ಇತ್ತೀಚಿನ ಸುದ್ದಿ
ಶೇ. 25ರಷ್ಟು ಮುಸ್ಲಿಂ ಇರೋ ಕಡೆ ಅಂಗನವಾಡಿ ಟೀಚರ್ ಗೆ ಉರ್ದು ಬೇಕೇಬೇಕು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶಕ್ಕೆ ಕರವೇ ಗರಂ
23/09/2024, 16:15
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail com
ಶೇ. 25ರಷ್ಟು ಮುಸ್ಲಿಂ ಇರೋ ಕಡೆ ಅಂಗನವಾಡಿ ಟೀಚರ್ ಗೆ ಉರ್ದು ಬೇಕೇಬೇಕು ಎನ್ನುವ ಸರಕಾರದ ಆದೇಶಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.
ಶೇ. 25ರಷ್ಟು ಮುಸ್ಲಿಂ ಇರೋ ಕಡೆ ಅಂಗನವಾಡಿ ಟೀಚರ್ ಗೆ ಕನ್ನಡದ ಜೊತೆ ಉರ್ದು ಭಾಷೆ ಬರಬೇಕು ಎಂದು ಮೂಡಿಗೆರೆ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ ಆದೇಶ ಹೊರಡಿಸಿದೆ.ಇದಕ್ಕೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಕರವೇ ಹಾಗೂ ಬಿಜೆಪಿ ಕಿಡಿ ಕಾರಿದೆ.
ನಿಗದಿಯ ಹುದ್ದೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆದೇಶವನ್ನು ಇಲಾಖೆ ನೀಡಿದೆ. ಇದಕ್ಕೆ ಪ್ರತಿಯಾಗಿ ಕರವೇ ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆ, ಈ ಆದೇಶದಿಂದ ಕನ್ನಡಕ್ಕೆ ಅನ್ಯಾಯವಾಗುತ್ತದೆ.
ಅಲ್ಪಸಂಖ್ಯಾತರನ್ನೇ ನೇಮಕ ಮಾಡಲು ಉರ್ದು ಭಾಷೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದೆ.
ಸರ್ಕಾರ ಕೂಡಲೇ ಈ ಆದೇಶವನ್ನ ಹಿಂಪಡೆಯಬೇಕು.
ಸರ್ಕಾರ ಆದೇಶ ಹಿಂಪಡೆದು ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.