4:37 PM Tuesday22 - July 2025
ಬ್ರೇಕಿಂಗ್ ನ್ಯೂಸ್
Chikkamagaluru | ಬಣಕಲ್ ಪ್ರೌಢ ಶಾಲೆಯಲ್ಲಿ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಪರಿಕಲ್ಪನೆಗೆ ಮಂಗಳ:… Kodagu | ಮಹಿಳೆಗೆ ಹಲ್ಲೆ ನಡೆಸಿ ಸರ ಅಪಹರಣ: ಗ್ರಾಮಸ್ಥರ ಕೈಗೆ ಸಿಕ್ಕಿ… ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕಂಗೆಟ್ಟಿದೆ: ಪಾವಗಡದಲ್ಲಿ ಮುಖ್ಯಮಂತ್ರಿ… ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ದವಾಗಿ ನಡೆಯಲಿ: ಮಾಜಿ… ಧರ್ಮಸ್ಥಳ ಪ್ರಕರಣ; ಎಸ್‌ಐಟಿ ರಚನೆ ಸ್ವಾಗತಾರ್ಹ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ Kodagu | ಮಂಜಡ್ಕ ನದಿಯಲ್ಲಿ ಬೈಕ್ ಸಹಿತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ… ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ…

ಇತ್ತೀಚಿನ ಸುದ್ದಿ

ಶತಮಾನೋತ್ಸವ ಕಂಡ ಪಾಣೆಮಂಗಳೂರು ಶಾರದೋತ್ಸವ: ನೆನಪಿನಾರ್ಥ ಭಾರತೀಯ ಅಂಚೆ ಲಕೋಟೆ ಬಿಡುಗಡೆ

17/10/2024, 14:57

ಜಯಾನಂದ ಪೆರಾಜೆ ಬಂಟ್ವಾಳ

info.reporterkarnataka@gmail.com

ಪಾಣೆಮಂಗಳೂರು ವಿಠಲ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಾರದೆಯ ಶತಮಾನೋತ್ಸವ ಬಹಳ‌ ವಿಜೃಂಭಣೆಯಿಂದ ನಡೆಯಿತು.
ನಾಡಹಬ್ಬ ದಸರಾ ಎಂಬ ದೈವಿಕ ಹಾಗೂ ಸಾಂಸ್ಕೃತಿಕ ಆಚರಣೆಯನ್ನು ನೂರು ವರುಷಗಳ ಕಾಲ ನಡೆಸಿಕೊಂಡು ಬರುವುದೆಂದರೆ ಸಣ್ಣ ವಿಷಯವಲ್ಲ. ಯೋಜನೆಗಳು‌ ಹಲವಿದ್ದರೂ ಆ ಹೊತ್ತಲ್ಲಿ ಕಾಯೇನ , ವಾಚಾ, ಮನಸಾ ತ್ರಿಕರಣ ಪೂರ್ವಕವಾಗಿ ದುಡಿವ ಭಕ್ತರೂ ಬೇಕೇಬೇಕು. ಸಂಘಟಕ ಸಹೋದರರಾದ ವಿನೋದ, ಪ್ರಮೋದರ ಹಾಗೂ ಶಾಲಾ ಶಿಕ್ಷಕರ ಶ್ರಮದಿಂದ ವಿದ್ಯಾದೇಗುಲದ ಮಾತೆಯ ಸೇವೆಗೆ ಹರಿದು ಬಂದ ಜನಸಾಗರವು ಸಂಘಟಕರನ್ನು ಮೂಕವಿಸ್ಮಿತರಾಗುವಂತೆ ಮಾಡಿದುದು ಸತ್ಯ.
ಪಾಣೆಮಂಗಳೂರು, ನರಿಕೊಂಬು, ಶಂಬೂರು, ಬಾಳ್ತಿಲ ಪರಿಸರದ ಪ್ರತಿ ಮನೆಯ ಪ್ರತಿಯೊಬ್ಬನೂ ಭಾಗವಹಿಸಿದ್ದರು. ಜಾಂಬಿಯಾ, ದುಬೈ, ನೆದರ್ ಲ್ಯಾಂಡ್, ಸಿಂಗಾಪುರ್, ಅಮೇರಿಕಾ ಕಡೆಯಿಂದ ಶತಮಾನದ ಶಾರದೆಯ ಕಣ್ತುಂಬಲು ಬಂದಿದ್ದರೆಂದರೆ ಪಾಣೆಮಂಗಳೂರು ಶಾರದೋತ್ಸವದ ಇತಿಹಾಸದ ಅರಿವಾದೀತು. ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಮೂಲೆಯಲ್ಲಿದ್ದವರೂ ಈ ವರ್ಷ ಶತಮಾನದ ದಸರಾ ಸಂಭ್ರಮದಲ್ಲಿ ಪಾಲ್ಗೊಂಡರು.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ, ಹರಿಕತೆ, ಭಜಕರ ಭಜನೆ ಎಲ್ಲವೂ ವೈವಿಧ್ಯಮಯವಾಗಿತ್ತು.
ಸಹಸ್ರಾರು ಮಂದಿಗೆ ಅನ್ನಸಂತರ್ಪಣೆಯೂ‌ ನಡೆಯಿತು. ರಾತ್ರಿ ಹನ್ನೆರಡುವರೆವರೆಗೂ ಪ್ರತಿದಿನ ಭಕ್ತರನ್ನು ಸೆಳೆಯುವ ಚುಂಬಕ ಶಕ್ತಿ ಶಾರದೆಗಿತ್ತೆಂದರೆ ತಪ್ಪಾಗಲಾರದು. ವರುಣನೂ ಕೃಪೆದೋರಿ ಮಳೆಸುರಿಸಿದನಾದರೂ ತೊಂದರೆಯಂತೂ ಮಾಡಿಲ್ಲ. ಶಾಲೆಯಲ್ಲಿ ಕಲಿಸಿದ ಅಧ್ಯಾಪಕರು ಮಾಡಿದ ಸೇವೆ, ಇಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳ ಶ್ರದ್ಧಾ ಭಾವನೆಯ ಕೊಡುಗೆ, ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಎಲ್ಲೂ ಕಾಣದಿದ್ದ ವೈಭವದ ಬೆಳಕಿನ ಅಲಂಕಾರ, ರಾತ್ರಿ ಮಧ್ಯಾಹ್ನವೆನ್ನದೆ ಅನ್ನ ಸಂತರ್ಪಣೆ , ಸಹಕರಿಸಿದ ಸ್ವಯಂಸೇವಕರು, ಹನ್ನೊಂದು ದಿನಗಳಲ್ಲೂ ದೇವಿಗೆ ನಾನಾ ರೂಪದ ಅಲಂಕಾರ, ಧಾರ್ಮಿಕ ಕಾರ್ಯಕ್ರಮದ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ‌ ಆಕರ್ಷಣೆಯಾಗಿತ್ತು. ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶತಮಾನದ ಶಾರದೆ ಉತ್ಸವದ ನೆನಪಿನಲ್ಲಿ ಭಾರತೀಯ ಅಂಚೆ ಲಕೋಟೆ ಬಿಡುಗಡೆ ಶಾಲೆಗೆ ಹೆಮ್ಮೆ ತಂದಿತು. ಅನುಪಮ ದೇಶಭಕ್ತ ಪದ್ಮವಿಭೂಷಣ ರತನ್ ಟಾಟಾರ ಮರಣದ ವಿಷಾದದ ವಾರ್ತೆ ತಿಳಿದು ಅವರನ್ನು ನೆನಪಿಸಿಕೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದು ಸಕಾಲಿಕವಾಗಿತ್ತು. ದೇವರ ಭಜನೆಯಲ್ಲಿ ಮಹಿಳೆಯರು ,ತಮ್ಮ ಗೆಳತಿಯರ ಜೊತೆಗೆ ತೊಡಗಿದ್ದು, ಶಾರದೆಯ ಸೇವೆಯ ಭಾಗ್ಯ ದೊರಕಿದ್ದು ಸುಮಾರು ನಲ್ವತ್ತು ವರ್ಷದ ಹಿಂದೆ ಜೊತೆಯಾಗಿ ಓದಿದ ಹೆಂಗಳೆಯರು ಶಾರದಾ ಮಾತೆಗೆ ಸೀರೆ ,ಹಣ್ಣುಹಂಪಲು ಸಮರ್ಪಿಸಿದರು. ಅನ್ನದಾನಕ್ಕೆ ಸೇವೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದದ್ದು ಸೌಭಾಗ್ಯವೇ ಸರಿ ಎಂದು ಬೆಂಗಳೂರು ನಿವಾಸಿಯಾಗಿರುವ ಗೀತಾ ನೆಟ್ಲರವರು ತಮ್ಮ‌ಅನುಭವ ಹಂಚಿಕೊಂಡಿದ್ದಾರೆ.ಬಾಲ್ಯದಲ್ಲಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಆ ಸಂದರ್ಭ,ವೇಷಗಳನ್ನು ನೋಡಿದಾಗ ಆಗುತ್ತಿದ್ದ ಸಂತಸ ಶೋಭಾಯಾತ್ರೆಯ ಸೊಬಗು ಇಂದಿಲ್ಲ. ಒಂದಷ್ಟು ಹುಲಿಗಳ ನರ್ತನ,
ತಾಸೆಯ ಅಬ್ಬರ, ಒಂದೊಂದು ಗುಂಪಿನಲ್ಲಿ ಮೂವತ್ತು ನಲವತ್ತು ಸಣ್ಣಪುಟ್ಟ ವೇಷಗಳು ಇಲ್ಲವೇ ಇಲ್ಲ.ಒಂಭತ್ತು ದಿನ ಮನೆಮನೆಗೆ ತೆರಳಿದ್ದ ಐದಾರು ಶಾರ್ದೂಲಗಳು ಸ್ಪರ್ಧೆ ದಿನ ಸದ್ದೆ ಇಲ್ಲ.ಚಂದಪ್ಪರ ಕರಡಿ,ಡೊಂಬಯ್ಯರ ಧರ್ಮ,ದಾಮೋದರರ ಹುಲಿಯನ್ನು ಮರೆಯುವಂತಿಲ್ಲ. ಬಣ್ಣಕ್ಕೂ ದುಡ್ಡೂ ಹೆಚ್ಚೆಂಬ ಕಾರಣವೋ ಹುಲಿಯ ಮೈಯಿಡೀ ಬಣ್ಣವಿಲ್ಲ.ಚಿರತೆ,ಹುಲಿ ಎಲ್ಲ ಜೊತೆಗೆ ಒಂದೇ ಗುಂಪಲ್ಲಿ!ಆದರೂ ಹುಲಿಗಳು (ಗುಂಪು) ಹೆಚ್ಚಿದ್ದರಿಂದ ಮನರಂಜನೆಗೆ ಮೋಸವಾಗಿಲ್ಲ.
ಚೆಂಡೆ ಗುಂಪೊಂದರ ಕುಣಿತ ಮುದಕೊಟ್ಟಿತು ಎಂದು ಅಂದಿನ ನೆನಪುಗಳನ್ನು ಸ್ಮರಿಸಿಕೊಂಡರು. ಅಂದಿನಿಂದ ಇಂದಿನವರೆಗೆ ವೇಷವನ್ನು ಹಾಕಿ ಬಂದವರನ್ನು ಗುರುತಿಸಬಹುದಿತ್ತು. ಹಾಗೆಯೆ ಶಾಲೆಯ ಶತಮಾನೋತ್ಸವದ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವುದೆಂದು ನಿರ್ಧರಿಸಿ ಮತ್ತೆ ಅದನ್ನು ಶಾರದೋತ್ಸವದ ಸಂದರ್ಭದಲ್ಲಿ ಮಾಡೋಣ ಎಂದು ಮುಂದೂಡಲಾಗಿತ್ತು. ಅದನ್ನು ಕೈಗೆತ್ತಿಕೊಳ್ಳದಿದ್ದುದು ನಿರಾಶೆ ಮೂಡಿಸಿತು.ನಿವೃತ್ತ ಶಿಕ್ಷಕ ಜಯಂತ ನಾಯಕ್ ಸರ್ ಒಳ್ಳೆಯ ಹೂರಣದ ಲೇಖನಗಳನ್ನು ಹಿರಿಯರಿಂದಪಡೆದುಕೊಂಡಿದ್ದರು.
ಮುದ್ರಣವಾಗಿದ್ದಿದ್ದರೆ ಖಂಡಿತ ಅದನ್ನು ನೆನಪಿನ ಹೊತ್ತಗೆಯಂತೆ ಮನೆಗೆ ಒಯ್ಯುವ ಬಕುತ‌‌ ಗಡಣ ಶಾರದೆಗೆ ಇತ್ತು.ಅದೇಕೆ‌ ಹಿಂಜರಿಯಿತು ಎಂದು ಗೀತಾರವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಹನ್ನೊಂದು ದಿನದ ಉತ್ಸವದ ಸಂಭ್ರಮದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿದ್ದರು.


ಕಲಿಸಿದ ಗುರುಗಳ ಭೇಟಿ, ಜೊತೆಗೆ ಕಲಿತ ಗೆಳೆಯ‌ಗೆಳತಿಯರ ಒಡನಾಟ ಮತ್ತೆ ಸಿಗುವಂತಾದದ್ದು, ಶತಮಾನದ ಶಾರದೋತ್ಸವದಲ್ಲಿ ಭಾಗಿಯಾದ ಭಾಗ್ಯ ಎಂಬುದು ಅನೇಕ ಹಿರಿಯರ ಮನದಾಳದ ಅಭಿಪ್ರಾಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು