ಇತ್ತೀಚಿನ ಸುದ್ದಿ
ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆಯಲ್ಲಿ ಭ್ರಷ್ಟಾಚಾರ ವಾಸನೆ: ದಸಂಸ ಎಚ್ಚರಿಕೆ
29/06/2021, 09:36
ವರದಿ: ಅಮರೇಶ್ ಲಿಂಗಸುಗೂರು ರಾಯಚೂರು
info.reporterkarnataka@gmail.com
ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳಿಗಳ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಸರಕಾರದಿಂದ ಶೇ. 25 ಅನುದಾನದಲ್ಲಿ ಸಿಗುವ ಪಠ್ಯ ಪುಸ್ತಕವನ್ನು ವಿತರಣೆಯಲ್ಲಿ ವಿಳಂಬವಾಗಿದ್ದು ಈ ಕೂಡಲೇ ನೀಡಬೇಕೆಂದು ಪಿಡಿಓ ಹಾಗೂ ಅಧ್ಯಕ್ಷರಿಗೆ ಗ್ರಾಮದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಹಿಂದೆ ಪುಸ್ತಕ ನೀಡುವುದಾಗಿ ಭರವಸೆ ನೀಡಿ ಬೇಕಾಬಿಟ್ಟಿ 700 – 1500 ರೂಪಾಯಿ ನೀಡಲಾಗಿದ್ದು ಅಲ್ಲದೆ, ಬುಕ್ ಸ್ಟಾಲ್ ನವರ ಜತೆಗೆ ಒಳಒಪ್ಪಂದ ಮಾಡಿಕೊಂಡು ಭ್ರಷ್ಟಾಚಾರ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದೆ. ಈ ಬಾರಿಯೂ ಇದೇ ರೀತಿಯ ಭ್ರಷ್ಟಾಚಾರದ ವಾಸನೆ ಕಂಡು ಬಂದಿದ್ದು ಹಾಗೂ ಪುಸ್ತಕದ ವಿತರಣೆಯಲ್ಲಿ ಅಸಡ್ಡೆ ತೋರಿಸಿದರೆ ತೀವ್ರ ಹೋರಾಟ ನಡೆಸುವುದಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಚ್ಚರಿಸಿದರು.
ಪಿಯುಸಿ ವಿದ್ಯಾರ್ಥಿಗಳಿಗೆ 2000 ನೀಡಬೇಕು, ಪದವಿ ವಿದ್ಯಾರ್ಥಿಗಳಿಗೆ 2000 ನೀಡಬೇಕು, ವೃತ್ತಿಪರ ವಿದ್ಯಾರ್ಥಿಗಳಿಗೆ 5000 ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಯಲ್ಲಾಲಿಂಗ ಕುಣೆಕೆಲ್ಲೂರು (ತಾಲೂಕು ಅಧ್ಯಕ್ಷರು ಮಸ್ಕಿ) , ಗ್ರಾಮ ಪಂಚಾಯತ್ ಮೌನೇಶ್ ಕುಣೆಕೆಲ್ಲೂರು , ಸಿದ್ದಪ್ಪ ಕುಣೆಕೆಲ್ಲೂರು , ಹುಲುಗಪ್ಪ ಕುಣೆಕೆಲ್ಲೂರು , ವೆಂಕಟೇಶ ನಾಯಕ , ಚಂದ್ರಶೇಖರ , ನಾಗರಾಜ , ಬಸವರಾಜ , ಅಭಿ , ಯಲ್ಲಪ್ಪ ಎ., ದುರುಗಪ್ಪ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.