8:03 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​

ಇತ್ತೀಚಿನ ಸುದ್ದಿ

ಸಾಲ್ವ್‌ ಫಾರ್ ಟುಮಾರೋ ಇನ್ನೋವೇಶನ್ ಕಾಂಪಿಟಿಶನ್‌: ಸ್ಯಾಮ್‌ಸಂಗ್‌ ಅರ್ಜಿ ಆಹ್ವಾನ

09/05/2023, 17:50

ಬೆಂಗಳೂರು(reporterkarnataka.com): ಸಾಲ್ವ್‌ ಫಾರ್ ಟುಮಾರೋ ಇನ್ನೋವೇಶನ್ ಕಾಂಪಿಟಿಶನ್‌ಗೆ ಸ್ಯಾಮ್‌ಸಂಗ್‌ ಅರ್ಜಿಗಳನ್ನು ಆಹ್ವಾನಿಸಿದೆ.
ಬೆಂಗಳೂರಿನ ಯುವಕರು ಮಾನಸಿಕ ಆರೋಗ್ಯ, ಯುವಕರಿಗೆ ಮತ್ತು ಸೇವೆ ಪೂರೈಕೆದಾರರಿಗೆ ರಸ್ತೆ ಸುರಕ್ಷತೆ, ಮಳೆನೀರು ಸಂರಕ್ಷಣೆ ಮತ್ತು ತ್ಯಾಜ್ಯ ಬೇರ್ಪಡಿಸುವಿಕೆ ಕೊರತೆಯ ವಿಷಯದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ನವೀನ ಐಡಿಯಾಗಳನ್ನು ಸಲಹೆ ಮಾಡಿದ್ದಾರೆ.

• ಪ್ರಮುಖ ಮೂರು ತಂಡಗಳು ತಮ್ಮ ಐಡಿಯಾವನ್ನು ಜಾರಿಗೆ ತರುವುದಕ್ಕಾಗಿ 1.5 ಕೋಟಿ ರೂ. ಪಡೆಯುತ್ತವೆ.

• 2023 ಏಪ್ರಿಲ್‌ 4 ರಿಂದ 2023 ಮೇ 31 ಸಂಜೆ 5 ಗಂಟೆಯವರೆಗೆ ಸ್ಯಾಮ್‌ಸಂಗ್ ಸಾಲ್ವ್‌ ಫಾರ್‌ ಟುಮಾರೋಗೆ www.samsung.com/in/solvefortomorrow ನಲ್ಲಿ ಅರ್ಜಿ ಸಲ್ಲಿಸಿ.

• ಶಿಕ್ಷಣ ಮತ್ತು ಕಲಿಕೆ, ಪರಿಸರ ಮತ್ತು ಸುಸ್ಥಿರತೆ, ಆರೋಗ್ಯ ಮತ್ತು ಯೋಗಕ್ಷೇಮ ಹಾಗೂ ವೈವಿಧ್ಯತೆ ಮತ್ತು ತೊಡಗಿಸಿಕೊಳ್ಳುವಿಕೆ ಕ್ಷೇತ್ರದ ಸುತ್ತ ನವೀನ ಪರಿಕಲ್ಪನೆಗಳೊಂದಿಗೆ 16-22 ವರ್ಷದವರು ಅರ್ಜಿ ಸಲ್ಲಿಸಬಹುದು

• ಸ್ಯಾಮ್‌ಸಂಗ್‌, ಐಐಟಿ ದೆಹಲಿ ಮತ್ತು ಎಂಇಐಟಿವೈ ಸ್ಟಾರ್ಟಪ್‌ ಹಬ್‌ನಿಂದ ಮೆಂಟರ್‌ ಮತ್ತು ತರಬೇತಿಯನ್ನು ಭಾಗವಹಿಸುವವರು ಪಡೆಯುತ್ತಾರೆ.

ಬೆಂಗಳೂರು, ಭಾರತ – May 9, 2023 – ಬೆಂಗಳೂರಿನ ಸ್ಯಾಮ್‌ಸಂಗ್ ಒಪೆರಾ ಹೌಸ್‌ನಲ್ಲಿ ಸ್ಯಾಮ್‌ಸಂಗ್‌ ಇಂಡಿಯಾ ಆಯೋಜಿಸಿದ ಶಿಕ್ಷಣ ಮತ್ತು ಅನ್ವೇಷಣೆ ರೋಡ್‌ಶೋದಲ್ಲಿ 500 ಕ್ಕೂ ಹೆಚ್ಚು ಉತ್ಸಾಹಭರಿತ ಯುವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ, ರಾಜ್ಯ ಮತ್ತು ದೇಶದಲ್ಲಿ ಇಂದು ಜನರಿಗೆ ಅತ್ಯಂತ ಹೆಚ್ಚು ತೊಂದರೆ ಉಂಟುಮಾಡುತ್ತಿರುವ ಸಮಸ್ಯೆಯನ್ನು ಪರಿಹರಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಸ್ಯಾಮ್‌ಸಂಗ್‌ ಸಾಲ್ವ್‌ ಫಾರ್ ಟುಮಾರೋ ಸ್ಫರ್ಧೆಯ ಎರಡನೇ ಸೀಸನ್‌ ಸಮಯದಲ್ಲಿ ಈ ರೋಡ್‌ಶೋ ಆಯೋಜಿಸಲಾಗಿತ್ತು.
ಎಂಎಸ್ ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್ ಸೈನ್ಸ್‌ & ಕಾಮರ್ಸ್‌, ರಾಮಯ್ಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್‌, ಎಂಎಸ್ ರಾಮಯ್ಯ ಯುನಿವರ್ಸಿಟಿ, ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್ (ಎಂಎಸ್‌ಆರ್‌ಐಎಂ) ಮತ್ತು ಕ್ರೈಸ್ಟ್ ಯೂನಿವರ್ಸಿಟಿಯಿಂದ ಬಂದ ಬೆಂಗಳೂರಿನ ವಿದ್ಯಾರ್ಥಿಗಳು. ಯುವಕರು ಮತ್ತು ಸೇವೆ ಪೂರೈಕೆದಾರರಿಗೆ ರಸ್ತೆ ಸುರಕ್ಷತೆ, ಮಳೆನೀರು ಕೊಯ್ಲು ಮತ್ತು ತ್ಯಾಜ್ಯ ಬೇರ್ಪಡಿಸುವಿಕೆ ಕೊರತೆ. ಸಮುದಾಯವು ಪರಸ್ಪರ ಸಂವಹನ ನಡೆಸುವ ಮತ್ತು ಈ ಮೂಲಕ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಸಮುದಾಯವನ್ನು ರಚಿಸುವಂತಹ ಮಾನಸಿಕ ಆರೋಗ್ಯ ಜಾಗೃತಿ ಕುರಿತ ನವೀನ ಐಡಿಯಾಗಳನ್ನು ವಿದ್ಯಾರ್ಥಿಗಳು ಹೊರತಂದಿದ್ದಾರೆ.
ಕ್ಷೇತ್ರದಲ್ಲಿನ ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಬಯಸಿದ್ದೇವೆ ಎಂದು ಹೇಳಿದ್ದಾರೆ.
ಸ್ಯಾಮ್‌ಸಂಗ್‌ ಗ್ಲೋಬಲ್‌ ಸಿಎಸ್‌ಆರ್‌ ಕಾರ್ಯಕ್ರಮ ಸಾಲ್ವ್‌ ಫಾರ್ ಟುಮಾರೋ ಬಗ್ಗೆ ನಡೆಸಿದ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ತಮ್ಮ ಐಡಿಯಾಗಳನ್ನು ಜಾರಿಗೆ ತರುವುದಕ್ಕಾಗಿ ಮಾರ್ಗದರ್ಶನ ಮತ್ತು ಬೆಂಬಲ ನೀಡಲು ಸಾಲ್ವ್‌ ಫಾರ್ ಟುಮಾರೋದಂತಹ ಪ್ಲಾಟ್‌ಫಾರ್ಮ್‌ಗಳು ಅಗತ್ಯವಿವೆ ಎಂದು ಹೇಳಿದ್ದಾರೆ. ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲು ಅಳವಡಿಸಬಹುದಾದ ನವೀನ ತಂತ್ರಜ್ಞಾನದ ಬಗ್ಗೆ ಅವರು ಮಾತನಾಡಿದ್ದಾರೆ.
ರಾಷ್ಟ್ರೀಯ ಶೈಕ್ಷಣಿಕ ಮತ್ತು ಅನ್ವೇಷಣೆ ಸ್ಫರ್ಧೆ ಸ್ಯಾಮ್‌ಸಂಗ್‌ ಸಾಲ್ವ್‌ ಫಾರ್‌ ಟುಮಾರೋಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಸ್ಟಾರ್ಟಪ್‌ ಹಬ್‌ ಮತ್ತು ಫೌಂಡೇಶನ್‌ ಫಾರ್ ಇನ್ನೋವೇಶನ್‌ ಮತ್ತು ಟೆಕ್ನಾಲಜಿ ಟ್ರಾನ್ಸ್‌ಫರ್‌ (ಎಫ್‌ಐಟಿಟಿ), ಐಐಟಿ ದೆಹಲಿ ಜೊತೆಗೆ ಪಾಲುದಾರಿಕೆ ವಹಿಸಿದ್ದಾಗಿ ಪ್ರಕಟಿಸಿದೆ. ಸಾಲ್ವ್‌ ಫಾರ್‌ ಟುಮಾರೋ ಮೂಲಕ ದೇಶದ ಯುವಕರಲ್ಲಿ ಅನ್ವೇಷಣೀಯ ಚಿಂತನೆ ಮತ್ತು ಸಮಸ್ಯೆ ಪರಿಹಾರದ ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ಸ್ಯಾಮ್‌ಸಂಗ್‌ ಹೊಂದಿದೆ.
ಪ್ರಮುಖ ಮೂರು ತಂಡಗಳು ತಮ್ಮ ಐಡಿಯಾಗಳನ್ನು ಕ್ರಿಯೆಗೆ ಪರಿವರ್ತಿಸುವುದಕ್ಕಾಗಿ 1.5 ಕೋಟಿ ರೂ. ಪಡೆಯುತ್ತಾರೆ ಮತ್ತು ಭಾಗವಹಿಸಿದ ಇತರರು ಅಗ್ರ 30 ಕ್ಕೆ ಮತ್ತು ಅಗ್ರ 10 ಕ್ಕೆ ತಲುಪಿದವರಿಗೆ ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಪುರಸ್ಕರಿಸಲಾಗುತ್ತದೆ.
ಸಾಲ್ವ್ ಫಾರ್ ಟುಮಾರೋದ ಎರಡನೇ ಸೀಸನ್‌ ಶಿಕ್ಷಣ ಮತ್ತು ಕಲಿಕೆ, ಪರಿಸರ ಮತ್ತು ಸುಸ್ಥಿರತೆ, ಆರೋಗ್ಯ ಮತ್ತು ಯೋಗಕ್ಷೇಮ ಹಾಗೂ ವೈವಿಧ್ಯತೆ ಮತ್ತು ತೊಡಗಿಸಿಕೊಳ್ಳುವಿಕೆ ವಿಭಾಗದಲ್ಲಿ 16-22 ವರ್ಷದೊಳಗಿನ ಭಾರತೀಯ ಯುವಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. 2023 ಏಪ್ರಿಲ್‌ 4 ರಿಂದ 2023 ಮೇ 31 ರಂದು ಸಂಜೆ 5 ಗಂಟೆಯವರೆಗೆ www.samsung.com/in/solvefortomorrow ಬಳಸಿಕೊಂಡು ಸ್ಯಾಮ್‌ಸಂಗ್‌ ಸಾಲ್ವ್‌ ಫಾರ್ ಟುಮಾರೋಗೆ ಭಾಗವಹಿಸುವವರು ಅರ್ಜಿ ಸಲ್ಲಿಸಬಹುದು.
“ಸ್ಯಾಮ್‌ಸಂಗ್‌ನಲ್ಲಿ, ಯುವಕರ ಶಕ್ತಿಯನ್ನು ಬಳಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ.. ‘ಭವಿಷ್ಯಕ್ಕಾಗಿ ಜೊತೆಯಾಗಿ! ಜನರನ್ನು ಸಬಲಗೊಳಿಸಿ’ ಎಂಬ ಧ್ಯೇಯವು ನಮ್ಮನ್ನು ಮತ್ತು ನಮ್ಮ ಜಾಗತಿಕ ಸಿಎಸ್‌ಆರ್‌ ಅನ್ನು ಒಂದಾಗಿಸುತ್ತಿದೆ . “ತಮ್ಮ ಸುತ್ತಲಿನ ಸಮುದಾಯಗಳಿಗೆ ಬಾಧಿಸುವ ನೈಜ ಜೀವನದ ಸಮಸ್ಯೆಗಳಿಗೆ ಧ್ವನಿಯಾಗಲು ಯುವಕರಿಗೆ ಅವಕಾಶ ನೀಡುವುದರಿಂದ ವಿಶ್ವದಲ್ಲಿ ಅವರು ಮಾಡಲು ಬಯಸುವ ಬದಲಾವಣೆಗೆ ನಾವು ಪ್ರೋತ್ಸಾಹ ನೀಡಿದಂತಾಗುತ್ತದೆ. ಸ್ಯಾಮ್‌ಸಂಗ್‌ ಸಾಲ್ವ್‌ ಫಾರ್‌ ಟುಮಾರೋ ಮೂಲಕ ಆ ಅವಕಾಶವನ್ನು ನೀಡಲು ಬಯಸಿದ್ದೇವೆ ಮತ್ತು ದೇಶದಲ್ಲಿ ಅನ್ವೇಷಣೀಯ ಪರಿಸರ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಪಾಲಿನ ಕೆಲಸವನ್ನು ಮಾಡಲು ಬಯಸಿದ್ದೇವೆ. ಈ ಮೂಲಕ ಸರ್ಕಾರದ ಧ್ಯೇಯ ಮತ್ತು ಪವರಿಂಗ್ ಡಿಜಿಟಲ್ ಇಂಡಿಯಾ ಎಂಬ ನಮ್ಮ ಧ್ಯೇಯಕ್ಕೂ ನಾವು ಇನ್ನಷ್ಟು ಇಂಬು ನೀಡುತ್ತಿದ್ದೇವೆ” ಎಂದು ಸ್ಯಾಮ್‌ಸಂಗ್‌ ಸೌಥ್‌ಈಸ್ಟ್ ಏಷ್ಯಾದ ಕಾರ್ಪೊರೇಟ್‌ ಉಪಾಧ್ಯಕ್ಷ ಹ್ಯುಮ್‌ ಕಿಮ್‌ ಹೇಳಿದರು.
ನಗರದ ಅನ್ವೇಷಕ ರಾಜ ಮುಗಸಿಮಂಗಲಂ ಜೆನೊಟೈಪಿಕ್ ಟೆಕ್ನಾಲಜಿ ಪ್ರೈ. ಲಿ. ಸಂಸ್ಥಾಪಕ ಮತ್ತು ಸಿಇಒ ಆಗಿದ್ದು, ಇದು ವೈವಿಧ್ಯಮಯ ಜೆನೋಮಿಕ್ ಅಪ್ಲಿಕೇಶನ್‌ಗಳಿಗೆ ಪ್ರತಿ ಹಂತದ ಸಂಶೋಧನೆಗೆ ಅಗತ್ಯ ಸೀಕ್ವೆನ್ಸಿಂಗ್ ಉತ್ಪನ್ನಗಳನ್ನು ಒದಗಿಸುತ್ತದೆ. ಇವರು ಯಶಸ್ಸು ಮತ್ತು ವೈಫಲ್ಯದ ಮೌಲ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಬಯಾಲಾಜಿಕಲ್ ಸಿಸ್ಟಮ್‌ಗಳ ತಿಳಿವಳಿಕೆಯನ್ನು ನೀಡುವ ಮೂಲಕ ಸಂಕೀರ್ಣ ಜೈವಿಕ ಸಮಸ್ಯೆಗಳನ್ನು ಸರಳಗೊಳಿಸಿ, ಅವರ ಸ್ಟಾರ್ಟಪ್‌ ಹೇಗೆ ಪರಿಹಾರವನ್ನು ಒದಗಿಸುತ್ತದೆ ಎಂಬುದರ ಬಗ್ಗೆಯೂ ಅವರು ಮಾತನಾಡಿದರು. ಭಾರತ ಎದುರಿಸುತ್ತಿರುವ ಸಮಸ್ಯೆಗಳನ್ನು ಹುಡುಕುವಂತೆ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು
ಸ್ಯಾಮ್‌ಸಂಗ್‌ ಸಾಲ್ವ್‌ ಫಾರ್ ಟುಮಾರೋ ವಿವರ
ಯಾರು ಭಾಗವಹಿಸಬಹುದು: 16-22 ವರ್ಷಗಳ ವ್ಯಕ್ತಿಗಳು, ವೈಯಕ್ತಿಕವಾಗಿ ಅಥವಾ 3 ರ ತಂಡದಲ್ಲಿ
ಅರ್ಜಿ ಥೀಮ್‌ಗಳು: ಶಿಕ್ಷಣ ಮತ್ತು ಕಲಿಕೆ, ಪರಿಸರ ಮತ್ತು ಸುಸ್ಥಿರತೆ, ಆರೋಗ್ಯ ಮತ್ತು ಯೋಗಕ್ಷೇಮ ಹಾಗೂ ವೈವಿಧ್ಯತೆ ಮತ್ತು ತೊಡಗಿಸಿಕೊಳ್ಳುವಿಕೆ
ಅವರಿಗೆ ಏನು ಸಿಗುತ್ತದೆ: ಆನ್‌ಲೈನ್ ತರಬೇತಿ, ಐಐಟಿ ದೆಹಲಿಯಲ್ಲಿ ಬೂಟ್‌ಕ್ಯಾಂಪ್ ಮತ್ತು ಸ್ಯಾಮ್‌ಸಂಗ್, ಐಐಟಿ ದೆಹಲಿ ಮತ್ತು ಎಂಇಐಟಿವೈ ಸ್ಟಾರ್ಟಪ್‌ ಹಬ್‌ನಿಂದ ಮಾರ್ಗದರ್ಶನ ಮತ್ತು ತರಬೇತಿ
ವಿಜೇತರು ಏನನ್ನು ಪಡೆಯುತ್ತಾರೆ: 3 ವಿಜೇತ ತಂಡಗಳಿಗೆ ಒಟ್ಟು ರೂ. 1.5 ಕೋಟಿ ಮತ್ತು ಆಕರ್ಷಕ ಸ್ಯಾಮ್‌ಸಂಗ್‌ ಉತ್ಪನ್ನಗಳು, ಇದರಿಂದ ಅವರ ಉತ್ಪಾದಕತೆ ಹೆಚ್ಚಲಿದೆ
ಅವರು ಎಲ್ಲಿ ಅರ್ಜಿ ಸಲ್ಲಿಸಬಹುದು: www.samsung.com/in/solvefortomorrow

ಯಾವಾಗಿನಿಂದ: ಏಪ್ರಿಲ್‌ 04, 2023 ರಿಂದ

ಎಲ್ಲಿಯವರೆಗೆ: ಮೇ 31 ಸಂಜೆ 5 ಗಂಟೆಯವರೆಗೆ

ಇತ್ತೀಚಿನ ಸುದ್ದಿ

ಜಾಹೀರಾತು