11:39 PM Monday2 - December 2024
ಬ್ರೇಕಿಂಗ್ ನ್ಯೂಸ್
ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರಗೆ ಮುಖ್ಯಮಂತ್ರಿ ಮೆಚ್ಚುಗೆ ಫೆಂಗಲ್ ಚಂಡಮಾರುತ: ದ.ಕ., ಉಡುಪಿ ಜಿಲ್ಲೆಯ ಶಾಲೆ ಹಾಗೂ ಪಿಯು ಕಾಲೇಜಿಗಳಿಗೆ ನಾಳೆ… ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ವೈಭವದ ಲಕ್ಷದೀಪೋತ್ಸವ ಸಂಪನ್ನ: ದಾಖಲೆ ಸಂಖ್ಯೆಯಲ್ಲಿ ನೆರೆದ… ಸಂಘ ಪರಿವಾರದ ಕೈಗೊಂಬೆಯಂತೆ ವರ್ತಿಸುವ ಪೊಲೀಸ್ ಕಮಿಷನರ್ ವರ್ಗಾಯಿಸಿ: ಪ್ರತಿಭಟನೆಯಲ್ಲಿ ಮುನೀರ್ ಕಾಟಿಪಳ್ಳ… ನಿಡುವಾಳೆ ಶ್ರೀ ರಾಮೇಶ್ವರ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ: ಬೆಳಗಿದ 3 ಸಾವಿರಕ್ಕೂ ಹೆಚ್ಚು… ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅರಣ್ಯ ಒತ್ತುವರಿ: ರೈತ ಸಂಘದಿಂದ ಆರೋಪ;… ನನ್ನ ವಿರುದ್ಧ ಏನೇ ದಾಖಲೆಗಳಿದ್ದರೂ ಯತ್ನಾಳ್ ಬಿಡುಗಡೆ ಮಾಡಲಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಂಜನಗೂಡು: ಪವಾಡ ಪುರುಷ ಶ್ರೀ ಮಹದೇವ ತಾತ ಗದ್ದುಗೆಯಲ್ಲಿ ವಿಶೇಷ ಪೂಜೆ ಕಳಪೆ ಔಷಧ ಕೊಟ್ಟು ಸರಕಾರವೇ ಬಾಣಂತಿಯರ ಕೊಂದಿದೆ: ಪ್ರತಿಪಕ್ಷದ ನಾಯಕ ಆರ್‌. ಅಶೋಕ್… ಮಂಗಳೂರನ್ನು ರಾಜ್ಯದ 2ನೇ ನಗರವಾಗಿ ಅಭಿವೃದ್ಧಿಪಡಿಸುವ ಕನಸಿದೆ: ಗೃಹ ಸಚಿವ ಡಾ. ಪರಮೇಶ್ವರ್

ಇತ್ತೀಚಿನ ಸುದ್ದಿ

ಸರಕಾರಿ ಕೆಲಸ ಜನ ಸೇವೆಯೆಂದು ತಿಳಿದು ಕೆಲಸ ಮಾಡಬೇಕು: ಆರಗ ಜ್ಞಾನೇಂದ್ರ

23/10/2024, 13:55

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@ gmail.com

ಸರ್ಕಾರಿ ಕಚೇರಿಯಲ್ಲಿ ಬಲಾಢ್ಯರು ತಮ್ಮ ಕೆಲಸಗಳನ್ನು ಪ್ರಭಾವ ಬೀರಿ ಮಾಡಿಸಿಕೊಳ್ಳುತ್ತಾರೆ. ಆದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಇದು ಕಷ್ಟ ಸಾಧ್ಯ. ಹಾಗಾಗಿ ಸರ್ಕಾರಿ ಕಚೇರಿಗೆ ಬರುವ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಕೆಲಸ ಮಾಡಿ ಕೊಡುವ ಮನಸ್ಸು ಇದ್ದರೆ ಮಾತ್ರ ಅಂತಹ ಅಧಿಕಾರಿ ಜನ ಮನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಗ್ರಾಮೀಣಾಭಿವೃದ್ಧಿ ಭವನದಲ್ಲಿ ಶನಿವಾರ ಮಾತನಾಡಿ ಇತ್ತೀಚಿಗೆ ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿ ರಾತ್ರಿ ಲಾಡ್ಜ್ ನಲ್ಲಿ ಉಳಿದು ಮಲಗಿದ್ದಲ್ಲಿಯೇ ದೈವಾಧೀನರಾದ ತಹಶೀಲ್ದಾರ್ ಜಕ್ಕಣ್ಣ ಗೌಡರ್ ರವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೇವಲ ಒಂದು ವರ್ಷಗಳ ಕಾಲ ತಾಲೂಕಿನ ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸಿದ ಜಕ್ಕಣ್ಣನವರು ಜನಪರ ಸ್ನೇಹಮಯಿ ವ್ಯಕ್ತಿಯಾಗಿದ್ದರು. ಬಯಲುಸೀಮೆಯ ಗದಗ ಊರಿನನವರಾದ ಜಕ್ಕಣ್ಣನವರು ಪ್ರಾರಂಭದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ, ಕಂದಾಯ ಅಧಿಕಾರಿಯಾಗಿ, ನಂತರ ತಹಶೀಲ್ದಾರ್ ಆಗಿ ಕರ್ವವ್ಯ ನಿರ್ವಹಿಸಿರುವುದರಿಂದ ನಮ್ಮ ತಾಲೂಕಿನಲ್ಲಿ ಅದರಲ್ಲಿ ಮಲೆನಾಡಿನಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದು ಜನಪರ ಸೇವೆಯ ಅಧಿಕಾರಿಯ ದೊಡ್ಡ ಗುಣ. ಜಕ್ಕಣ್ಣನವರು ಮೃತಪಟ್ಟ ದಿವಸ ನಾನು ಬೆಂಗಳೂರಿನಲ್ಲೆ ಇದ್ದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಹೋಗಿ ಅವರ ಕುಟುಂಬದವರನ್ನು ಸಂತೈಸಿ ಉಪ್ಪಾರಪೇಟೆಯ ಇನ್ಸ್ಪೆಕ್ಟರ್ ಮಾರುತಿ ( ಹಿಂದೆ ಮಾರುತಿಯವರು ತೀರ್ಥಹಳ್ಳಿಯಲ್ಲಿ ಸಬ್ ಇನ್ಸಪೆಕ್ಟರ್ ಆಗಿ ಕರ್ತವ್ಯಮಾಡಿದ್ದರು) ಯವರನ್ನು ಸಂಪರ್ಕಿಸಿ ಅವರಿಂದ ಮೃತದೇಹದ ಮಹಜರು ಆಸ್ಪತ್ರೆಗೆ ಸಾಗಾಣಿಕೆ ,ಮರಣೋತ್ತರ ಪರೀಕ್ಷೆ ಮಾಡಿಸಿ ಕೊಡುವ ಕೆಲಸ ಮಾಡಿದ್ದೇನೆ. ಹಿಂದೆ ವರ್ಗಾವಣೆಯಾದ ಅಧಿಕಾರಿಗಳಿಗೆ ಗೌರವಿಸುವ ಬೀಳ್ಕೊಡುಗೆ ಸಮಾರಂಭ ನಡೆಯುತ್ತಿತ್ತು. ಆದರೆ ಈ ದಿನ ಅಧಿಕಾರಿಯೊಬ್ಬರಿಗೆ ಶ್ರದ್ಧಾಂಜಲಿ ಸಮರ್ಪಿಸುವ ಸಭೆಯಾಗಿದೆ. ಇನ್ನು ಮುಂದೆ ಇಂತಹ ಘಟನೆ ನಡೆಯದಿರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಜಕ್ಕಣ್ಣನವರ ಸೇವಾ ನಿಷ್ಠೆಯ ಪರವಾಗಿ ಗ್ರೇಡ್ 2 ತಹಶೀಲ್ದಾರ್ ಸತ್ಯಮೂರ್ತಿ, ಪ.ಪಂ.ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ ‘ ಉಪಾಧ್ಯಕ್ಷೆ ಗೀತಾರಮೇಶ್’ ಸದಸ್ಯರುಗಳಾದ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ. , ಜ್ಯೋತಿ ಮೋಹನ್. ಸುಶೀಲಾ ಶೆಟ್ಟಿ. ತೋಟಗಾರಿಕಾ ಇಲಾಖೆಯ ಸೋಮಶೇಖರ್ ‘ ಕೆಸ್ತೂರ್ ಮಂಜುನಾಥ್ ಡಿ. ಎಸ್.
ವಿಶ್ವನಾಥ ಶೆಟ್ಟಿ, ನೂತನ ತಹಶೀಲ್ದಾರ್ ರಂಜಿತ್ ಅವರು ಮಾತಾಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು. ತಹಶೀಲ್ದಾರ್ ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು