3:57 AM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಸರ್ವ ಋತುಗಳಲ್ಲಿ ಸೋರುವ ಮ್ಯಾನ್ ಹೋಲ್!: ವಿಶೇಷವೆಂದರೆ ಇದು ಪಾಲಿಕೆ ಕಚೇರಿಗೆ ಕೂಗಳತೆ ದೂರದಲ್ಲಿದೆ!!

02/06/2022, 12:32

ಚಿತ್ರಗಳು : ಗಣೇಶ್ ಅದ್ಯಪಾಡಿ
ಮಂಗಳೂರು(reporterkarnataka.com):

ಮಳೆ ಬಂದಾಗಲೆಲ್ಲ ಚಿಮ್ಮುವ ಮ್ಯಾನ್ ಹೋಲ್ ಗಳನ್ನು ನಾವು ಕಂಡಿದ್ದೇವೆ. ಆದರೆ ಮಳೆ ಮತ್ತು ಬಿಸಿಲು ಎರಡೂ ಸಂದರ್ಭದಲ್ಲಿಯೂ ಸೋರುವ ಮ್ಯಾನ್ ಹೋಲ್ ಬಹಳ ಅಪರೂಪ. ಅಂತಹ ಅಪರೂಪದಲ್ಲಿ ಅಪರೂಪವಾದ ಮ್ಯಾನ್ ಹೋಲ್ ವೊಂದ ನಗರದ ಕೆಎಸ್ಸಾರ್ಟಿಸಿ ಬಳಿಯ ಭಾರತ್ ಮಾಲ್ ಎದುರುಗಡೆ ಇದೆ.

ಇದು ವರ್ಷದ ಎಲ್ಲ ಋತುಗಳಲ್ಲಿಯೂ ಸೋರುತ್ತಲೇ ಇರುತ್ತದೆ. ಇದು ಹೊಸ ಕೇಸ್ ಏನೂ ಅಲ್ಪ. ಹಲವು ವರ್ಷಗಳಿಂದ ವಾಸಿಯಾಗದ ರೋಗ. ಈ ಹಿಂದೆ ಹೀಗೆ ಸೋರುತ್ತಾ ರಸ್ತೆಯಲ್ಲೇ ಕೊಳದ ತರಹ ನಿರ್ಮಾಣವಾದಾಗ ಅಂದಿನ ಮೇಯರ್ ಕವಿತಾ ಸನಿಲ್ ಅವರು ದುರಸ್ತಿ ಮಾಡಿಸಿದ್ದರು. ಸ್ವಲ್ಪ ಸಮಯ ಯಾವುದೇ ಸಮಸ್ಯೆ ಇರಲಿಲ್ಲ. ಕೆಲವು ತಿಂಗಳ ನಂತರ ಇದ್ದಕ್ಕಿದ್ದಂತೆ ಮತ್ತೆ ಸೋರಲು ಆರಂಭವಾಯಿತು. ಮಂಗಳೂರು ಮಹಾನಗರಪಾಲಿಕೆಯಲ್ಲಿ ಸಾಕಷ್ಟು ಎಂಜಿನಿಯರ್ ಗಳಿದ್ದಾರೆ. ಪಾಲಿಕೆಗೆ ಎಕ್ಸ್‌ಪರ್ಟ್ ಸಲಹೆಗಾರರಿದ್ದಾರೆ. ಆದರೆ ಇವೆಲ್ಲವೂ ವ್ಯರ್ಥ. ಪೈಪ್ ಎಲ್ಲಿಗೆ ಜೋಡಿಸಬೇಕು, ನೀರು ಹರಿಯಲು ಎಲ್ಲಿಗೆ ಬಿಡಬೇಕು ಎನ್ನುವ ಪ್ರಾಥಮಿಕ ನಾಲೇಜ್ ಇವರಿಗಿಲ್ಲವೇ ಎಂದು ಜನರು ಪ್ರಶ್ನಿಸುತ್ತಾರೆ.

ಮಂಗಳೂರು ಈಗಾಗಲೇ ಹಲವು ವರ್ಷಗಳಿಂದ ಮಲೇರಿಯಾದಿಂದ ತತ್ತರಿಸಿರುವುದು ಇಡೀ ಲೋಕಕ್ಕೆ ಗೊತ್ತಿದೆ. ಅದರ ಜತೆಗೆ ಡೆಂಗ್ಯೂ ಹಾವಳಿಯೂ ಇದೆ. ಇಷ್ಟೆಲ್ಲ ರಿಸ್ಕ್ ಗಳ ನಡುವೆ ಕಡಲನಗರಿಯ ಜನತೆ ಬದುಕು ಕಟ್ಟಿಕೊಂಡಿದ್ದಾರೆ ಎಂದು ಗೊತ್ತಿದ್ದೂ ಪಾಲಿಕೆ ಮಾತ್ರ ಕ್ಯಾರೇ ಮಾಡುತ್ತಿಲ್ಲ. ವಿಶೇಷವೆಂದರೆ ಮಹಾನಗರಪಾಲಿಕೆ ಕಚೇರಿ ಇಲ್ಲಿಂದ ಕೂಗಳತೆ ದೂರದಲ್ಲಿದೆ. ಭಾರತ್ ಮಾಲ್ ಎದುರು ನಿಂತರೆ ಪಾಲಿಕೆ ಕಟ್ಟಡದಲ್ಲಿರುವ ಗಡಿಯಾರ ಸಮಯವನ್ನು ನಿಖರವಾಗಿ ಹೇಳಬಹುದಾಗಿದೆ. ಮೇಯರ್ ಹಾಗೂ ಪಾಲಿಕೆ ಕಮಿಷನರ್ ಈ ದಾರಿಯಾಗಿ ದಿನಕ್ಕೆ ನಾಲ್ಕಾರು ಬಾರಿ ಸರಕಾರಿ ಕಾರಿನಲ್ಲಿ ಗ್ಲಾಸ್ ಬಂದ್ ಮಾಡಿ ಓಡಾಡುತ್ತಾರೆ. ಕೆಸರು ಎರಚುವುದಿಲ್ಲ, ವಾಸನೆ ಬರುವುದಿಲ್ಲ.!

ಇತ್ತೀಚಿನ ಸುದ್ದಿ

ಜಾಹೀರಾತು