ಇತ್ತೀಚಿನ ಸುದ್ದಿ
ಸೈಂಟ್ ಆ್ಯನ್ಸ್ ಕಮ್ಯುನಿಟಿ ಕಾಲೇಜಿನಲ್ಲಿ ಜಾಗತಿಕ ಪರಿಸರ ದಿನಾಚರಣೆ
30/06/2024, 13:39
ಮಂಗಳೂರು(reporterkarnataka.com): ನಗರದ ಸೈಂಟ್ ಆ್ಯನ್ಸ್ ಕಮ್ಯುನಿಟಿ ಕಾಲೇಜಿನಲ್ಲಿ ಜಾಗತಿಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಪರಿಸರ ಪ್ರೇಮಿ ಡಾ. ಸಿ. ಪ್ರೇಮ್ ಡಿಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರಿಸರ ರಕ್ಷಣೆಯೇ ನಮ್ಮೆಲ್ಲರ ಕರ್ತವ್ಯ. ಈ ಪರಿಸರವನ್ನು ನಾವು ಸರಿಯಾಗಿ ಕಾಪಾಡದೆ ಹೋದರೆ ಮುಂದಿನ ಪೀಳಿಗೆಗೆ ಜೀವಿಸಲು ಕಷ್ಟವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ವಂ. ಸಿ. ವಿನೂತ, ಶಿಕ್ಷಕಿಯರಾದ ನಿರ್ಮಲಾ, ಪ್ರತಿಭಾ, ಅಸುಂತಾ ಡಿಸೋಜ, ಶೇರಿನ್ ಮುಂತಾದವರು ಉಪಸ್ಥಿತರಿದ್ದರು.