ಇತ್ತೀಚಿನ ಸುದ್ದಿ
ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ: ಶಾಸಕ ವೇದವ್ಯಾಸ ಕಾಮತ್
10/11/2022, 22:31

ಮಂಗಳೂರು(reporterkarnataka.com): ಹಿಂದೂ ಎಂಬುದು ಅಶ್ಲೀಲ ಪದ ಎಂದಿರುವ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ಅಮಾನತು ಮಾಡಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಒತ್ತಾಯಿಸಿದ್ದಾರೆ.
ಕಾಂಗ್ರೆಸಿಗರಿಗೆ ಹಿಂದೂ ಎನ್ನುವ ಪದದಿಂದ ಅಲರ್ಜಿ ಉಂಟಾಗಿದೆ. ಈ ಹಿಂದೆ ಸಿದ್ಧರಾಮಯ್ಯನವರು ತಿಲಕ ಧರಿಸಿದವರನ್ನು ಕಂಡರೆ ಭಯವಾಗುತ್ತದೆ ಎಂದಿದ್ದರು. ಮಾಂಸಾಹಾರ ಸೇವಿಸಿ ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಭೇಟಿ ಕೊಟ್ಟಾಗಲೂ ಉಡಾಫೆಯಿಂದ ವರ್ಸಿದ್ದರು ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಹಿಂದೂ ಧಾರ್ಮಿಕ ಭಾವನೆಗಳಿಗೆ ವಿರೋಧ ವ್ಯಕ್ತಪಡಿಸುವ ಕಾಂಗ್ರೆಸ್ ನಾಯಕರಿಗೆ ಒಂದು ಹಿಂದೂ ಸಮಾಜವನ್ನು ಅವಹೇಳನ ಮಾಡುವ ಚಾಳಿ ಹಿಡಿದಿದೆ. ಸತೀಶ್ ಜಾರಕಿಹೊಳಿ ಅವರು ಕೇವಲ ಕ್ಷಮೆ ಕೇಳುವುದರಿಂದ ಎಲ್ಲವೂ ಸರಿಪಡಿಸಲಾಗುವುದಿಲ್ಲ. ಕಾಂಗ್ರೆಸ್ ನಾಯಕರಿಗೆ ನಿಜವಾಗಿಯೂ ಹಿಂದೂ ಧರ್ಮದ ಮೇಲೆ ಗೌರವವಿದ್ದರೆ ಕಾಂಗ್ರೆಸ್ ಕಾರ್ಯಾಧ್ಯಕ್ಷರನ್ನು ವಜಾಗೊಳಿಸಲಿ ಎಂದು ಶಾಸಕ ಕಾಮತ್ ಸವಾಲು ಹಾಕಿದ್ದಾರೆ.