ಇತ್ತೀಚಿನ ಸುದ್ದಿ
ಸದ್ಯ ಬಸ್ ಪ್ರಯಾಣ ದರ ಇಳಿಕೆ ಇಲ್ಲ, ಡಿಸೇಲ್ ದರ 75 ರೂ. ಗೆ ಇಳಿದರೆ ಮಾತ್ರ ದರ ಇಳಿಕೆ: ಕುಯಿಲಾಡಿ ಸುರೇಶ್ ನಾಯಕ್
16/11/2021, 10:28
ಉಡುಪಿ( reporterkarnataka.com): ಡಿಸೇಲ್ ದರ 75 ರೂ. ಗೆ ಇಳಿದರೆ ಬಸ್ ಪ್ರಯಾಣ ದರವನ್ನು ಇಳಿಕೆ ಮಾಡುತ್ತೇವೆ. ಆದರೆ ಸದ್ಯ ಬಸ್ ಪ್ರಮಾಣ ದರ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ
ಈಗಿರುವ ಬಸ್ ಪ್ರಯಾಣ ದರ ಡಿಸೇಲ್ ಗೆ ₹ 85 ಆದಾಗ ಹೆಚ್ಚು ಮಾಡಿರುವ ದರ. ಆದಾದ ಮೇಲೆ ಬಸ್ ದರ ಹೆಚ್ಚು ಮಾಡಿಲ್ಲ. ಡಿಸೇಲ್ ದರ ₹103ಕ್ಕೆ ಏರಿಕೆಯಾದಗಲೂ ಜಾಸ್ತಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಡಿಸೇಲ್ ದರ ₹75ರಿಂದ 70ಕ್ಕೆ ಇಳಿದರೆ ಸಾರಿಗೆ ವ್ಯವಸ್ಥೆ ಉಳಿಯುತ್ತದೆ. ಕೊರೊನಾ ಬಂದ ನಂತರ ಜನರು ಕಾರು, ಬೈಕ್ ಗಳಲ್ಲಿ ಹೆಚ್ಚು ಓಡಾಡಲು ಆರಂಭಿಸಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಕಡಿಮೆಯಾಗಿದೆ. ಇದು ಸಾರಿಗೆ ವ್ಯವಹಾರಕ್ಕೆ ದೊಡ್ಡ ಹೊಡೆತ ನೀಡಿದೆ.
ಸದ್ಯ ಕೊರೊನಾ ಪ್ರಭಾವ ಕಡಿಮೆಯಾಗಿರುವುದರಿಂದ ಜನರು ಬಸ್ ಸಂಚರಿಸಲು ಶುರು ಮಾಡಿದ್ದಾರೆ. ಆದರೆ ಈಗಿನ ಡಿಸೇಲ್ ದರದಲ್ಲಿ ಸಾರಿಗೆ ವ್ಯವಹಾರ ನಡೆಸುವುದು ತುಂಬಾ ಕಷ್ಟವಾಗಿದೆ. ಹೀಗಾಗಿ ಡಿಸೇಲ್ ದರ ₹75 ಗೆ ಇಳಿದರೆ ಬಸ್ ಪ್ರಯಾಣ ದರವನ್ನು ಇಳಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.