ಇತ್ತೀಚಿನ ಸುದ್ದಿ
ಶಿರಾಡಿ ಘಾಟಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ; ಘನ ವಾಹನಗಳ ಯಾನಕ್ಕೆ ನಿಷೇಧ
18/07/2022, 10:03

ಮಂಗಳೂರು(reporterkarnataka.com): ರಾಜಧಾನಿ ಬೆಂಗಳೂರಿಗೆ ಕಡಲನಗರಿ ಮಂಗಳೂರನ್ನು ಜೋಡಿಸುವ ಶಿರಾಡಿ ಘಾಟಿಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ದೋಣಿಗಲ್ ಸಮೀಪದಲ್ಲಿ ಭೂಕುಸಿತ ಉಂಟಾಗಿದ್ದು, ಶಿರಾಡಿ ಘಾಟ್ ಸಣ್ಣ ವಾಹನಗಳಿಗೆ ಅವಕಾಶ ನೀಡಲಾಗಿದೆ
ಕಾರುಗಳು, ಜೀಪು, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು, ಅಂಬುಲೆನ್ಸ್ ಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ವೇಗದ ಮಿತಿಯನ್ನು ಗಂಟೆಗೆ ೩೦ ಕಿ ಮೀ ನಂತೆ, ಸಕಲೇಶಪುರ-ಆನೆಮಹಲ್-ಕ್ಯಾನಹಳ್ಳಿ-ಜಿನ್ನಳ್ಳಿ-ಕಡಗರವಳ್ಳಿ- ಮಾರನಹಳ್ಳಿಯ ಮಾರ್ಗವಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಮಂಗಳೂರಿನತ್ತ ಸಂಚರಿಸುವುದಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವುದಾದರೆ ಮಾರನಹಳ್ಳಿ- ಕಾಡುಮನೆ- ಹಾರ್ಲೆ-ಕೂಡಿಗೆ- ಆನೆಮಹಲ್- ಸಕಲೇಶಪುರ ಮಾರ್ಗವಾಗಿ ಬೆಂಗಳೂರಿನತ್ತ ಸಂಚರಿಸಬಹುದಾಗಿದೆ.
ಪರ್ಯಾಯ ಕಲ್ಪಿಸಲಾದ ಎರಡೂ ರಸ್ತೆಗ್ಲಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.