6:45 PM Saturday17 - May 2025
ಬ್ರೇಕಿಂಗ್ ನ್ಯೂಸ್
ಆಪರೇಷನ್ ಸಿಂಧೂರ್; ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಕಾಂಗ್ರೆಸ್ ಅಂತರಾತ್ಮದ ದನಿ: ಕೇಂದ್ರ… Davanagere | ಸ್ವಾಭಿಮಾನದಿಂದ‌ ಎರಡನೇ ವರ್ಷದ ಸಂಭ್ರಮಾಚರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದುರ್ಬಲ ಗ್ರಾಪಂಗಳ ದತ್ತು ಪಡೆದು ಸಮಗ್ರ ಅಭಿವೃದ್ಧಿಪಡಿಸಿ: ಸಿಇಒಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ… ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಇಂದಿನಿಂದ ಜಾರಿ; ಪ್ರಾಧಿಕಾರ ರಚನೆ ಮರದ ಕೊಂಬೆಗಳ ಮಧ್ಯೆ ಸಿಲುಕಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯ ರಕ್ಷಣೆ: ಅಗ್ನಿಶಾಮಕ ದಳ… ಲೋಕಾಯುಕ್ತ ಅಧಿಕಾರಿಗಳಿಂದ ಮತ್ತೆ ಭ್ರಷ್ಟರ ಭೇಟೆ: ಬೆಂಗಳೂರು, ಮಂಗಳೂರು ಸಹಿತ 7 ನಗರಗಳ… ಮಂಗಳೂರು: ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ;… Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ

ಇತ್ತೀಚಿನ ಸುದ್ದಿ

ಸಾಹಿತ್ಯದ ಮೂಲಕವೂ ಪ್ರತಿಭಟನೆ ವ್ಯಕ್ತಪಡಿಸಬಹುದು: ಸಾಹಿತಿ ಮೆಲ್ವಿನ್ ಪಿಂಟೊ ನೀರುಡೆ

09/09/2024, 16:18

ಮಂಗಳೂರು(reporterkarnataka.com): ನಾವು ನೇರವಾಗಿ ಹೇಳಲಾಗದುದನ್ನು ಸಾಹಿತ್ಯದ ಮೂಲಕ ಹೇಳಿ ಅನ್ಯಾಯದ ವಿರುದ್ದ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಬಹುದು ಎಂದು ಕೊಂಕಣಿಯ ಪ್ರಮುಖ ಸಮಕಾಲೀನ ಕಥೆಗಾರ ಮೆಲ್ವಿನ್ ಪಿಂಟೊ ನೀರುಡೆ ಹೇಳಿದರು.
ಅವರು ಸೆಪ್ಟೆಂಬರ್ 7ರಂದು ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ ಆರಂಭಿಸಿರುವ ʻಬೋಲ್ಕಾಂವ್ʼ ಮಾಸಿಕ ಸಾಹಿತ್ಯಾವಲೋಕನದ ಮೊದಲ ಸಭೆಯಲ್ಲಿ `ಸಣ್ಣ ಕಥೆಗಳು ಮತ್ತು ನಾನುʼ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
“ಅರುಂಧತಿ ರಾಯ್ ಅವರು ತಮ್ಮ ಎರಡನೇ ಕಾದಂಬರಿ ʻದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್ʼನಲ್ಲಿ ಸಾಹಿತ್ಯದ ವ್ಯಾಪ್ತಿಯಲ್ಲೇ ನಿಂತು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದ್ದಾರೆ. ಚಾ. ಫ್ರಾ. ದೆಕೊಸ್ತಾರವರು ತನ್ನ ನಾಟಕಗಳಲ್ಲಿ, ಕವಿತೆಗಳಲ್ಲಿ ಈ ಪ್ರಯತ್ನವನ್ನು ಮಾಡಿದ್ದಾರೆ. ದಲಿತ ಸಾಹಿತ್ಯದಲ್ಲೂ ನಾವು ಇದನ್ನು ಕಾಣುತ್ತೇವೆ, ಕಪ್ಪು ಸಾಹಿತ್ಯದಲ್ಲೂ ನಾವು ಇದನ್ನು ನೋಡಬಹುದು. ನನ್ನ ಪ್ರಕಾರ ಇಂದಿನ ಸಂದರ್ಭದಲ್ಲಿ ಸಾಹಿತ್ಯಕ್ಕೆ ಬಹಳ ಮಹತ್ವವಿದೆ. ಏಕೆಂದರೆ ಇಂದು, ವ್ಯಕ್ತಿಗಳು ಹೆಚ್ಚು ಹೆಚ್ಚು ಸಂಕುಚಿತರಾಗುತ್ತಿದ್ದಾರೆ ಮತ್ತು ಸ್ಪೂರ್ತಿ ಪಡೆಯುವುದು ಕಡಿಮೆಯಾಗಿದೆ. ಅಂತಹ ಸಂದರ್ಭದಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ನೇರವಾಗಿ ಪ್ರತಿಭಟಿಸಲಾರದ್ದನ್ನು ಸಾಹಿತ್ಯದ ಮೂಲಕ ಪರೋಕ್ಷವಾಗಿ ಪ್ರತಿಭಟಿಸಬಹುದು ಎಂದರು. ಸುಮಾರು 40 ನಿಮಿಷಗಳ ಕಾಲ ತಮ್ಮ ಸಾಹಿತ್ಯದ ಬಗ್ಗೆ ಮಾತನಾಡಿದ ಅವರು, ತಮ್ಮ ಸಣ್ಣ ಕಥೆಗಳನ್ನು ಮೊದಲನೆಯದಾಗಿ ತಮ್ಮ ಸ್ವಂತ ಅನುಭವದ ಕಥೆಗಳು, ಎರಡನೆಯದಾಗಿ ಇತರರ ಜೀವನದಲ್ಲಿ ಅವರು ನೋಡಿದ್ದನ್ನು ಚಿತ್ರಿಸಿರುವ ಕಥೆಗಳು ಮತ್ತು ಮೂರನೆಯದಾಗಿ ತಮ್ಮ ಸ್ವಂತ ಮಠದ ಸಿದ್ದಾಂತಗಳನ್ನು ವಿಮರ್ಶಾತ್ಮಕವಾಗಿ ಚಿತ್ರಿಸಿದ ಕಥೆಗಳು ಎಂದು ವಿಂಗಡಿಸಿ ಅವುಗಳ ಸೃಷ್ಟಿಗೆ ಕಾರಣವಾದ ಸನ್ನಿವೇಶಗಳನ್ನು ವಿವರಿಸಿದರು. ಈ ಸಾಹಿತ್ಯ ಮಂಚದಲ್ಲಿ ಸುಮಾರು 35 ಲೇಖಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ವಂ| ಡಾ| ಪ್ರವೀಣ್ ಮಾರ್ಟಿಸ್ ಅಬ್ಬಲ್ಲಿಗೆ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಕೊಂಕಣಿ ಸಂಸ್ಥೆಯ ನಿರ್ದೇಶಕ ವಂ| ಡಾ| ಮೆಲ್ವಿನ್ ಪಿಂಟೋ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಲ್ವಿನ್ ಡೆಸಾ, ʻಬೊಲ್ಕಾಂವ್ʼ ಸಾಹಿತ್ಯ ಮಂಚದ ಸಂಚಾಲಕ ಮತ್ತು ಹಿರಿಯ ಪತ್ರಕರ್ತ ಎಚ್.ಎಂ.ಪೆರ್ನಾಲ್ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆಯ ಕಾರ್ಯ ಸಂಯೋಜಕ ಜೋಕಿಮ್ ಪಿಂಟೋ ವೇದಿಕೆಯಲ್ಲಿದ್ದರು.
ಬೊಲ್ಕಾಂವ್` ಉದ್ಘಾಟಿಸಿದ ವಂ| ಡಾ| ಪ್ರವೀಣ್ ಮಾರ್ಟಿಸ್ ಮಾತನಾಡಿ ʻ 144 ವರ್ಷಗಳ ಹಿಂದೆ ಸಂತ ಅಲೋಶಿಯಸ್ ಕಾಲೇಜು ಸ್ಥಾಪನೆಯಾದಾಗಿನಿಂದ ಕೊಂಕಣಿ ಭಾಷೆ ಮತ್ತು ವಿವಿಧ ಭಾಷಾ ಚಟುವಟಿಕೆಗಳನ್ನು ಜೆಸ್ಯೂಟ್ ಧರ್ಮಗುರುಗಳು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. `ಬೊಲ್ಕಾಂವ್` ಮಾಸಿಕ ಸಾಹಿತ್ಯ ಮಂಚದ ಮೂಲಕ ಕೊಂಕಣಿ ಭಾಷೆಯನ್ನು, ಅದರ ಸಾಹಿತಿಗಳನ್ನು ಮತ್ತು ಅವರ ಸಾಹಿತ್ಯವನ್ನು ಅನುಭವಿಸಲು ಸಾಧ್ಯವಾಗಲಿ ಮತ್ತು ಇಲ್ಲಿನ ಸಂವಾದ ಕೊಂಕಣಿ ಭಾಷೆಯ ಬೆಳವಣಿಗೆಗೆ ಸ್ಪೂರ್ತಿದಾಯಕವಾಗಲಿ ʼ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ `ಬೊಲ್ಕಾಂವ್` ಮಾಸಿಕ ಸಭೆಯ ಸಂಚಾಲಕರಾದ ಎಚ್.ಎಂ.ಪೆರ್ನಾಲ್ ಕಾರ್ಯಕ್ರಮದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಎರಡನೇ `ಬೊಲ್ಕಾಂವ್` ಸಭೆಯು ಅಕ್ಟೋಬರ್ 12 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ| ಅಲ್ವಿನ್ ಡೆಸಾ, ಅವರು `ಸಾಹಿತ್ಯ ಮತ್ತು ವಿಮರ್ಶೆʼ ಕುರಿತು ಈ ಸಭೆಯಲ್ಲಿ ಮಾತನಾಡಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು