ಇತ್ತೀಚಿನ ಸುದ್ದಿ
ಎಸ್ ಸಿಐ ಮಂಗಳೂರು ಘಟಕದ ಅಧ್ಯಕ್ಷ ಹರಿಪ್ರಸಾದ್ ರೈ ಮದುವೆ ವಾರ್ಷಿಕೋತ್ಸವ: 100 ಕೆಜಿ ಅಕ್ಕಿ, ನಗದು ವಿತರಣೆ
27/12/2021, 20:56

ಮಂಗಳೂರು(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ ಅಧ್ಯಕ್ಷ ಜಿ.ಕೆ. ಹರಿಪ್ರಸಾದ್ ರೈ ಕಾರಮೊಗರಗುತ್ತು ಅವರ ಮದುವೆ ವಾರ್ಷಿಕೋತ್ಸವ ಪ್ರಯುಕ್ತ 100 ಕೆ.ಜಿ. ಅಕ್ಕಿಯನ್ನು ವಿತರಿಸಲಾಯಿತು.
ಅಪಘಾತಕ್ಕೀಡಾಗಿ ಬೆನ್ನು lಮೂಳೆ ಮುರಿತಕ್ಕೊಳಗಾಗಿ ಕಳೆದ 17 ವರ್ಷಗಳಿಂದ ಹಾಸಿಗೆ ಹಿಡಿದಿರುವ ಉರ್ವ ಮಾರಿಗುಡಿ ದೇವಸ್ಥಾನದ ಬಳಿಯ ನಿವಾಸಿ ಸದಾಶಿವ ಶೆಟ್ಟಿ ಅವರ ಕುಟುಂಬದವರಿಗೆ ಒಂದು ತಿಂಗಳ ಅಕ್ಕಿ ಹಾಗೂ ನಗದು, ಸುಮಾರು 700 ಕ್ಕಿಂತಲೂ ಹೆಚ್ಚು ಬೀದಿ ನಾಯಿಗಳನ್ನು ಸಾಕುತ್ತಿರುವ ಬಲ್ಲಾಳ್ ಬಾಗ್ ನ ರಜನಿ ಶೆಟ್ಟಿ, ಅಪಘಾತದಿಂದ ಕಳೆದ ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ ಗ್ರೇಸಿ ಡಿಕುನ್ಹ, ವೃದ್ಧಾಪ್ಯದಿಂದ ಮನೆಯಲ್ಲಿರುವ ಮೊಂತು ಕುಟುಂಬಕ್ಕೆ ಹಾಗೂ 10 ಕುಟುಂಬದವರಿಗೆ ಅಕ್ಕಿಯನ್ನು ವಿತರಿಸಲಾಯಿತು. ಘಟಕದ ಪ್ರಥಮ ಮಹಿಳೆ ದಿವ್ಯ ಹೆಚ್.ಪಿ. ರೈ, ಕಾರ್ಯದರ್ಶಿ ಶಾಲಿನಿ ಪ್ರಶಾಂತ್ ಸುವರ್ಣ, ಕೋಶಾಧಿಕಾರಿ ರಂಜಿತ್ ಶೆಟ್ಟಿ, ಸದಶನಂದ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.