12:00 AM Wednesday8 - January 2025
ಬ್ರೇಕಿಂಗ್ ನ್ಯೂಸ್
ಬಳ್ಳಾರಿ: ಎಲ್ಲ ರೈಲುಗಳ ಆರಂಭಕ್ಕಾಗಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಒಂದು ತಿಂಗಳ… ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜ್‌ ಗೆ ಸಚಿವ ಎಂ. ಬಿ. ಪಾಟೀಲ್ ಚಾಲನೆ ಜ.10-12: ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2025; ದೇಶ – ವಿದೇಶದ 2… ದೇಶದ ವೈವಿಧ್ಯತೆ, ಸೌಹಾರ್ದತೆ ಉಳಿಸಿಕೊಳ್ಳುವ ಮೂಲಕ ಆಂತರಿಕವಾಗಿ ಸಶಕ್ತವಾಗಬೇಕಿದೆ: ಧರ್ಮಸ್ಥಳದಲ್ಲಿ ಉಪ ರಾಷ್ಟ್ರಪತಿ… 60% ಕಮೀಷನ್; ನಿಮ್ಮ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಸಿಎಂಗೆ ಕೇಂದ್ರ ಸಚಿವ… ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಪ್ರತಿಪಕ್ಷ ನಾಯಕ… ಹಣ ಕೈಯಲ್ಲಿದ್ದರೂ ಸ್ಕಾಲರ್ ಶಿಪ್ ವಿತರಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ಚಳಿ ಬಿಡಿಸಿದ ಸಿಎಂ… ಅರಣ್ಯ ಒತ್ತುವರಿ, ಕಳ್ಳಬೇಟೆ ತಡೆಗೆ ಗರುಡಾಕ್ಷಿ ಅಸ್ತ್ರ: ಆನ್ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ರಾಜ್ಯದಲ್ಲಿ ಎಚ್ ಎಂಪಿವಿ ಸೋಂಕು: ಜನರಲ್ಲಿ ಆತಂಕ ಬೇಡ, ಎಚ್ಚರ ಇರಲಿ; ಆರೋಗ್ಯ… ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ

ಇತ್ತೀಚಿನ ಸುದ್ದಿ

ಸಹ್ಯಾದ್ರಿ ಕ್ಯಾಂಪಸ್: ಫೆ.25ರಿಂದ 6ನೇ ವರ್ಷದ ಫುಜ್ಲಾನಾ ಜಿಪಿಎಲ್ ಉತ್ಸವ; 16 ತಂಡಗಳಿಂದ ಟ್ರೋಫಿಗಾಗಿ ಸೆಣಸಾಟ

24/02/2022, 20:44

ಮಂಗಳೂರು(reporterkarnataka.com): ಬಹುನಿರೀಕ್ಷೆಯ 6ನೇ ವರ್ಷದ ಫುಜ್ಲಾನಾ ಜಿಪಿಎಲ್ ಉತ್ಸವ-2022 ಈ ಬಾರಿ ನಗರದ ಹೊರವಲಯದ ನೇತ್ರಾವತಿ ನದಿ ತೀರದಲ್ಲಿ ಫೆಬ್ರವರಿ 25, 26 ಮತ್ತು 27 ರಂದು ನಡೆಯಲಿದೆ. 

ನಗರದ ಹೊರವಲಯದ ಸುಂದರ ಹಚ್ಚಹಸುರಿನ, ನೇತ್ರಾವತಿ ನದಿಯ ತೀರದಲ್ಲಿ ಹರಡಿಕೊಂಡಿರುವ ವಿಶಾಲ ಕ್ಯಾಂಪಸ್ ಹೊಂದಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಹಸುರು ಕ್ರೀಡಾಂಗಣದಲ್ಲಿ ರಂಗುರಂಗಾಗಿ ಜಿಪಿಎಲ್ ಉತ್ಸವ ಜರುಗಲಿದೆ.

ಕರ್ನಾಟಕ, ಮಹಾರಾಷ್ಟ್ರ, ಕೇರಳ, ತೆಲಂಗಾಣದ ಸೇರಿ ಕರಾವಳಿ ಕರ್ನಾಟಕವನ್ನು ಒಳಗೊಂಡು 16 ತಂಡಗಳು ಆಕರ್ಷಕ ಜಿಪಿಎಲ್ ಟ್ರೋಫಿಗಾಗಿ ಸೆಣಸಾಡಲಿವೆ. ಮೂರು ದಿನ ನಡೆಯುವ ಪಂದ್ಯಾಟಗಳು ಸೂರ್ಯ ಮುಳುಗುತ್ತಿದ್ದಂತೆ ಹೊನಲು ಬೆಳಕಿನಲ್ಲಿ ತೆರೆದುಕೊಳ್ಳುವ ಕ್ರೀಡಾಂಗಣವನ್ನು ನೋಡುವುದೇ ಚೆಂದ. ಪ್ರತಿ ವರ್ಷದಂತೆ ಈ ಬಾರಿಯೂ ಕ್ರೀಡಾಪ್ರೇಮಿಗಳಿಗೆ ಸಮೃದ್ಧವಾಗಿ ಉದರದ ಖುಷಿಯನ್ನು ಕೂಡ ತಣಿಸಲು ಹಲವು ಬಗೆಯ ಖಾದ್ಯಗಳನ್ನು ಉಣಬಡಿಸಲು ವಿಶಾಲವಾದ ಫುಡ್ ಕೋರ್ಟ್ ತಯಾರಾಗುತ್ತಿದೆ. ಮುಂಬೈಯ ವಡಾಪಾವ್ ನಿಂದ ಹಿಡಿದು ಪನ್ನೀರ್ ಸ್ಟಿಕ್ ಮಂಚೂರಿ, ಮಂಚೂರಿಯನ್ ಐಟಂ, ವೆಜ್ ನ್ಯೂಡಲ್ಸ್, ವೆಜ್ ಬಿರಿಯಾನಿ, ಡೋಕ್ಲಾ, ಪೊಟೆಟೋ ಟ್ವೀಸ್ಟರ್, ಕಬ್ಬಿನರಸ, ಕಾಟನ್ ಕ್ಯಾಂಡಿ, ವಿವಿಧ ಸಿಹಿ ತಿಂಡಿಗಳು, ವಿವಿಧ ದೋಸೆಗಳು, ಚರುಂಬುರಿ, ವಿವಿಧ ಐಸ್ ಕ್ರೀಂಗಳು, ಹಣ್ಣುಹಂಪಲುಗಳ ಸಹಿತ ಮೊಕ್ ಟೇಲ್ ರುಚಿಯನ್ನು ಕೂಡ ಮೂರು ದಿನ ಎಂಜಾಯ್ ಮಾಡಬಹುದಾಗಿದೆ. ಇನ್ನು ಕಲಾತ್ಮಕ ಮನಸ್ಸಿನ ಮಹಿಳೆಯರಿಗೆ ಮತ್ತು ಚಿಣ್ಣರಿಗಾಗಿ ಮತ್ತು ಪುರುಷರಿಗಾಗಿ ವಿವಿಧ ಸ್ಪರ್ಧೆಗಳನ್ನು ಕೂಡ ಏರ್ಪಡಿಸಲಾಗಿದೆ. ಗೂಡುದೀಪ ಸ್ಪರ್ಧೆ, ಕಸದಿಂದ ರಸ, ಆಭರಣಗಳ ತಯಾರಿ, ಮೆಹಂದಿ, ಕ್ಲೇ ಮಾಡೆಲಿಂಗ್, ಹೂ ಅಲಂಕಾರ, ಕೇಶ ವಿನ್ಯಾಸ, ಡ್ರಾಯಿಂಗ್, ಕೊಲಾಜ್, ಜಿಎಸ್ ಬಿ ಟ್ಯಾಲೆಂಟ್, ಅಡುಗೆ, ಪೋಸ್ಟರ್ ತಯಾರಿಕೆ, ಫ್ಯಾನ್ಸಿ ಡ್ರೆಸ್, ಟಗ್ ಆಫ್ ವಾರ್, ರಂಗೋಲಿ, ಮ್ಯೂಸಿಕ್ ವರ್ಕ್ ಶಾಪ್, ಹೌಸಿಹೌಸಿ ಸಹಿತ ಇನ್ನು ಹಲವು ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮನರಂಜನಾ ಕಾರ್ಯಕ್ರಮಗಳು, ತಜ್ಞರಿಂದ ಸಂವಾದ, ಶಾಪಿಂಗ್ ಮೇಳಾ, ಜಲಕ್ರೀಡೆ, ಮಕ್ಕಳ ಆಟದ ಲೋಕ, ಹೆಲಿಕಾಪ್ಟರ್ ರೈಡ್, ವೈವಾಹಿಕ ಸಂಬಂಧ, ಜ್ಯೋತಿಷ್ಯ ಸಹಿತ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಕಲೆ, ಸಂಸ್ಕೃತಿ ಪ್ರದರ್ಶನ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆಯಲಿವೆ. ದಕ ಜಿಲ್ಲೆ ಸಹಿತ ರಾಜ್ಯ, ರಾಷ್ಟ್ರದ ಸುಮಾರು 25 ಸಾವಿರದಷ್ಟು ಜಿಎಸ್ ಬಿ ಸಮುದಾಯದವರು ಒಂದೆಡೆ ಸೇರಿ ಸಂಭ್ರಮಿಸುವ ಈ ಉತ್ಸವದಲ್ಲಿ ಪ್ರತಿ ವರ್ಷ ವಿವಿಧ ಆಕರ್ಷಣೀಯ ಕ್ರೀಡೆಗಳನ್ನು ಸೇರಿಸಲಾಗುತ್ತದೆ. ಗೋವಾ ಮತ್ತು ಕೊಚ್ಚಿ ಸಮುದ್ರ ತೀರಗಳಲ್ಲಿ ಮಾತ್ರ ಕಂಡು ಬರುವ ಫ್ಲೈ ಬೋರ್ಡ್ ಅನ್ನು ಈ ಬಾರಿ ಪ್ರಥಮವಾಗಿ ಮಂಗಳೂರಿಗೆ ತಂದ ಕೀರ್ತಿ ಜಿಪಿಎಲ್ ಆಯೋಜಕರದ್ದು. ಅದೇ ರೀತಿ ಹೆಲಿಕಾಪ್ಟರ್ ನಲ್ಲಿ ಕುಳಿತು ಮಂಗಳೂರನ್ನು ಸುತ್ತುವ ಮೋಜು ಮಂಗಳೂರಿನಲ್ಲಿ ಪ್ರಥಮ ಬಾರಿ ಜಿಪಿಎಲ್ ಮೂಲಕ ಅನಾವರಣಗೊಳ್ಳಲಿದೆ. ಅದರೊಂದಿಗೆ ಕಿಡ್ಸ್ ಝೋನ್ ನಲ್ಲಿಯೂ ಹೊಸ ಹೊಸ ಆಕರ್ಷಣೆಗಳಾದ ಸ್ಕೈರೈಲ್, ಲಿಫ್ಟ್ ಮಕ್ಕಳಿಗಾಗಿ ತೆರೆಯಲಾಗಿದೆ. ಇನ್ನು ಜಿಎಸ್ ಬಿ ಸಮುದಾಯದಲ್ಲಿ ಗೃಹ ಉತ್ಪನ್ನಗಳನ್ನು ತಯಾರಿಸಿ ಬದುಕು ಕಟ್ಟಿಕೊಂಡಿರುವ ಕಿರುವ್ಯಾಪಾರಿಗಳಿಗಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ಫೆಬ್ರವರಿ 25 ರಂದು ಬೆಳಿಗ್ಗೆ ಕ್ರಿಕೆಟ್ ಪಂದ್ಯಾಟಗಳಿಗೆ ಗಣ್ಯರು ಚಾಲನೆ ನೀಡಲಿದ್ದಾರೆ. ಆ ಬಳಿಕ ಬೋಟ್ ಸವಾರಿ ಸಹಿತ ಇತರ ಮಳಿಗೆಗಳ ಉದ್ಘಾಟನೆಯನ್ನು ನೆರವೇರಿಸಲಾಗುತ್ತದೆ. ಶನಿವಾರ ಸಂಜೆ ಸಭಾ ಕಾರ್ಯಕ್ರಮವಿದ್ದು, ಭಾಜಪಾ ರಾಜ್ಯಾಧ್ಯಕ್ಷರೂ, ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್, ಭಾಜಪಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸುನೀಲ್ ಕುಮಾರ್, ಶಾಸಕರಾಗಿರುವ ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯರಾಗಿರುವ ಮಂಜುನಾಥ ಭಂಡಾರಿ, ಫುಜ್ಲಾನಾ ಗ್ರೂಪಿನ ಮಾಲೀಕರು, ಅರುಣಾ ಮಸಾಲದ ಅನಂತೇಶ್ ಪ್ರಭು, ಆಭರಣ ಜ್ಯುವೆಲ್ಲರ್ಸ್ ಸುಭಾಷ್ ಕಾಮತ್, ಮಹೇಶ್ ಕಾಮತ್, ದೇವಗಿರಿ ಟೀ ಸಿಎ ನಂದಗೋಪಾಲ್ ಶೆಣೈ, ವಿಬಝಾರ್ ನ ವಿಜೇಂದ್ರ ಭಟ್, ಡಿಬಿಎಸ್ ನ ದೀಪಕ್ ಶೆಣೈ, ಯಜಮಾನ ಇಂಡಸ್ಟ್ರೀಸ್ ನ ವರದರಾಜ್ ಪೈ, ಸಮ್ಮಿತಿ ಕ್ಯಾಪಿಟಲ್ ನ ಅತುಲ್ ಕುಡ್ವಾ, ಪೈ ಸೇಲ್ಸ್ ನ ಗಣಪತಿ ಪೈ, ಐಡಿಯಲ್ ಐಸ್ ಕ್ರೀಂ ನ ಮುಕುಂದ್ ಕಾಮತ್, ಹ್ಯಾಂಗ್ಯೋ ಐಸ್ ಕ್ರೀಂ ನ ಪ್ರದೀಪ್ ಪೈ, ನ್ಯಾಚುರಲ್ ಐಸ್ ಕ್ರೀಂ ರಘುನಂದನ್ ಕಾಮತ್, ಗಣ್ಯರು, ಸೆಲೆಬ್ರೆಟಿಗಳು ಭಾಗವಹಿಸಲಿದ್ದಾರೆ. ಆದಿತ್ಯವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಝೂಂಬಾ ಡ್ಯಾನ್ಸ್ ವಿಶೇಷ ಆಕರ್ಷಣೆಯಾಗಿದೆ. ಮ್ಯಾನ್ ಆಫ್ ದಿ ಸಿರೀಸ್ ಕ್ರೀಡಾಪಟುವಿಗೆ ಪೈ ಸೇಲ್ಸ್ ಆಕರ್ಷಕ ಬೈಕ್ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು