3:23 AM Saturday19 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ಸಂಘಟನೆ-ಒಗ್ಗಟ್ಟು ಇಲ್ಲದಿದ್ದರೆ ಶೋಷಿತ ಸಮುದಾಯಗಳಿಗೆ ಶಕ್ತಿ ಬರುವುದಿಲ್ಲ: ಸಿಎಂ ಸಿದ್ದರಾಮಯ್ಯ

05/01/2025, 20:45

ದಾವಣಗೆರೆ(reporterkarnataka.com): ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ ಜಾತ್ಯತೀತ ದಾರ್ಶನಿಕ ಸಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು


537ನೇ ಕನಕ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕುರುಬ ಜಾತಿಯಲ್ಲಿ ಹುಟ್ಟಿ ಜಾತಿ ರಹಿತ ಸಮ‌ಸಮಾಜಕ್ಕಾಗಿ ಹೋರಾಡಿದ, ಜಾತ್ಯತೀತ ಸಂತ. ಮನುಕುಲದ ಏಳೆಗೆಗಾಗಿ ಶ್ರಮಿಸಿ ದಾಸ ಶ್ರೇಷ್ಠರಾದರು ಎಂದರು.
ಶರಣ ಸಾಹಿತ್ಯದಲ್ಲಿ ಅಣ್ಣ ಬಸವಣ್ಣ, ದಾಸ ಸಾಹಿತ್ಯದಲ್ಲಿ ಕನಕದಾಸರು ಅತ್ಯಂತ ಪ್ರಮುಖರು. ಬುದ್ದನಿಂದ ಕನಕದಾಸರವರೆಗೂ, ಆ ನಂತರವೂ ಬಹಳ ಪುಣ್ಯಾತ್ಮರು ಜಾತಿರಹಿತ ಸಮಾಜಕ್ಕಾಗಿ ಶ್ರಮಿಸಿದ್ದಾರೆ. ಅಂಬೇಡ್ಕರ್, ನಾರಾಯಣಗುರು ಮತ್ತು ಕನಕದಾಸರು ಕೂಡ ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆಯ ಕಾರಣಕ್ಕೆ ಅವಮಾನಿತರಾಗಿದ್ದರು. ಯಾರೂ ಜನ್ಮತಃ ದಡ್ಡರಾಗಿರಲು ಸಾಧ್ಯವಿಲ್ಲ. ಕಾಳಿದಾಸರು ಶಾಕುಂತಲಾ ಬರೆದದ್ದು, ವ್ಯಾಸರು ಮಹಾಭಾರತ ಬರೆದದ್ದು, ವಾಲ್ಮೀಕಿ ರಾಮಾಯಣ ಬರೆದದ್ದೇ ಹುಟ್ಟಿನಿಂದ ಯಾರೂ ದಡ್ಡರಲ್ಲ ಎನ್ನುವುದಕ್ಕೆ ಉದಾಹರಣೆಯಾಗಿದೆ ಎಂದರು.
ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಕಾರಣದಿಂದ ನನಗೆ ಮುಖ್ಯಮಂತ್ರಿ ಅಗುವ ಅವಕಾಶ ಸಿಕ್ಕಿತು ಎಂದರು.
ಒಬ್ಬರಿಗೆ ಒಂದೇ ಮತ. ಎಲ್ಲಾ ಜಾತಿ, ಧರ್ಮ, ಅಂತಸ್ತಿವರಿಗೂ ಒಂದೇ ಮತ. ಈ ಸಮಾನತೆ ಆರ್ಥಿಕವಾಗಿ, ಸಾಮಾಜಿಕವಾಗಿಯೂ ಜಾರಿ ಆಗಬೇಕು. ಆಗ ಮಾತ್ರ ಸಮಾನತೆ ದಿಕ್ಕಿನಲ್ಲಿ ನಾವು ಮುನ್ನಡೆಯಲು ಸಾಧ್ಯ ಎಂದರು.
ಯಾವ ಧರ್ಮದಲ್ಲೂ ಮನುಷ್ಯ ತಾರತಮ್ಯ ಇಲ್ಲ. ಧರ್ಮವನ್ನು ರಾಜಕೀಯವಾಗಿ ಬಳಸಿಕೊಳ್ಳುವವರು ತಮ್ಮ ಲಾಭಕ್ಕಾಗಿ ತಾರತಮ್ಯ, ದ್ವೇಷ ಸೃಷ್ಟಿಸುತ್ತಾರೆ ಎಂದರು.
ಶೋಷಿತ ಸಮುದಾಯಗಳು ಜಾತಿ ಸಮ್ಮೇಳನ ಮಾಡುವುದು ತಪ್ಪಲ್ಲ. ಆದರೆ ಮುಂದುವರೆದ ಜಾತಿಗಳು ಜಾತಿ ಹೆಸರಲ್ಲಿ ಸಮ್ಮೇಳನ ನಡೆಸುವುದು ಸಾಮಾಜಕವಾಗಿ ತಪ್ಪಾಗುತ್ತದೆ. ಸಂಘಟನೆ-ಒಗ್ಗಟ್ಟು ಇಲ್ಲದಿದ್ದರೆ ಶೋಷಿತ ಸಮುದಾಯಗಳಿಗೆ ಶಕ್ತಿ ಬರುವುದಿಲ್ಲ ಎಂದರು.
ಮನುಷ್ಯ ಧರ್ಮ ಸ್ಥಾಪನೆ ಆಗುವವರೆಗೂ ನಾವೆಲ್ಲರೂ ಶ್ರಮಿಸುತ್ತಲೇ ಇರಬೇಕು.
ನಾನು ಎಲ್ಲಾ ಜಾತಿಯವರನ್ನೂ ಪ್ರೀತಿಸುತ್ತೇನೆ. ಆದರೆ ಜಾತಿ ಮಾಡುವವರನ್ನು ನಾನು ವಿರೋಧಿಸುತ್ತೇನೆಯೇ ಹೊರತು ಅವರನ್ನೂ ದ್ವೇಷಿಸುವುದಿಲ್ಲ. ಜಾತಿ ಕಾರಣದಿಂದ ಕನಕದಾಸರನ್ನು ಉಡುಪಿ ಮಠದ ಒಳಗೆ ಬಿಡಲಿಲ್ಲ ಎನ್ನುತ್ತಾ ಕನಕನ‌ ಕಿಂಡಿ ಸೃಷ್ಟಿಯಾದ ಪ್ರಸಂಗವನ್ನು ವಿವರಿಸಿದರು.
ಕನಕದಾಸರ 500ನೇ ಜಯಂತಿಯನ್ನು ನಾನು ಸಾರಿಗೆ ಸಚಿವನಾಗಿದ್ದಾಗ ಆಗಿನ ಎಸ್.ಆರ್.ಬೊಮ್ಮಾಯಿ ಸರ್ಕಾರದಲ್ಲಿ ಆರಂಭಿಸಿದೆವು. ಬಳಿಕ ಇಡೀ ರಾಜ್ಯ ಪ್ರವಾಸ ಮಾಡಿ ಕಾಗಿನೆಲೆ ಗುರುಪೀಠವನ್ನು , ಮಠವನ್ನು ರೂಪಿಸಿದ್ದು ಕೂಡ ನಾನೇ. ಆದ್ದರಿಂದ ಇಡೀ ಸಮುದಾಯ ಒಟ್ಟಾಗಿ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದರು.

*ಕಾಂತರಾಜ ವರದಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ:*
ನಾನು ಜಾತಿ ಜನಗಣತಿ ಪರವಾಗಿ ಇದ್ದೇವೆ. ಕಾಂತರಾಜ ಅವರ ವರದಿಯನ್ನು ಮುಂದಿನ ಕ್ಯಾಬಿನೆಟ್ ನಲ್ಲಿ ಇಟ್ಟು ಚರ್ಚಿಸುವ ಉದ್ದೇಶ ಕೂಡ ಇದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು