4:35 AM Saturday4 - January 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನ ವಿನಿಯೋಗ: ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ… ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ದರ ಹೆಚ್ಚಳ: ಸಚಿವ ಸಂಪುಟ ಅನುಮೋದನೆ ಮಂಗಳೂರು ಸಹಿತ ರಾಜ್ಯದ 6 ಸ್ಮಾರ್ಟ್‌ ಸಿಟಿ ಕಾಮಗಾರಿಗಳ ತನಿಖೆ: ಸಚಿವ ಬೈರತಿ… ಕ್ರೆಡಲ್ ನಿಂದ 40.53 ಕೋಟಿ ಲಾಭಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಸ್ತಾಂತರ ಬೆಂಗಳೂರು: ಬೈಕ್ ಶೋ ರೂಂನಲ್ಲಿ ಅಗ್ನಿ ಅನಾಹುತ: ಸುಟ್ಟು ಕರಕಲಾದ 60ಕ್ಕೂ ಹೆಚ್ಚು… ಮುಂದಿನ ವರ್ಷ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆ… ಎಚ್.ಡಿ.ಕೋಟೆ ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ: ಪರಿಶೀಲನೆ

ಇತ್ತೀಚಿನ ಸುದ್ದಿ

ಸರಕಾರಿ ಬಸ್‌ ದರ ಏರಿಕೆ ಖಂಡಿಸಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ ಪರ ಪ್ರಯಾಣಿಕರಿಗೆ ಕ್ಷಮೆ ಯಾಚನೆ

03/01/2025, 23:48

*ಕಾಲಿಗೆ ಬೀಳುತ್ತೇವೆ, ಕೈ ಮುಗಿಯುತ್ತೇವೆ, ಕ್ಷಮಿಸಿ ಬಿಡಿ ಎಂಬುದು ಸಿಎಂ ಸಿದ್ದರಾಮಯ್ಯನವರ ಹೊಸ ಸ್ಲೋಗನ್*

ಬೆಂಗಳೂರು(reporterkarnataka.com): ಕಾಂಗ್ರೆಸ್‌ ಸರ್ಕಾರ ಮಾಡಿರುವ ಬಸ್‌ ಟಿಕೆಟ್‌ ದರ ಏರಿಕೆಯನ್ನು ಖಂಡಿಸಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಮೆಜೆಸ್ಟಿಕ್‌ನಲ್ಲಿ ವಿಭಿನ್ನವಾಗಿ ಪ್ರತಿಭಟಿಸಿದರು.
ಬಸ್‌ ಪ್ರಯಾಣಿಕರ ಕೈಗೆ ಹೂ ನೀಡಿದ ಅವರು, ಸಿಎಂ ಸಿದ್ದರಾಮಯ್ಯನವರ ಪರವಾಗಿ ಕ್ಷಮೆ ಯಾಚಿಸಿದರು.
ಬಸ್‌ನಲ್ಲಿ ಕುಳಿತ್ತಿದ್ದ ಪ್ರಯಾಣಿಕರ ಬಳಿ ಹೋದ ಆರ್‌.ಅಶೋಕ್ ಹಾಗೂ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, “ಕಾಂಗ್ರೆಸ್‌ ಸರ್ಕಾರ ಬೆಲೆ ಏರಿಕೆ ಮಾಡುವುದಿಲ್ಲವೆಂದು ನೀವು ಮತ ನೀಡಿದ್ದೀರಿ. ಆದರೆ ಮಾತಿಗೆ ತಪ್ಪಿದ ಸರ್ಕಾರ ಹೊಸ ವರ್ಷದಂದೇ ಟಿಕೆಟ್‌ ದರ ಏರಿಕೆ ಮಾಡಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯನವರ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ” ಎಂದು ಪ್ರಯಾಣಿಕರಿಗೆ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಕಾಲಿಗೆ ಬೀಳುತ್ತೇವೆ, ಕೈ ಮುಗಿಯುತ್ತೇವೆ ಕ್ಷಮಿಸಿ ಬಿಡಿ ಎಂಬುದು ಸಿಎಂ ಸಿದ್ದರಾಮಯ್ಯನವರ ಹೊಸ ಸ್ಲೋಗನ್. ಟಿಕೆಟ್ ದರ 200-300 ರೂಪಾಯಿ ಜಾಸ್ತಿಯಾಗಿದೆ. ಬಸ್‌ಗಳ ಟಿಕೆಟ್ ದರ ಮಾತ್ರ ಅಲ್ಲ, ಮುಂದೆ ಹಾಲಿನ ದರವನ್ನೂ ಏರಿಕೆ ಮಾಡುತ್ತೇವೆ. ನೀರಿನ ದರವನ್ನು ಏರಿಕೆ ಮಾಡುತ್ತೇವೆ, ಎಲ್ಲಾ ವಸ್ತುಗಳ ಬೆಲೆಯನ್ನು ಗಗನಕ್ಕೆ ಮುಟ್ಟಿಸುವ ಶಪಥವನ್ನು ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಪರವಾಗಿ ನಾನು ಹೇಳಿದ್ದೇನೆ. ಈಗ ಪ್ರಯಾಣಿಕರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಪತ್ನಿಗೆ ಉಚಿತ ಟಿಕೆಟ್ ನೀಡಿ ಪತಿಗೆ ಡಬಲ್ ಚಾರ್ಜ್ ಮಾಡಿದರೆ ನಮ್ಮ ಮನೆ ದುಡ್ಡೇ ಖರ್ಚಾಗೋದು ಅಲ್ವಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. 2025 ರಲ್ಲಿ ಎಲ್ಲ ತೆರಿಗೆ ಜಾಸ್ತಿ ಮಾಡುತ್ತೇವೆ. ನಿಮ್ಮ ಕಾಲಿಗೆ ಬೀಳುತ್ತೇವೆ. ಕೈ ಮುಗಿಯುತ್ತೇವೆ ಕ್ಷಮಿಸಿ ಬಿಡಿ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಹೊಸ ಸ್ಲೋಗನ್ ಎಂದು ಲೇವಡಿ ಮಾಡಿದರು.
ಹಿಂದಿನ ಬಿಜೆಪಿ ಸರ್ಕಾರ ಯಾವುದನ್ನೂ ಉಚಿತವಾಗಿ ಕೊಟ್ಟಿರಲಿಲ್ಲ. ಆದರೆ ಈ ಸರ್ಕಾರ ಚುನಾವಣೆಗೂ ಮುನ್ನ ಉಚಿತವಾಗಿ ಕೊಡುತ್ತೇವೆಂದು ಹೇಳಿ ನಂತರ ಪೆಟ್ರೋಲ್, ಡಿಸೇಲ್ ದರ ಏರಿಸಿದೆ. ಮಕ್ಕಳು ಕುಡಿಯುವ ಹಾಲಿಗೂ ಕಲ್ಲು ಹಾಕಿದ್ದಾರೆ. ಮದ್ಯದ ದರ 50 ರೂಪಾಯಿ ಏರಿಕೆ ಮಾಡಿದ್ದಾರೆ. ಸ್ಟ್ಯಾಂಪ್ ಕಾಗದ ದರ, ಮನೆ ತೆರಿಗೆ, ವಿದ್ಯುತ್ ದರ ಏರಿಸಿದ್ದಾರೆ. ಮಾಧ್ಯಮದವರು ಕೂಗಾಡಿದರೂ ನಾನು ನೀರಿನ ತೆರಿಗೆ ಜಾಸ್ತಿ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ದೂರಿದರು.


ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಹೊಸ ವರ್ಷಕ್ಕೆ ಗಿಫ್ಟ್ ಕೊಟ್ಟಿದ್ದಾರೆ. ಹಾಗೆಯೇ ಸಿಎಂ ಸಿದ್ದರಾಮಯ್ಯ ಕೂಡ ಕರ್ನಾಟಕದ ಜನತೆಗೆ ಬಸ್ ದರ ಏರಿಕೆಯ ಗಿಫ್ಟ್‌ ನೀಡಿದ್ದಾರೆ. ಇಂತಹ ಸಾರಿಗೆ ಸಚಿವರನ್ನು ನಾವು ನೋಡಲು ಸಾಧ್ಯವೇ ಇಲ್ಲ. ಹತ್ತು ವರ್ಷಗಳಿಂದ ಟಿಎ, ಡಿಎಂ ಜಾಸ್ತಿಯಾಗಿಲ್ಲವೇ? ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿಲ್ಲವೇ? ಹಾಗಾದರೆ ಹಿಂದಿನ ಬಿಜೆಪಿ ಸರ್ಕಾರ ಯಾಕೆ ದರ ಏರಿಕೆ ಮಾಡಿಲ್ಲ? 2013 ರಲ್ಲಿ ನಾನು ಸಾರಿಗೆ ಸಚಿವನಾಗಿದ್ದೆ. ನಾನು ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿಗೆ 1 ಸಾವಿರ ಕೋಟಿ ರೂ.ಗೂ ಹೆಚ್ಚು ಲಾಭ ತಂದುಕೊಟ್ಟಿದ್ದೆ. ಕೋವಿಡ್‌ ಸಮಯದಲ್ಲಿ ಬಸ್‌ ಸಂಚಾರ ಇರಲಿಲ್ಲವಾದ್ದರಿಂದ ನಷ್ಟವಾಗಿತ್ತು. ಆದರೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನೌಕರರ ಸಂಬಳ ಹೆಚ್ಚ ಮಾಡಲೇಬೇಕು. ನಾನು ಇದ್ದಾಗಲೂ ಸಂಬಳ ಹೆಚ್ಚು ಮಾಡಿಸಿದ್ದೆ. ಆದರೆ ಈಗಿನ ಸರ್ಕಾರ ಸಾಲ ಮಾಡಿ ಆ ಹೊರೆಯನ್ನು ಜನರ ಮೇಲೆ ಹೇರುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು