ಇತ್ತೀಚಿನ ಸುದ್ದಿ
ಶಿರೂರು ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಜತೆಗೆ ಚಾಲಕ ಅರ್ಜುನ್ ಮೃತದೇಹ ಪತ್ತೆ: ಗಂಗಾವಳಿ ನದಿಯಲ್ಲಿ ನಡೆದ ಡ್ರಜ್ಜಿಂಗ್ ಕಾರ್ಯಾಚರಣೆ
25/09/2024, 21:13
ಕಾರವಾರ(reporter Karnataka.com): ಅಂಕೋಲಾ ಸಮೀಪದ ಶಿರೂರುನಲ್ಲಿ ಸಂಭವಿಸಿದ ಭಾರೀ ಗುಡ್ಡ ಕುಸಿತದಿಂದ ಟ್ರಕ್ ಸಹಿತ ನಾಪತ್ತೆಯಾದ ಕೇರಳ ಮೂಲದ ಭಾರತ್ ಬೆಂಜ್ ಲಾರಿಯ ಚಾಲಕ ಅರ್ಜುನ್ ಮೃತದೇಹ ಸುಮಾರು 72 ದಿನಗಳ ಬಳಿಕ ಟ್ರಕ್ ಸಹಿತ ಪತ್ತೆಯಾಗಿದೆ.
ಅವ್ಯಾಹತ ಭಾರೀ ಗಾಳಿ ಮಳೆಗೆ ಜುಲೈ 16ರಂದು ಶಿರೂರು ಬಳಿ ಭಾರೀ ಗುಡ್ಡ ಕುಸಿತ ಉಂಟಾಗಿತ್ತು. ಗುಡ್ಡ ಕುಸಿದಿಂದ ಲಾರಿ ಸಹಿತ ಚಾಲಕ ಅರ್ಜುನ್ ನಾಪತ್ತೆಯಾಗಿದ್ದ.
ಗಂಗಾವಳಿ ನದಿಯಲ್ಲಿ ಕಳೆದ 6 ದಿನಗಳಿಂದ ನಡೆಯುತ್ತಿರುವ ಡ್ರಜ್ಜಿಂಗ್ ಕಾರ್ಯಾಚರಣೆ ವೇಳೆ ಇಂದು ಮುಂಜಾನೆ ಡ್ರೆಜ್ಜಿಂಗ್ ಮಶಿನ್ಗೆ ಟ್ರಕ್ ಸಿಕ್ಕಿತು. ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ಅದಾಗಿತ್ತು. ಇದರೊಂದಿಗೆ ದುರಂತ ನಡೆದು ಸುಮಾರು 72 ದಿನಗಳ ಬಳಿಕ ಅರ್ಜುನ್ ಮೃತದೇಹ ದೊರೆತಂತಾಗಿದೆ.