ಇತ್ತೀಚಿನ ಸುದ್ದಿ
ಸಂಘಟನೆ ಹೆಸರಲ್ಲಿ ಹಗಲು ದರೋಡೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ: ಕರ್ನಾಟಕ ಜನಜಾಗೃತಿ ವೇದಿಕೆಯ ತಿಲಕ್ ರಾಜ್ ಒತ್ತಾಯ
08/06/2022, 08:36
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಪ್ರತಿಷ್ಠಿತ ಸಂಘಟನೆಗಳ ಹೆಸರಿನಲ್ಲಿ ಅಮಾಯಕರನ್ನು ಟಾರ್ಗೆಟ್ ಮಾಡಿ ಅಂಗನವಾಡಿ ಶಾಲಾ-ಕಾಲೇಜುಗಳು ನ್ಯಾಯಬೆಲೆ ಅಂಗಡಿಗಳು ಸರಕಾರ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಹಣ ಬೇಡಿಕೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಕರ್ನಾಟಕ ಜನಜಾಗೃತಿ ವೇದಿಕೆ ಸಂಸ್ಥಾಪಕ ನಟ ನಿರ್ದೇಶಕ ತಿಲಕ ರಾಜ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮ ಜತೆ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲಿ ಬಡವರನ್ನ ಟಾರ್ಗೆಟ್ ಮಾಡಿಕೊಂಡು ಹಲವಾರು ಯುವಕರನ್ನು ಜೊತೆಗೂಡಿಸಿಕೊಂಡು ಅಮಾಯಕ ಕಾರ್ಯಕರ್ತರು ಸಹಾಯಕರ ಅವರನ್ನೇ ಹಣ ಕೇಳುವುದಾಗಿ ಗಂಭೀರ ಆರೋಪ ರಾಯಚೂರು ಜಿಲ್ಲೆಯಲ್ಲಿ ಕೇಳಿಬರುತ್ತದೆ.ಈ ರೀತಿ
ಭಿಕ್ಷೆ ಬೇಡಿ ತಿನ್ನುವುದನ್ನು ಬಿಡಬೇಕು. ನ್ಯಾಯವಾಗಿ ದುಡಿದು ತಿನ್ನಬೇಕು. ಅಮಾಯಕರನ್ನು ನಿಂದಿಸಬಾರದು. ನಿಂದಿಸಿದವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಮುಂದಾದರು ಸಂಘಟನೆಯ ಹೆಸರಲ್ಲಿ ಹಗಲು ದರೋಡೆ ಮಾಡುವುದು ಬಿಡಬೇಕು. ಇಲ್ಲವಾದ ಕಠಿಣ ಕ್ರಮ ಕೈಗೊಂಡು ಅಂಥವರ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.