ಇತ್ತೀಚಿನ ಸುದ್ದಿ
ಸಂಸತ್ ಚುನಾವಣೆಯ ದಿನಾಂಕ ನಾಳೆ ಪ್ರಕಟ: ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಲಿದ್ದಾರೆ ಚೀಫ್ ಎಲೆಕ್ಷನ್ ಕಮಿಷನರ್
15/03/2024, 16:18
ಹೊಸದಿಲ್ಲಿ(reporterkarnataka.com): ಮುಂಬರುವ ಲೋಕಸಭಾ ಚುನಾವಣೆಯ ದಿನಾಂಕ ನಾಳೆ ಪ್ರಕಟವಾಗಲಿದೆ.
ಭಾರತೀಯ ಚುನಾವಣಾ ಆಯೋಗ ನಾಳೆ ಮಧ್ಯಾಹ್ನ 3 ಗಂಟೆಗೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ. ಮುಖ್ಯ ಚುನಾವಣಾ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಲಿದ್ದಾರೆ
ಎಂದು ತಿಳಿದು ಬಂದಿದೆ.
ಈ ಪ್ರಕಟಣೆಯನ್ನು ಇಸಿಐನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.