ಇತ್ತೀಚಿನ ಸುದ್ದಿ
ಸಮಾಜದ ಎಲ್ಲ ಜನರ ಆರ್ಥಿಕ ಸಬಲತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಯತ್ನ: ಕೃಷ್ಣೇಗೌಡ ಶ್ಲಾಘನೆ
25/08/2021, 09:16
ದೇವಲಾಪುರ ಜಗದೀಶ್ ನಾಗಮಂಗಲ ಮಂಡ್ಯ
info.reporterkarnataka@gmail.com
ಸಮಾಜದ ಕಟ್ಟಕಡೆಯ ಜನರಿಗೂ ಆರ್ಥಿಕ ಸಬಲತೆ ಏಳಿಗೆಯ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮುಂಚೂಣಿಯಲ್ಲಿರುವುದು ಎಂದು ಕೃಷ್ಣೆಗೌಡ ಅಭಿಪ್ರಾಯಪಟ್ಟರು.
ಅವರು ನಾಗಮಂಗಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಅವರುಗಳು ಕಚೇರಿಯಲ್ಲಿ ಸೇವಾ ಕೇಂದ್ರ ಹಾಗೂ ನವಜೀವನ ಪೋಷಕರ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಜೀವನದ ಸಬಲೀಕರಣ ಹಾಗೂ
ಆರ್ಥಿಕ ಸಬಲತೆಗೆ ಪ್ರಮುಖ ಧ್ಯೇಯವಾಗಿ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಜನರಿಗೂ ತಲುಪಿಸಿ, ಆರ್ಥಿಕವಾಗಿ ಮುಂದೆ ಬರುವಂತೆ ಮಾಡುವುದು ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆಗಳೇ ಸಾಕ್ಷಿ ಎಂದು ತಿಳಿಸಿದರು.
ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ರಾಜ್ಯದ ಹಾಗೂ ಜಿಲ್ಲಾ ತಾಲೂಕು ಗಳಲ್ಲಿ ಸೇವಾ ಕೇಂದ್ರಗಳಿಂದ ಜನರಿಗೆ ದೊರೆಯಬಹುದಾದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಕೇಂದ್ರವನ್ನು ಅನುಷ್ಠಾನ ಮಾಡುತ್ತಿರುವುದಾಗಿ ಜಿಲ್ಲಾ ನಿರ್ದೇಶಕರಾದ ಗಂಗಾಧರ ರೈ ತಿಳಿಸಿದರು .
ಸಮಾರಂಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ಹೇಮಲತಾ ಹೆಗಡೆ, ಜನಜಾಗೃತಿಯ ಸದಸ್ಯರಾದ ಮಂಜೇಶ್ ಕಲೀಂ ಉಲ್ಲಾ, ವಿನಯ್ ಕುಲಕರ್ಣಿ, ಭಾಸ್ಕರ್ ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು