ಇತ್ತೀಚಿನ ಸುದ್ದಿ
ಸಕಲೇಶಪುರ: ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಮರ ವಶ
17/12/2024, 12:16
ಸಕಲೇಶಪುರ (reporterkarnataka.com): ಸಕಲೇಶಪುರ ತಾಲೂಕಿನ ಕಸಬಾ ಹೋಬಳಿ ಆನೆಮಹಲ್ ಗ್ರಾಮದ ಹತ್ತಿರ ಬಿ. ಎಂ. ರಸ್ತೆಯಲ್ಲಿ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.
ಇಲಾಖೆಯವ ಪರವಾನಗಿ ಇಲ್ಲದೆ ಅಕ್ರಮವಾಗಿ 19.278 ಘನ ಮೀಟರ್ ನಷ್ಟು ಕಾಡುಜಾತಿಯ ಬಿಲ್ಲೆಟ್ಸ್ ನ್ನು ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೆಚ್. ಆರ್. ಹೇಮಂತ್ ಕುಮಾರ್,ಉಪ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್, ಗಸ್ತು ಅರಣ್ಯಪಾಲಕರಾದ ಮಹದೇವಪ್ಪ ಹನುಮಂತಪ್ಪ, ಜಯಸ್ವಾಮಿ ಚಾಲಕರಾದ ಚಿದಾನಂದ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.