ಇತ್ತೀಚಿನ ಸುದ್ದಿ
ಸಂಸದ ತೇಜಸ್ವಿ ಸೂರ್ಯ ಫ್ಲೈಟ್ ನ ಎಮರ್ಜೆನ್ಸಿ ಡೋರ್ ಓಪನ್ ಮಾಡಿಲ್ಲ: ಅಣ್ಣಾಮಲೈ ಸಮರ್ಥನೆ
19/01/2023, 18:24

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಅದು ಎಟಿಆರ್ ಫ್ಲೈಟ್. ಎಮರ್ಜೆನ್ಸಿ ಡೋರ್ ಎದುರು ಇರುತ್ತದೆ.
ಸಂಸದ ತೇಜಸ್ವಿ ಸೂರ್ಯ ಅವರು ಎಮರ್ಜೆನ್ಸಿ ಡೋರ್ ಸಮೀಪದ ಸೀಟಿನಲ್ಲಿ ಕೂತಿದ್ದರು. ಅವರು ಬಾಗಿಲ ಬಳಿ ಕೈ ಇಟ್ಟಿದ್ದಾರೆಯೇ ಹೊರತು ಫ್ಲೈಟ್ ಡೋರ್ ಓಪನ್ ಮಾಡಿಲ್ಲ ಎಂದು ತಮಿಳುನಡು
ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.
ಚಿಕ್ಕಮಗಳೂರಿನಲ್ಲಿ ಗುರುವಾರ ಮಾಧ್ಯಮ ಜತೆ ಮಾತನಾಡಿದ ಅವರು, ಫ್ಲೈಟ್ ಡೋರ್ ಓಪನ್ ವಿಚಾರದಲ್ಲಿ ತೇಜಸ್ವಿ ಸೂರ್ಯ ನಡೆಯನ್ನ ಸಮರ್ಥಿಸಿಕೊಂಡರು.
ತೇಜಸ್ವಿ ಸೂರ್ಯ ಡೋರ್ ಓಪನ್ ಮಾಡಿಲ್ಲ, ಡೋರನ್ನು ರೊಟೇಟ್ ಮಾಡಿ ಓಪನ್ ಮಾಡ್ಬೇಕು. ಸಂಸದ, ಬುದ್ಧಿವಂತ, ಜವಾಬ್ದಾರಿ ಸ್ಥಾನದಲ್ಲಿರುವ ಸೂರ್ಯ ಅವರು ಡೋರ್ ಓಫನ್ ಮಾಡಿಲ್ಲ.
ಅವರು ಕೂತಿದ್ದ ಎಮರ್ಜೆನ್ಸ್ ಎಕ್ಸಿಟ್ ಸೀಟಿನಲ್ಲಿ ಹ್ಯಾಂಡ್ ರೆಸ್ಟ್ ಇರಲ್ಲ. ಅಲ್ಲಿ ಎಕ್ಸಿಟ್ ಡೋರ್‍ನಲ್ಲಿ ಬೀಡಿಂಗ್ ಸ್ವಲ್ಪ ಓಪನ್ ಇತ್ತು, ಅದನ್ನ ಏರ್ ಹಾಸ್ಟೆಸ್ ಗಮನ ತರಲಾಯಿತು. ಪೈಲೆಟ್ ಬಂದು ಡಿಬೋರ್ಡಿಂಗ್ ಮಾಡಿ, ಸರಿಯಾಗಿ ಫಿಟ್ ಮಾಡಿದ್ರು, ಅಲ್ಲಿ ತೇಜಸ್ವಿ ಇನ್ಸಟೆಂಟ್ ರಿಪೋರ್ಟ್ ಕೊಟ್ರು. ತೇಜಸ್ವಿ ಸೂರ್ಯ ಡೋರ್‍ನ ಪುಲ್ ಮಾಡಿಲ್ಲ, ತೇಜಸ್ವಿ ಸೂರ್ಯ ಇತರೇ ಪ್ಯಾಸೆಂಜರ್‍ಗೆ ಕ್ಷಮೆ ಕೋರಿದ್ದಾರೆ ಎಂದರು.
ಇಂಡಿಗೋ ಅವರೇ ಕ್ಲಾರಿಫಿಕೇಶನ್ ಮಾಡಿ, ಇನ್ಸಟೆಂಟ್ ರಿಪೋರ್ಟ್ ಬಿಡುಗಡೆ ಮಾಡಿದೆ. ಕರ್ನಾಟಕ ಕಾಂಗ್ರೆಸ್‍ಗೆ ಮಾತನಾಡಲು ಬೇರೆ ವಿಷಯ ಇಲ್ಲ, ಇಂತಹಾ ವಿಷಯವನ್ನ ಮಾತನಾಡ್ತಿದ್ದಾರೆ ಎಂದು
ಅಣ್ಣಾಮಲೈ ಟೀಕಿಸಿದರು.