ಇತ್ತೀಚಿನ ಸುದ್ದಿ
ಸಾಣೂರು: ಬೈಕ್ – ಕಾರು ಭೀಕರ ಅಪಘಾತ; ಸವಾರ ಸಾವು
07/02/2022, 22:21

ಕಾರ್ಕಳ(reporterkarnataka.com) : ಬೈಕ್- ಕಾರು ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಸೀಡ್ ಫಾರ್ಮ್ ಬಳಿ ನಡೆದಿದೆ.
ಮೂಡುಬಿದಿರೆ ಮೂಡು ಮಾರ್ನಾಡಿನ ತಂಡ್ರಕೆರೆ ಹೊಲಜಾಲ್ ಬೈಲ್ ದಿನೇಶ್ ಗೌಡ (೩೨) ಮೃತಪಟ್ಟವರು. ಕಾರ್ಕಳದಿಂದ ಮೂಡುಬಿದರೆಯ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್ ಮೂಡಬಿದ್ರೆಯಿಂದ ಕಾರ್ಕಳ ಕಡೆಗೆ ರಾಜೀವ್ ಎಂಬುವವರ ಚಲಾಯಿಸುತ್ತಿದ್ದ ಕಾರಿನ ಮಧ್ಯೆ ಅಫಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಬೈಕ್ ಸವಾರನಿಗೆ ತೀವ್ರವಾದ ಪೆಟ್ಟಾಗಿತ್ತು . ಚಿಕಿತ್ಸೆಗಾಗಿ ತಕ್ಷಣವೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ . ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.