10:44 AM Sunday27 - July 2025
ಬ್ರೇಕಿಂಗ್ ನ್ಯೂಸ್
ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;… ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ… ಮೈಸೂರು ದಸರಾ: ಜಂಬೂ ಸವಾರಿಯ ಮೊದಲ ಹಂತದ ಸಾಕಾನೆಗಳ ಪಟ್ಟಿ ಬಿಡುಗಡೆ Kodagu | ಬಿರುಸಿನ ಮಳೆ: ಕೊಡಗು ಜಿಲ್ಲೆಯಲ್ಲಿ ನಾಳೆ ಶಾಲೆ, ಪಿಯು ಕಾಲೇಜುಗಳಿಗೆ…

ಇತ್ತೀಚಿನ ಸುದ್ದಿ

ಸರಕಾರಿ ಶಾಲೆಗಳಲ್ಲಿ ಇನ್ನು ಪ್ರತಿ ತಿಂಗಳು ಮಕ್ಕಳಿಗೆ ಸಿನಿಮಾ ಪ್ರದರ್ಶನ: ತ.ನಾ. ಸರಕಾರದಿಂದ ವಿನೂತನ ಯೋಜನೆ

15/07/2022, 08:40

ಚೆನ್ನೈ(reporterkarnataka.com):
ಹೆತ್ತವರು ಮಕ್ಕಳನ್ನು ಟಿವಿ, ಮೊಬೈಲ್ ನಿಂದ ದೂರವಿಡಲು ಪ್ರಯತ್ನಿಸುತ್ತಿದ್ದರೆ ತಮಿಳುನಾಡು ಸರ್ಕಾರ ಮಕ್ಕಳಿಗೆ ಸಿನಿಮಾ ತೋರಿಸಲು ಮುಂದಾಗಿದೆ. ಪ್ರತಿ ತಿಂಗಳು ಒಂದು ಸಿನಿಮಾ ತೋರಿಸಲು ಸರಕಾರ ಮುಂದಾಗಿದೆ.

ಕೊರೋನಾದಿಂದ ಶಾಲೆಗಳಿಂದ ದೂರ ಉಳಿದಿದ್ದ ಮಕ್ಕಳು ಮೊಬೈಲ್, ಟಿವಿ ಚಟ ಅಂಟಿಸಿಕೊಂಡಿದ್ದರು. ಇದರಿಂದ ಪೋಷಕರಿಗೆ ಅವರನ್ನು ಮೊಬೈಲ್, ಟಿವಿಯಿಂದ ದೂರವಿಡಲು ಕಷ್ಟಪಟ್ಟಿದ್ದರು. ಮತ್ತೆ ಶಾಲೆ ತೆರೆದಿರುವುದರಿಂದ ಪೋಷಕರು ಕೊಂಚ ನಿರಾಳರಾಗಿದ್ದರು. ಆದರೆ 
ತಮಿಳುನಾಡು ಸರ್ಕಾರವೇ ಮಕ್ಕಳಿಗೆ ಸಿನಿಮಾಗಳನ್ನು ತೋರಿಸಲು ಮುಂದಾಗಿದೆ.

ತಮಿಳುನಾಡಿನ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಚಲನಚಿತ್ರ ತೋರಿಸುವಂತೆ ಆದೇಶಿಸಲಾಗಿದೆ. ಶಿಕ್ಷಣ ನಿರ್ದೇಶನಾಲಯದ ಪ್ರಕಾರ, ವರ್ಷವಿಡೀ ನಡೆಯುವ ಚಲನಚಿತ್ರೋತ್ಸವದ ಭಾಗವಾಗಿ ಪ್ರತಿ ತಿಂಗಳು ಒಂದು ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಪ್ರಾಥಮಿಕವಾಗಿ 6 ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಪ್ರತಿ ವಾರ ನಿಗದಿಪಡಿಸಿದ ಕಲಾ ಅವಧಿಯಲ್ಲಿ ಸಿನಿಮಾ ತೋರಿಸಲಾಗುವುದು. ರಾಜ್ಯದ 13,210 ಶಾಲೆಗಳಲ್ಲಿ, ನೋಡಲ್ ಶಿಕ್ಷಕರು ಸಿನಿಮಾ ತೋರಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತಾರೆ. ಶಿಕ್ಷಕರು ಚಲನಚಿತ್ರದ ಸಾರಾಂಶವನ್ನು ಸಿದ್ಧಪಡಿಸಬೇಕು. ಜೊತೆಗೆ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯ ಪ್ರಕಾರ ಎಲ್ಲಾ ಮಾನದಂಡಗಳನ್ನು ಅನುಸರಿಸಬೇಕು.

ತಮಿಳುನಾಡು ಸರ್ಕಾರದ ಈ ಯೋಜನೆಯಿಂದ ಮಕ್ಕಳಲ್ಲಿ ಸಕಾರಾತ್ಮಕ ನಡವಳಿಕೆಯನ್ನು ಪ್ರೋತ್ಸಾಹಿಸುವುದು. ಇತರ ಸಂಸ್ಕೃತಿಗಳ ಬಗ್ಗೆ ಸಹಾನುಭೂತಿ ಮತ್ತು ಗೌರವವನ್ನು ಬೆಳೆಸುವುದು ಸಕ್ರಿಯವಾಗಿ ಆಲಿಸುವಿಕೆ, ವೀಕ್ಷಣೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಸುಧಾರಿಸಲು ಸರ್ಕಾರಿ ಶಾಲೆಗಳಲ್ಲಿ ಸಿನಿಮಾಗಳನ್ನ ಪ್ರದರ್ಶನ ಮಾಡಲು ನಿರ್ಧಾರ ಮಾಡಿದೆ.

ಜುಲೈ 6ರಂದು ಕುಂಭಕೋಣಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿನಿಮಾ ಪ್ರದರ್ಶನ ಯೋಜನೆಗೆ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಚಾಲನೆ ನೀಡಿದ್ದರು. ಈ ವೇಳೆ ಪ್ರಸಿದ್ಧ ನಟ-ಚಲನಚಿತ್ರ ನಿರ್ಮಾಪಕ ಚಾರ್ಲಿ ಚಾಪ್ಲಿನ್‌ರ 1921 ರ ಚಲನಚಿತ್ರ ‘ದಿ ಕಿಡ್‌’ನ (The Kid) ಪ್ರದರ್ಶನದೊಂದಿಗೆ ಸಿನಿಮಾ ಉತ್ಸವ ಪ್ರಾರಂಭಿಲಾಯಿತು.

ಇನ್ನು ಸ್ಕ್ರೀನಿಂಗ್‌ ಗೆ ಮುಂಚಿತವಾಗಿ ಮಕ್ಕಳಿಗೆ ಚಿತ್ರದ ವಿಶಾಲವಾದ ಅವಲೋಕನವನ್ನು ಒದಗಿಸುವುದರ ಜೊತೆಗೆ, ಪ್ರದರ್ಶನದ ನಂತರ ಚರ್ಚೆಗಳು, ಪ್ರತಿಕ್ರಿಯೆ ಸೆಷನ್ ಮತ್ತು ರಸಪ್ರಶ್ನೆ ವಿಭಾಗ (ಅತ್ಯುತ್ತಮ ತಂಡಕ್ಕೆ ಬಹುಮಾನದೊಂದಿಗೆ) ಇರುತ್ತದೆ. ಇದು ವಿದ್ಯಾರ್ಥಿಗಳಿಗೆ ಕೆಲವು ರೀತಿಯ ಉತ್ತೇಜನವನ್ನು ನೀಡಲಿದೆ. ರಾತ್ರೋರಾತ್ರಿ ವಿದ್ಯಾರ್ಥಿಗಳಲ್ಲಿ ಬದಲಾವಣೆ ಆಗುತ್ತದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಆದರೆ ಉತ್ತಮ ವಿಷಯಗಳು ಬರಲು ಇದು ಆರಂಭಿಕ ಹಂತವಾಗಿದೆ. ಇದಿಷ್ಟೆ ಅಲ್ಲ, ಸ್ಕ್ರೀನಿಂಗ್ ನಂತರ ಮಕ್ಕಳ ಪ್ರತಿಕ್ರಿಯೆ ಮತ್ತು ಅವಲೋಕನಗಳನ್ನು ಸೆರೆಹಿಡಿಯಲು ಮತ್ತು ವಿದ್ಯಾರ್ಥಿಗಳ ಮೇಲೆ ಸಿನಿಮಾಗಳ ಪ್ರಭಾವವನ್ನು ದಾಖಲಿಸಲು ಶಿಕ್ಷಣ ಇಲಾಖೆ ‘ಸಿಲ್ವರ್ ಸ್ಕ್ರೀನ್ ಆಪ್’ ಎಂಬ ವಿಶೇಷ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು