ಇತ್ತೀಚಿನ ಸುದ್ದಿ
ಸಮಾಜದಲ್ಲಿ ಮಕ್ಕಳನ್ನು ಗೌರವದಿಂದ ಕಾಣಬೇಕು: ಶರಣಗೌಡ
06/01/2022, 10:56
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಸಮಾಜದಲ್ಲಿ ಮಕ್ಕಳನ್ನು ಗೌರವದಿಂದ, ಪ್ರೀತಿ ವಾತ್ಸಲ್ಯದಿಂದ, ಮಮಕಾರದಿಂದ ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು. ಪಾಲಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು.
ಮುಂದೊಂದು ದಿನ ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವಾಗ ತಂದೆ-ತಾಯಿಗೆ ಕಲಿಸಿದ ಶಾಲೆಗೆ ಮತ್ತು ಶಿಕ್ಷಕರಿಗೆ ಗೌರವ, ಪ್ರೀತಿ ಸಿಗುತ್ತದೆ ಎಂದು ಮಸ್ಕಿ ವಿಭಾಗದ ವಾಟಗಲ್ ಗ್ರಾಮದಲ್ಲಿ ಜಿಲ್ಲಾ ಸಮನ್ವಯ ಅಧಿಕಾರಿ ಶರಣೆಗೌಡ ಚಿತ್ತಾಪುರ ಹೇಳಿದರು.
15 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಕುರಿತು ಅವರು ಮಾತನಾಡಿದರು.
ಎಲ್ಲ ಪಾಲಕರು ಮಕ್ಕಳನ್ನು ಗೌರವದಿಂದ ನೋಡಿಕೊಳ್ಳಬೇಕು. ಅಲ್ಲದೆ ಅವರಿಗೆ ಸರಿಯಾದ ಸಂಸ್ಕಾರ ಕಲಿಸಿಕೊಡಬೇಕು. ಸಂಸ್ಕಾರದಿಂದ ಮಕ್ಕಳು ಸಮಾಜದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ತಿಳಿದುಕೊಳ್ಳುತ್ತಾರೆ. ಅಂತಹ ಯುವಕರು ತಮ್ಮ ಪ್ರತಿಭೆಯ ಹೊರಹಾಕಿದಾಗ ಸಾಮಾನ್ಯ ಜ್ಞಾನ ಸಮಾಜಕ್ಕೆ ಮುಟ್ಟುವ ಸಾಧ್ಯತೆ ಇದ್ದು ಮುರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಸರಿಯಾದ ಉತ್ತಮ ರೀತಿಯಲ್ಲಿ ಓದಬೇಕು. ಸರಿಯಾದ ಅಂಕವನ್ನು ಪಡೆದುಕೊಂಡಾಗ ಪಾಸಾದಾಗ ಶಾಲೆಗೆ ಮತ್ತು ತಂದೆ-ತಾಯಿಗೆ ಕೀರ್ತಿ ಬರುತ್ತದೆ ಎಂದರು.
ಮಕ್ಕಳ ಬಗ್ಗೆ ಪಾಲಕರು ಗಮನಹರಿಸಿದಾಗ ಮಕ್ಕಳು ಮುಂದೆ ಬರಲು ಸಾಧ್ಯ. ಕಡು ಬಡತನದಲ್ಲಿರುವ ಪಾಲಕರು ಮಕ್ಕಳಿಗೆ ಸರಿಯಾದ ಸಂಸ್ಕಾರ ಕಳಿಸಿಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರು, ಊರಿನ ಪ್ರಮುಖರು ಸೇರಿದಂತೆ ಇನ್ನಿತರ ಭಾಗವಹಿಸಿದ್ದರು .