೆ. ಸ್ವಾಮಿಜಿಗಳು 500 ವರ್ಷ ಬದುಕಿದ್ದರು ಅಂದರೆ ಅವರ ವಿಚಾರಗಳು ಈಗಲು ಇವೆ. ಕಾಲ ಮಿತಿಯನ್ನು ಮೀರಿ ಸಾಧಿಸುವುದೇ ಯೋಗ ಎಂದು ಹೇಳಿದರು.
ಸಚಿವ ಸಂತೋಷ ಲಾಡ್ ಪಾದರಸದಂತೆ ಓಡಾಡುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಂತು ಯೋಗ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ವಾಸ ಗುರು ವಚನಾನಂದಸ್ವಾಮಿ, ಸಚಿವ ಸಂತೋಷ ಲಾಡ್, ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು