ಇತ್ತೀಚಿನ ಸುದ್ದಿ
ಬೆಳಗಾವಿ ಜಿಲ್ಲಾಮಟ್ಟದ ಥ್ರೋ ಬಾಲ್ ಸ್ಪರ್ಧೆ: ಬಾಲಕರ ವಿಭಾಗದಲ್ಲಿ ಹಲ್ಯಾಳ ಸರಕಾರಿ ಪ್ರೌಢಶಾಲೆ ತಂಡಕ್ಕೆ ಜಯ
02/10/2024, 14:10
ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ಹಲ್ಯಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಬಾಲಕ ಮತ್ತು ಬಾಲಕಿಯರ ಥ್ರೋ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಹಲ್ಯಾಳ ಸರಕಾರಿ ಪ್ರೌಢಶಾಲೆಯ ತಂಡ ಜಯಗಳಿಸಿದೆ.
ಸುಮಾರು 8 ತಾಲೂಕುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕ್ರೀಡಾಳುಗಳಿಗೆ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ವಿದ್ಯಾರ್ಥಿಗಳು ತುಂಬಾ ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ತಂಡಗಳಿಗೆ ಪ್ರೋತ್ಸಾಹಿಸಿದರು.
ಹಲ್ಯಾಳ ಮತ್ತು ಅಳಗವಾಡಿ ಶಾಲೆಯ ತಂಡಗಳ ನಡುವೆ ನಡೆದ ಕೊನೆಯ ರೋಚಕ ಪಂದ್ಯಾಟದಲ್ಲಿ ಸರ್ಕಾರಿ ಪ್ರೌಢಶಾಲೆ ಹಲ್ಯಾಳ ಬಾಲಕರ ತಂಡವು ಜಯಶಾಲಿಯಾಯಿತು.
ಇದೇ ವೇಳೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ. ಆರ್. ಹಲಸಂಗಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ. ಈ ದಿನ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಒಳಪಡುವ 8 ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳು ಇಂದಿನ ತ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಇದರಲ್ಲಿ ಜಯಶಾಲಿಯಾದ ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿವೆ. ಈ ಜಿಲ್ಲಾ ಮಟ್ಟದ ಕ್ರೀಡೆಗೆ ಸಹಕರಿಸಿದ ಹಲ್ಯಾಳ ಗ್ರಾಮದ ಗ್ರಾಮಸ್ಥರಿಗೆ ಧನ್ಯವಾದ ಎಂದರು.
ಇದೇ ವೇಳೆ ಎಸ್ ಡಿಎಂಸಿ ಅಧ್ಯಕ್ಷ ದೀಪಕ್ ಮುರಗುಂಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂಗೀತಾ ತಕತರಾವ, ಚಿದಾನಂದ ಮುಕುಣಿ ಕಾಂಗ್ರೆಸ್ ಯುವ ಮುಖಂಡರು, ಅಜಿತ್ ಸಿಂಧೆ ಸಂತೋಷ್ ಕಾಂಬಳೆ, ಆನಂದ ಹೊನಕಾಂಡೆ, ಸಂಜು ಭಾಗಡಿ, ಸಂಜು, ಮೆಂಡಿಗೇರಿ. ಮಂಜುನಾಥ ಹತ್ತಿ ಮುಖ್ಯೋಪಾಧ್ಯರು ಸರ್ಕಾರಿ ಪ್ರೌಢಶಾಲೆ ಹಲ್ಯಾಳ ಹಾಗೂ ತಾಲೂಕಿನ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕಿಯರು ವಿಧ್ಯಾರ್ಥಿಗಳು, ಹಲ್ಯಾಳದ ಗ್ರಾಮಸ್ಥರು ಕ್ರೀಡಾಕೂಟದಲ್ಲಿ ಭಾಗವಹಿಸಿದರು