7:44 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಸಂಕ್ರಾಂತಿ ಹಬ್ಬ: ಬಳ್ಳಾರಿ ಆಂಧ್ರ ಕಲಾ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆ

05/01/2025, 22:07

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಪ್ರತಿ ವರ್ಷ ಬಳ್ಳಾರಿ ಆಂಧ್ರ ಕಲಾ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆ ಆಯೋಜನೆ ಮಾಡುತ್ತಾ ಬಂದಿದ್ದು, ಈ ಬಾರಿಯು ರಂಗೋಲಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ.
ನಮ್ಮ ಸಂಸ್ಕೃತಿಗಳನ್ನು ಮರೆಯಬಾರದು ಅದನ್ನು
ಮುಂದುವರೆಸಿಕೊಂಡು ಹೋಗುವ ಸಲುವಾಗಿ ನಮ್ಮ ಸಮಿತಿ ಹಲವಾರು ಸನಾತನ ಭಾರತೀಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ ಎಂದು ಆಂಧ್ರ ಕಲಾ ಸಮಿತಿಯ ಅಧ್ಯಕ್ಷ
ಮುಲ್ಲಂಗಿ ಚಂದ್ರಶೇಖರ್ ಚೌದರಿ ಹೇಳಿದರು.
ನಗರದ ಕಿತ್ತೂರ ರಾಣಿ ಚೆನ್ನಮ್ಮ ಬಾಲಕಿಯರ ಅನುದಾನಿತ ಪ್ರೌಢ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ 150 ಮಕ್ಕಳು‌, ಮಹಿಳೆಯರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಕಳೆದ 50 ವರ್ಷಗಳಿಂದ ಸಮಿತಿ‌ ಆಚರಿಸುತ್ತಾ ‌ಬಂದಿದ್ದು
ರಂಗೋಲಿ ಸ್ಪರ್ಧೆಯಿಂದ ಮಕ್ಕಳಲ್ಲಿ ಬಣ್ಣದ ಬಗ್ಗೆ ತಿಳಿದುಕೊಳ್ಳುತ್ತಾರೆ. ಸಂಕ್ರಾಂತಿ ಹಬ್ಬವು ಎಲ್ಲರ ಬಾಳಲ್ಲಿ ಖುಷಿಯನ್ನು ತರಲಿ ಅವರ ಜೀವನ ಬಣ್ಣ ಬಣ್ಣವಾಗಿ ಕಂಗೊಳಿಸಲಿ. ನಮ್ಮ ಸಂಪ್ರದಾಯ, ಸಂಸ್ಕೃತಿ ಉಳಿಸುವ ಉದ್ದೇಶದಿಂದ ಸಂಕ್ರಾಂತಿ ರಂಗೋಲಿ ಹಾಕಿ ಸಂಭ್ರಮಪಡಿಸಲು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸ್ಪರ್ಧೆಯನ್ನು ಸಂಕ್ರಾಂತಿ ಹಬ್ಬದ ಒಂದು ವಾರ ಮುಂಚಿತವಾಗಿ ಆಯೋಜನೆ ಮಾಡಿ ಜಯಗಳಿಸಿದರವರಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದರು.
ನಂತರ ನಿವೃತ್ತ ನ್ಯಾಯಾಧೀಶರಾದ ಶೋಭಾದೇವಿ ಅವರು ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂಬ ಉದ್ದೇಶದಿಂದ ಈ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಹಿಂದೆ ಇದ್ದ ಸಂಸ್ಕೃತಿಗಳು ಇಂದಿನ ದಿನಗಳಲ್ಲಿ ಕಣ್ಮರೆಯಾಗುತ್ತಿವೆ. ಹಾಗಾಗಿ ನಾವು ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ನಮ್ಮ ಭಾರತ ಸಂಸ್ಕೃತಿಗಳನ್ನು ಮೆಲಕು ಹಾಕಿದಂತಾಗುತ್ತದೆ ಎಂದರು.
ನಂತರ ಮಾಜಿ ಉಪ ಮೇಯರ್ ರಾಜೇಶ್ವರಿ ಸುಬ್ಬರಾಯಡು ಅವರು ಮಾತನಾಡಿ ಇಂದಿನ‌ ದಿನಗಳಲ್ಲಿ ಮಕ್ಕಳಲ್ಲಿ ಸಂಪ್ರದಾಯ ಸಂಸ್ಕೃತಿ ಬಗ್ಗೆ ಅರಿವು ನೀಡುವುದು ಪೋಷಕರ ಜವಾಬ್ದಾರಿ ಯಾಗಿದೆ.‌ ವಿದೇಶಿಗರು ನಮ್ಮ ಸಂಸ್ಕೃತಿಯತ್ತ ‌ವಾಲುತ್ತಿದ್ದಾರೆ. ಅದರೆ ನಮ್ಮವರು ವಿದೇಶಿ ಸಂಸ್ಕೃತಿ ಗೆ ಮಾರುಹೋಗುತ್ತಿರುವ ದಿನಗಳಲ್ಲಿ ಸಂಘಟನೆಗಳು ಇತಂಹ ಕಾರ್ಯಕ್ರಮ ನೀಡುವ‌ ಮೂಲಕ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಿತ್ತಿರುವುದು ಶಾಘ್ಲನೀಯ ಎಂದರು.

ನಂತರ ವಿಜೇತ ವಿದ್ಯಾರ್ಧಿನಿಯರಿಗೆ ನಗದು‌ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಜೊತೆ ಭಾಗವಹಿಸಿದೆಲ್ಲರಿಗೂ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಆಂಧ್ರ ಕಲಾ ಸಮಿತಿಯ ಕಾರ್ಯದರ್ಶಿ ಭೀಮ ನೇನಿ ಭಾಸ್ಕರ್ ನಾಯ್ಡು, ಉಪಾಧ್ಯಕ್ಷ ಶ್ಯಾಂ ಸುಂದರ, ಖನಿಜ, ರಾಜಶೇಖರ, ಸದಸ್ಯರುಗಳಾದ ಭೀಮ್ ನೇನಿ ಪ್ರಸಾದ್, ಎಂ. ರಾಮಾಂಜನೇಯಲು, ಕಾಳಿದಾಸ್, ವೆಂಕಮಾಂಬ, ವೆಂಕಟೇಶಲು, ನರೇಂದ್ರ, ನೇತು ರಘುರಾಮ್, ನಾರಾಯಣ ರೆಡ್ಡಿ ಸೇರಿದಂತೆ ಇತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು