ಇತ್ತೀಚಿನ ಸುದ್ದಿ
ಶಾಸಕರ ಹೀಗೊಂದು ಬ್ಯಾನರ್ ಪ್ರೇಮ…!: ರಸ್ತೆ ಗುಂಡಿ ಮುಚ್ಚಿಸಿದಕ್ಕೂ ಬ್ಯಾನರ್ ಹಾಕಿಸಿಕೊಂಡ ಜನಪ್ರತಿನಿಧಿ!
20/12/2023, 11:13
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹೊಸ ರಸ್ತೆ ಮಾಡಿಸಿ ಬ್ಯಾನರ್ ಹಾಕಿಸಿಕೊಂಡ್ರಾ ಓಕೆ… ಒಪ್ಪೋಣ… ಒಳ್ಳೆದು… ಸಂತೋಷ…ಆದರೆ ರಸ್ತೆಗೆ ಬಿದ್ದ ಗುಂಡಿ ಮುಚ್ಚಿಸಿ ಬ್ಯಾನರ್ ಹಾಕಿಸಿಕೊಂಡ್ರೆ ಹೇಗೆ?
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರ ಬ್ಯಾನರ್ ಪ್ರೇಮಕ್ಕೆ ಜನರು ಬಿದ್ದು ಬಿದ್ದು ನಗುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚಿಸಿದ್ದು ಪಟ್ಟಣ ಪಂಚಾಯಿತಿಯ ಹಣದಲ್ಲಿ. ಆದರೆ, ಬ್ಯಾನರ್ ಹಾಕಿಸಿಕೊಂಡಿದ್ದು ಮಾತ್ರ ಶಾಸಕ ಟಿ.ಡಿ. ರಾಜೇಗೌಡ.
6 ವರ್ಷದಿಂದ ಕೊಪ್ಪ ಪ.ಪಂ.ಗೆ ಒಂದು ರೂಪಾಯಿ ಅನುದಾನ ನೀಡದ ಶಾಸಕರ ಬ್ಯಾನರ್ ಪ್ರೇಮಕ್ಕೆ ಕೊಪ್ಪ ಜನತೆ ನಗುತ್ತಿದ್ದಾರೆ. ಇದು ಕೇವಲ ಒಬ್ಬ ರಾಜೇಗೌಡರ ಕತೆಯಲ್ಲ, ಇಂತಹ ಸಾಕಷ್ಟು ಶಾಸಕರು ಇಡೀ ರಾಜ್ಯದಲ್ಲಿದ್ದಾರೆ. ಎಲ್ಲವೂ ಸದ್ಯ ಬಯಲಾಗಲಿದೆ.