ಇತ್ತೀಚಿನ ಸುದ್ದಿ
ಸರಕಾರಿ ಸಹಾಯಧನ ಪಡೆಯಲು ಇನ್ನು ಮುಂದೆ ಆಧಾರ ಕಾರ್ಡ್ ಕಡ್ಡಾಯ: ಪ್ರಾಧಿಕಾರ ಹೊಸ ಆದೇಶp
17/08/2022, 18:47

ಹೊಸದಿಲ್ಲಿ(reporterkarnataka.com): ಇನ್ನು ಮುಂದೆ ಸರ್ಕಾರಿ ಸಹಾಯಧನ ಪಡೆಯಲು ಆಧಾರ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಪ್ರಾಧಿಕಾರ ಹೊಸ ಆದೇಶ ಹೊರಡಿಸಿದೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಈ ಕುರಿತಾಗಿ ಹೊಸ ಸುತ್ತೋಲೆ ಹೊರಡಿಸಿದೆ. ಕೇಂದ್ರದ ಎಲ್ಲ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಹೊರಡಿಸಿದ ಸುತ್ತೋಲೆ ಪ್ರಕಾರ ಸರ್ಕಾರದ ಸಹಾಯಧನ ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಲಾಗಿದೆ.