8:20 PM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಶನಿವಾರಸಂತೆ ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿ: ಖಾಸಗಿ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಕರವೇ ವಿರೋಧ; ಯಾಕೆ ಓದಿ ನೋಡಿ

07/08/2022, 10:26

ಮಡಿಕೇರಿ(reporterkarnataka.com):
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಣ್ಣಿನ ಶಿಬಿರ ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ ಖಾಸಗಿ ಆಸ್ಪತ್ರೆಯಿಂದ ಕಣ್ಣಿನ ಚಿಕಿತ್ಸೆ ನಡೆಸುವುದಕ್ಕೆ ತಮ್ಮ ವಿರೋಧ ಇರುವುದಾಗಿ ಕರವೇ ಹೇಳಿದೆ.

ಶಸ್ತ್ರ ಚಿಕಿತ್ಸೆಗೆ ಬರುವವರಿಗೆ ಸಂಧ್ಯಾ ಸುರಕ್ಷಾ ಕಾರ್ಡ್ ಇರಬೇಕು ಎಂದು ತಿಳಿಸಲಾಗಿದೆ.

ಶನಿವಾರಸಂತೆ ಮತ್ತು ಗೌಡಳ್ಳಿ ಗ್ರಾಮ ಪಂಚಾಯಿತಿ ಯಲ್ಲಿ ಹೆಚ್ಚಾಗಿ ಬಡವರು ಹಾಗೂ ಕೂಲಿ ಕಾರ್ಮಿಕರು ಇದ್ದು, ಇವರಿಗೆಲ್ಲರಿಗೂ ಬಿಪಿಎಲ್ ಕಾರ್ಡ್ ಇದೆ. ಸಂಧ್ಯಾ ಸುರಕ್ಷಾ ಕಾರ್ಡ್ ಇರುವವರು ಕಡಿಮೆ. ಸಂಧ್ಯಾಸುರಕ್ಷಾ ಇಲ್ಲದವರಿಗೆ ಕಡಿಮೆ ದರದಲ್ಲಿ ಆಪರೇಷನ್ ಮಾಡುತ್ತವೆಂದು ಖಾಸಗಿ ಆಸ್ಪತ್ರೆಯವರು ಹಣ ಪೀಕಿಸುತ್ತಾರೆ.ಈಕೆಲಸಕ್ಕೆ ನಮ್ಮ ವಿರೋಧ ಇದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದು ಕರವೇ ಹೇಳಿದೆ.


ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಅಂಧತ್ವ ನಿವಾರಣೆ ಕಾರ್ಯಕ್ರಮಗಳು ತುಂಬಾ ಇದೆ. ಇದನ್ನು ಸದ್ಬಳಕೆ ಮಾಡಿಕೊಂಡು ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ ಮಾಡಿಸಿ ಕೊಡಬಹುದಿತ್ತು. ಶನಿವಾರಸಂತೆ ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿಯಲ್ಲಿರುವ ಬಡ ಮತ್ತು ಕೂಲಿ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ಮಾತ್ರ ಇರುತ್ತದೆ. ಆದರೆ ಸಂಧ್ಯಾಸುರಕ್ಷಾ ಇರುವವರಿಗೆ ಮಾತ್ರ ಉಚಿತವಾಗಿ ಆಪರೇಶನ್ ಆಗುತ್ತದೆ . ಸಂಧ್ಯಾಸುರಕ್ಷಾ ಇಲ್ಲದೆ ವ್ಯಕ್ತಿಗಳು ಬಂದರೆ ಅವರ ಹತ್ತಿರ ಮಾತನಾಡಿ ಕಡಿಮೆ ದರದಲ್ಲಿ ಆಪರೇಷನ್ ಮಾಡಿಕೊಡುತ್ತೇವೆಂದು ಹಣ ಪೀಕುವ ಕೆಲಸ ಇಲ್ಲಿ ನಡೆದೇ ನಡೆಯುತ್ತದೆ. ಅದಲ್ಲದೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ತುಂಬಾ ಒಳ್ಳೆಯ ವೈದ್ಯರುಗಳಿದ್ದಾರೆ ಹಾಗೂ ಕಣ್ಣಿನ ಆಸ್ಪತ್ರೆ ಹೈಟೆಕ್ ಮಾಡಲಾಗಿದೆ. ಕೊಡಗು ಜಿಲ್ಲಾ ಆಸ್ಪತ್ರೆಯಲ್ಲಿ ಅಲ್ಲಿನ ವೈದ್ಯರುಗಳು ಹಾಗೂ ಸಿಬ್ಬಂದಿಗಳು ರೋಗಿಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮಡಿಕೇರಿ ಜಿಲ್ಲಾ  ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಹಾಗೂ  ಸಿಬ್ಬಂದಿಗಳಲ್ಲಿ ಉಚಿತ ಕಣ್ಣಿನ ಶಿಬಿರ ಮಾಡಿಸಿದರೆ ಬಡವರ್ಗದವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಈ ಯೋಜನೆ ತಲುಪುತ್ತದೆ.

ಅದೆಲ್ಲವನ್ನು ಬಿಟ್ಟು ಸರ್ಕಾರ ಅಧೀನದಲ್ಲಿರುವ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು  ಖಾಸಗಿ ಆಸ್ಪತ್ರೆಯ ಮೊರೆ ಹೋಗಿರುವುದು ಯಾಕೆ ಎಂಬ ಕರವೇ ಪ್ರಶ್ನಿಸಿದೆ.

ಶನಿವಾರಸಂತೆ ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿ ಶಿಬಿರದಲ್ಲಿ ಬಡವರಿಗೆ ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ  ಅವರು ಗ್ರಾಮ ಪಂಚಾಯಿತಿಯವರಿಗೆ ಸರಿಯಾದ ನಿರ್ದೇಶನ ಕೊಡಬೇಕಾಗಿ ಕರವೇ ಮನವಿ ಮಾಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು