ಇತ್ತೀಚಿನ ಸುದ್ದಿ
ಸೆ.22ರಿಂದ ಅ.2: ವಿಶ್ವವಿಖ್ಯಾತ ಮಂಗಳೂರು ದಸರಾ ಸಂಭ್ರಮ; ಪ್ರತಿ ದಿನ ಹೊಸ ವೈಭವ
26/08/2025, 23:11

ಮಂಗಳೂರು(reporterkarnataka.com): ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ವಿಶ್ವವಿಖ್ಯಾತ ಮಂಗಳೂರು ದಸರಾ ಹಬ್ಬ ಸೆ.22ರಿಂದ ಅ.2 ರವರೆಗೆ ನಡೆಯಲಿದ್ದು, ಈ ಬಾರಿ ದಿನಕ್ಕೊಂದು ವೈವಿಧ್ಯತೆಯೊಂದಿಗೆ ಮಂಗಳೂರು ದಸರಾ ವೈಭವ ಮೂಡಿಬರಲಿ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜರಿ ಅವರ ಮಾರ್ಗದರ್ಶನದಲ್ಲಿ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ. ಕುದ್ರೋಳಿ ಕ್ಷೇತ್ರದ ದಸರಾ ಕೇವಲ ಹಬ್ಬವಲ್ಲ, ಅದು ಆಧ್ಯಾತ್ಮಿಕತೆ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಸಮಾಗಮವಾಗಿದೆ. ಗಣಪತಿ, ಆದಿಶಕ್ತಿ ಸಹಿತವಾಗಿ ಶಾರದೆ ಮಾತೆ, ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಎಲ್ಲ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು, ಗಣಹೋಮ, ಚಂಡಿಕಾ ಯಾಗ ಹೋಮಹವನಗಳು ನಡೆಯಲಿದ್ದು ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು.
*ವೈವಿಧ್ಯಮಯ ಸ್ಪರ್ಧೆಗಳು:* ದಸರಾದಲ್ಲಿ ಈ ಬಾರಿ ವೈವಿಧ್ಯತೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿ. ವಿಜೇತರಿಗೆ ಒಟ್ಟು 1 ಲಕ್ಷ ರೂ. ಬಹುಮಾನ ಸಿಗಲಿದೆ. ಬಹುಭಾಷಾ ಕವಿಗೋಷ್ಠಿ (ತುಳು ಮತ್ತು ಕನ್ನಡ), ಮಕ್ಕಳ ದಸರಾದಲ್ಲಿ ಒಂದು ದಿನದ ಕಾರ್ಯಕ್ರಮ ಸ್ಪರ್ಧೆಗಳ ಆಯೋಜಿಸಲಾಗಿದೆ. ಕಿನ್ನಿಪಿಲಿ ಸ್ಪರ್ಧೆ (೪ವರ್ಷದೊಳಗಿನ, ೪-೮ವರ್ಷದ ಮಕ್ಕಳಿಗೆ), ಭಕ್ತಿಗೀತೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮುದ್ದು ಶಾರದೆ ಸ್ಪರ್ಧೆ ನಡೆಯಲಿದೆ.
*ವಿಶೇಷ ಆಕರ್ಷಣೆಗಳು:* ಪ್ರತಿದಿನ ೩ ತಂಡಗಳ ಕಲಾ ಪ್ರದರ್ಶನ, ಹಬ್ಬದ ಪ್ರತಿ ದಿನ ಹೊಸ ವೈಭವ, ಜನಪದ, ಯಕ್ಷಗಾನ, ಸಂಗೀತ, ಸಾಹಿತ್ಯ, ನೃತ್ಯ – ಎ ಕಲಾ ಪ್ರಕಾರಗಳ ಸಂಕಲನ ಗಮನಸೆಳೆಯಲಿದೆ. ಒಟ್ಟಾರೆ 31 ತಂಡಗಳಲ್ಲಿ 700-800 ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ.ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಕಲಾವಿದರ ತಂಡಗಳು ಆಗಮಿಸುತ್ತಿದ್ದು, ಮಂಗಳೂರು ದಸರಾ ಅಂತರ ರಾಜ್ಯ ಮಟ್ಟದ ಸಾಂಸ್ಕೃತಿಕ ಸೇತುವಾಗಲಿದೆ ಎಂದರು.
*ಸಾಂಸ್ಕೃತಿಕ ವೈಭವ:* ಕಲೆ ಮತ್ತು ಸಂಸ್ಕೃತಿಯ ಎಲ್ಲ ರೂಪಗಳು ಒಂದೇ ವೇದಿಕೆಯಲ್ಲಿ ಮೂಡಿಬರಲಿದ್ದು ಭರತನಾಟ್ಯ, ವೀಣಾ ವಾದನಜನಪದ ಕಲಾಪ್ರಕಾರಗಳು, ಹರಿಕಥೆ, ತಾಳಮದ್ದಳೆ, ಯಕ್ಷಗಾನ, ಯಕ್ಷಗಾನ ನಾಟ್ಯ ಪುಂಡು ವೇಶ ವೈಭವ, ನೃತ್ಯ ರೂಪಕಿ, ಜದು ಪ್ರದರ್ಶನ, ಆಳ್ವಾಸ್ ಸಾಂಸ್ಕೃತಿಕ ವೈಭವ, ಎಸ್‌ಡಿಎಂ ಕಲಾ ವೈಭವ ಮೆರುಗು ನೀಡಲಿದೆ.
*ಅಸಾಮಾನ್ಯ ಸ್ತ್ರೀ ಪ್ರಶಸ್ತಿ ಪ್ರದಾನ:*
ನಾರಿಯೇ ಶಕ್ತಿಯಾಗಿರುವಾಗ ದಸರಾದ ಈ ಅಪೂರ್ವ ಘಳಿಗೆಯಲ್ಲಿ ಎಲೆಮರೆಯ ಕಾಯಿಯಾಗಿ, ಸೇವೆಯೆ ಪರಮ ಗುರಿಯೆಂದು ಕರ್ತವ್ಯ ನಿರ್ವಹಿಸುತ್ತಿರೋ ಮಹಿಳಾ ಸಾಧಕರನ್ನ ಸನ್ಮಾನಿಸಲಾಗುವುದು. ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳನ್ನು ಕೂಡ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಪದ್ಮರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್. ಜೈರಾಜ್ ಸೋಮಸುಂದರ್, ಪ್ರಧಾನ ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಟ್ರಸ್ಟಿಗಳಾದ ಕೃತಿನ್ ಧೀರಜ್ ಅಮೀನ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಬಿ.ಜಿ. ಸುವರ್ಣ, ಸದಸ್ಯರಾದ ಚಂದನ್‌ದಾಸ್, ವಾಸುದೇವ ಕೋಟ್ಯಾನ್ ಉಪಸ್ಥಿತರಿದ್ದರು.