ಇತ್ತೀಚಿನ ಸುದ್ದಿ
ಕ್ರೈಸ್ತ ಜನಾಂಗದ ವಿವಾಹ ನೋಂದಣಾಧಿಕಾರಿಯಾಗಿ ಶಾಲೆಟ್ ಪಿಂಟೋ ಆಯ್ಕೆ: ಕಾಂಗ್ರೆಸ್ ಮುಖಂಡೆ ಶಾಂತಲಾ ಗಟ್ಟಿ ಶುಭ ಹಾರೈಕೆ
21/03/2025, 19:08

ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಲೆಟ್ ಪಿಂಟೋ ಅವರು ಕರ್ನಾಟಕ ಸರಕಾರದ ವತಿಯಿಂದ ಕ್ರೈಸ್ತ ಜನಾಂಗದ ವಿವಾಹ ನೋಂದಣಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಶಾಲೆಟ್ ಪಿಂಟೋ ಅವರಿಗೆ ಕಾಂಗ್ರೆಸ್ ಮುಖಂಡರಾದ ಶಾಂತಲಾ ಗಟ್ಟಿ ಅವರು ಶುಭ ಹಾರೈಸಿದ್ದಾರೆ.
ನಿಮಗೆ ಹಾರ್ದಿಕ ಅಭಿನಂದನೆಗಳು. ವೃತ್ತಿ ಜೀವನದಲ್ಲಿ ನಿಮಗೆ ದೊರೆತ ಯಶಸ್ಸಿನಂತೆ ರಾಜಕೀಯವಾಗಿಯೂ ತಾವು ಉನ್ನತೋನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದು
ಶಾಂತಲಾ ಗಟ್ಟಿ ಅವರು ಹಾರೈಸಿದ್ದಾರೆ.