ಇತ್ತೀಚಿನ ಸುದ್ದಿ
ಸಾಧನೆಯ ಹಾದಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ: 12 ವರ್ಷಗಳಲ್ಲಿ 33 ಶಾಖೆ
19/11/2024, 18:30
ಮಂಗಳೂರು(reporterkarnataka.com): ಸಹಕಾರ ತತ್ವದ ಮೂಲಕ ಸಾರ್ವಜನಿಕ ಸೇವೆಯ ಸದುದ್ದೇಶದ ಧ್ಯೇಯದೊಂದಿಗೆ ಸಾಕಾರಗೊಳಿಸುವ ಜೊತೆಗೆ ಬ್ರಹ್ಮಶ್ರೀ ನಾರಾಯಣಗುರುವರ್ಯರ ಆಶಯಗಳನ್ನು ಮತ್ತಷ್ಟು ಸಾಕಾರಗೊಳಿಸುವ ಮುಖ್ಯ ಉದ್ದೇಶದೊಂದಿಗೆ ಮಂಗಳೂರು ತಾಲೂಕಿನ ಬೆಂದೂರ್‌ವೆಲ್‌ನಲ್ಲಿ 30.1.2012ರಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡು, ದಶಮಾನೋತ್ಸವ ಸಂದರ್ಭದಲ್ಲಿ ಸ್ವಂತ ಆಡಳಿತ ಹಾಗೂ ಪ್ರಧಾನ ಕಚೇರಿಯನ್ನು ನಗರದ ಅಳಪೆ ಗ್ರಾಮದ ಪಡೀಲ್‌ನಲ್ಲಿ ಹೊಂದಿ, ಉಭಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕಾರ್ಯನಿರ್ವಹಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಉನ್ನತ ಸಾಧನೆಯ ಹಾದಿಯಲ್ಲಿದೆ. ಸಂಘವು ಕೇವಲ 12 ವರ್ಷಗಳಲ್ಲಿ 33 ಶಾಖೆಗಳನ್ನು ಹೊಂದಿದ್ದು, ಅತ್ಯುತ್ತಮ ಸೇವೆಯೊಂದಿಗೆ ನಿರಂತರವಾಗಿ ಲಾಭ ಗಳಿಸುತ್ತಾ ಬಂದಿದೆ.
ಸಂಘವು ಸದಸ್ಯರಲ್ಲಿ ಆಧುನಿಕ ವ್ಯವಹಾರ ವಿಷಯದಲ್ಲಿ ಸದಸ್ಯರಿಗೆ ತಿಳುವಳಿಕೆ ನೀಡುವ ಪರಸ್ಪರ-ಸಹಕಾರ, ಮನೋಭಾವ ಅಭಿವೃದ್ದಿ ಪಡಿಸುವ ಉದ್ದೇಶವನ್ನು ಹೊಂದಿದೆ. ಸಂಘದ ವ್ಯವಹಾರವನ್ನು ಕೇಂದ್ರ ಕಚೇರಿ ಹಾಗೂ ಶಾಖೆಗಳಲ್ಲಿಯೂ ಸಂಪೂರ್ಣ ಗಣಕಯಂತ್ರಗಳ ಮುಖಾಂತರವೇ ಮಾಡಲಾಗುತ್ತಿದೆ. ಸಂಘವು ಬೆಂದೂರ್‌ವೆಲ್, ಮಾಡೂರು, ಸ್ಟೇಟ್‌ಬ್ಯಾಂಕ್, ಮೂಲ್ಕಿ, ಸುರತ್ಕಲ್, ಬಿ.ಸಿ.ರೋಡ್, ಬಜ್ಪೆ, ಲಾಲ್‌ಭಾಗ್, ಕರಂಗಲ್ಪಾಡಿ, ಉಳ್ಳಾಲ, ಹಂಪನಕಟ್ಟೆ, ಡಿ.ಸಿ.ಆಫೀಸ್ ಬಳಿ, ಮುಡಿಪು, ಪಂಜಿಮೊಗರು, ಉಪ್ಪಿನಂಗಡಿ, ಪುತ್ತೂರು, ನಾಟೆಕಲ್, ತುಂಬೆ, ತೊಕ್ಕೊಟ್ಟು, ಪಡೀಲ್, ಅಡ್ಯಾರ್, ನೀರುಮಾರ್ಗ, ಪಡುಬಿದ್ರಿ, ಗಂಜಿಮಠ, ಕಾಪು, ಕೊಟ್ಟಾರ, ಮಡಂತ್ಯಾರ್, ಅಳದಂಗಡಿ, ಕೆ.ಸಿ ರೋಡ್, ಮಾಣಿ, ಎಲ್ಯಾರ್ ಪದವು, ಪಕ್ಷಿಕೆರೆ ಹಾಗೂ ಕೃಷ್ಣಾಪುರ ಸೇರಿ ಒಟ್ಟು 33 ಶಾಖೆಗಳನ್ನು ಹೊಂದಿದೆ. ಸಂಘವು ಇತರ ವಾಣಿಜ್ಯ ಬ್ಯಾಂಕುಗಳು ನೀಡುವ ಎಲ್ಲಾ ವಿಧದ ಸೇವೆಗಳು ಹಾಗೂ ಸಾಲಗಳನ್ನೂ ಸದಸ್ಯರಿಗೆ ನೀಡುತ್ತಿದೆ. ಚಿನ್ನಾಭರಣ ಅಡವಿನ ಮೇಲೆ ಕಡಿಮೆ ಬಡ್ಡಿ ಮತ್ತು ಸರಳ ರೀತಿಯಲ್ಲಿ ಸಾಲ ನೀಡುತ್ತಿದೆ.
2012 ರಲ್ಲಿ 1200 ಸದಸ್ಯರ ಪಾಲು ಬಂಡವಾಳದಿಂದ ಸ್ಥಾಪನೆಯಾದ ಸಂಸ್ಥೆಯು ಇಂದು 6896
ಸದಸ್ಯರನ್ನೊಳಗೊಂಡು, ರೂ
146.54 ಲಕ್ಷದಷ್ಟು ಪಾಲು ಬಂಡವಾಳ ಹೊಂದಿದೆ. ರೂ. 22 ಲಕ್ಷ ಠೇವಣಿಯೊಂದಿಗೆ ಆರಂಭಗೊಂಡ ಸಂಘವು 2023-24ನೇ ಸಾಲಿನಲ್ಲಿ ರೂ. 225 ಕೋಟಿಗೂ ಮಿಕ್ಕಿ ಠೇವಣಾತಿ ಇದ್ದು, ಪ್ರಸಕ್ತ ಸಾಲಿನ ಅರ್ಧ ವಾರ್ಷಿಕ ಆರ್ಥಿಕ ಅವಧಿಯಲ್ಲಿ ರೂ. 236 ಕೋಟಿಗೂ ಮಿಕ್ಕಿ ಠೇವಣಾತಿ ಹೊಂದಿದೆ. ಸಂಘವು 2023-24ನೇ ಸಾಲಿನಲ್ಲಿ ರೂ. 178 ಕೋಟಿಗೂ ಮಿಕ್ಕಿ ಸಾಲ ನೀಡಲಾಗಿದ್ದು, ಪ್ರಸಕ್ತ ಸಾಲಿನ ಅರ್ಧ ವಾರ್ಷಿಕ ಆರ್ಥಿಕ ಅವಧಿಯಲ್ಲಿ ರೂ. 196 ಕೋಟಿಗೂ ಮಿಕ್ಕಿ ಹೊರಬಾಕಿ ಸಾಲ ಹೊಂದಿದೆ. ಸಂಘವು ಸತತವಾಗಿ ಲಾಭ ಗಳಿಸುತ್ತಿದ್ದು,2023-24ನೇ ಸಾಲಿನಲ್ಲಿ ರೂ. 303.21 ಲಕ್ಷ ಲಾಭಗಳಿಸಿದೆ.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸದಸ್ಯರಿಗೆ ಸಹಕಾರಿ ಸಪ್ತಾಹದ ಅಂಗವಾಗಿ ಸಂಘದ ಸದಸ್ಯರಿಗೆ 1000 ದಿನಗಳ ಠೇವಣಿಗಳಿಗೆ ಶೇ. 10.50 ವರಗೆ ಆಕರ್ಷಕ ಬಡ್ಡಿ ಯೋಜನೆಯನ್ನು ಜಾರಿಗೊಳಿಸಿದೆ. ಜೊತೆಗೆ ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. 6262/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಆತ್ಮಶಕ್ತಿ ಭವಿಷ್ಯ ಸುರಕ್ಷಾ ಯೋಜನೆಯಲ್ಲಿ ಸದಸ್ಯರು ರೂ. 1,00,000/- ವನ್ನು 18 ವರ್ಷಗಳ ಅವಧಿಗೆ ಠೇವಣಾತಿ ಮಾಡಿದಾಗ ರೂ. 5,೦೦,೦೦೦/- ವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಗ್ರಾಹಕರು ತಮ್ಮ ಮಕ್ಕಳ ಭವಿಷ್ಯದ ಸುರಕ್ಷತೆಗಾಗಿ ಕನಿಷ್ಟ ರೂ. 25,೦೦೦/- ಹೂಡಿಕೆ ಮಾಡಬಹುದು. ಈ ಯೋಜನೆಯು ಸೀಮಿತ ಅವಧಿಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಘದ ಸಮೀಪದ ಶಾಖೆಯನ್ನು ಸಂಪರ್ಕಿಸಬಹುದು.
*ಸಂಘದ ಆಡಳಿತ ಮಂಡಳಿ:*
ಪ್ರಸ್ತುತ ಸಹಕಾರ ರತ್ನ ಶ ಚಿತ್ತರಂಜನ್ ಬೋಳಾರ್‌ರವರು ಅಧ್ಯಕ್ಷರಾಗಿದ್ದು, ನೇಮಿರಾಜ್ ಪಿ ಉಪಾಧ್ಯಕ್ಷರಾಗಿದ್ದು, ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಚಂದ್ರಹಾಸ್ ಮರೋಳಿ, ಮುದ್ದು ಮೂಡುಬೆಳ್ಳೆ, ಬಿ.ಪಿ, ದಿವಾಕರ್., ಗೋಪಾಲ್ ಎಮ್., ಚಂದ್ರಾವತಿ ಹಾಗೂ ಶ ಉಮಾವತಿ ನಿರ್ದೇಶಕರಾಗಿದ್ದಾರೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೌಮ್ಯ ವಿಜಯ್‌ರವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ ಮೂರು ಮಂದಿ ಸಿಬ್ಬಂದಿಗಳೊಖದಿಗೆ ಆರಂಭಗೊಂಡ ಸಂಘವು ಇಂದು ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ಶೇ. 95% ರಷ್ಟು ಮಹಿಳಾ ಸಿಬ್ಬಂದಿಗಳಿಗೆ ಉದ್ಯೋಗವನ್ನು ನೀಡಿದ್ದು, ಪ್ರಸ್ತುತ 90 ಸಿಬ್ಬಂದಿಗಳು ಕಾರ್ಯದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಘದ ಅಧ್ಯಕ್ಷರಾಗಿರುವ “ಸಹಕಾರ ರತ್ನ” ಶ್ರೀ ಚಿತ್ತರಂಜನ್ ಬೋಳಾರ್‌ರವರು ಸಹಕಾರ ಕ್ಷೇತ್ರದ ಸಕ್ರೀಯ ಚಟುವಟಿಕೆಯೊಂದಿಗೆ ದಕ್ಷಿಣ ಕನ್ನಡ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ನಿ.) ಜನತಾ ಬಜಾರ್, ಮಂಗಳೂರು ಮತ್ತು ದ.ಕ. ಜಿಲ್ಲಾ ಸಹಕಾರ ಯೂನಿಯನ್ (ರಿ.) ಮಂಗಳೂರು ಇದರ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಮಂಗಳೂರಿನ ಸಹಕಾರ ಅಧ್ಯಯನ ಮತ್ತು ಅಭಿವೃದ್ದಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ (ರಿ.) ಮಂಗಳೂರು ಇದರ ಕಾರ್ಯಾದ್ಯಕ್ಷರಾಗಿ, ಅಲ್ಲದೆ ಹಲವಾರು ಸಂಘ – ಸಂಸ್ಥೆಗಳಲ್ಲಿ ಸಕ್ರೀಯವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯೊಂದಿಗೆ ಗುರುತಿಸಿಕೊಂಡಿದ್ದಾರೆ.
ಸಂಘವು ಅತ್ಯಂತ ಅಲ್ಪ ಅವಧಿಯಲ್ಲಿಯೇ ಅನೇಕ ಪ್ರಶಸ್ತಿಗೆ ಭಾಜನವಾಗಿದೆ. ನ. 18 ರಂದು ಮಂಗಳೂರಿನಲ್ಲಿ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ದಿನಾಚರಣೆಯಂದು ಸಂಘವು ಸಾಧಿಸಿದ ಸರ್ವಾಂಗೀಣ ಸಾಧನೆಯನ್ನು ಪರಿಗಣಿಸಿ “ಉತ್ತಮ ವಿವಿಧೋದ್ದೇಶ ಸಹಕಾರಿ ಸಂಘ ಪ್ರಶಸ್ತಿ ”ಯನ್ನು ಪ್ರಧಾನ ಮಾಡಿ ಗೌರವಿಸಿದ್ದಾರೆ. ದಿನಾಂಕ ೨೬.೦೧.೨೦೨೦ರಂದು ಮಂಗಳೂರಿನಲ್ಲಿ ನಡೆದ ೭೧ನೇ ಗಣರಾಜ್ಯೋತ್ಸವದಂದು ೨೦೧೯ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ದಿನಾಂಕ ೧೪.೧೨.೨೦೧೮ ರಂದು ನವದೆಹಲಿಯ ಇಕೋನಾಮಿಕ್ ಗ್ರೋತ್ ಫೌಂಡೇಶನ್ ಇವರು ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್‌ರವರಿಗೆ “ ಎಕ್ಸಲೆನ್ಸ್ ಇನ್ ಬೆಸ್ಟ್ ಕೊ-ಆಪರೇಟಿವ್ ಸೊಸೈಟಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಸಂಘವು ಸಹಕಾರ ರಂಗದಲ್ಲಿ ಸಲ್ಲಿಸುತ್ತಿರುವ ಸೇವೆ ಮತ್ತು ಕಾರ್ಯಸಾಧನೆಯನ್ನು ಪರಿಗಣಿಸಿ ಅಖಿಲ ಭಾರತ ಸಹಕಾರ ಸಪ್ತಾಹದ ದಿನಾಚರಣೆಯಂದು “ಅತ್ಯುತ್ತಮ ಸಹಕಾರ ಸಂಘ’’ ವೆಂದು ಸತತ ೫ ಬಾರಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದ್ದಾರೆ. ಸಂಘದ ವ್ಯವಹಾರದ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದಕ್ಕೆ ಸತತ ೯ ವರ್ಷದಿಂದ “ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ”ಯನ್ನು ತನ್ನದಾಗಿಸಿಕೊಂಡಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ವು ಪ್ರಾರಂಭದಿಂದಲೂ ರಾಜ್ಯದಲ್ಲೇ ಅತೀ ಹೆಚ್ಚು ಇ-ಸ್ಟಾಂಪಿಂಗ್ ವಿತರಣೆ ಮಾಡುವುದರ ಮೂಲಕ ಸತತ 10 ವರ್ಷಗಳಿಂದ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇವರು “ಪ್ರತಿಷ್ಟಿತ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ ೨೦೧೮” ಯನ್ನು ನೀಡಿ ಗೌರವಿಸಿದ್ದಾರೆ. ಅಂತಾರಾಷ್ಟ್ರಿಯ ಸಹಕಾರ ಸಮಾವೇಶದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯವೈಖರಿ ಬಗ್ಗೆ ಡಾ. ಸುಧಾ ಕೆ. ಪ್ರಾಧ್ಯಾಪಕರು, ಬೆಸೆಂಟ್ ಕಾಲೇಜು, ಇವರು ಮಂಡಿಸಿರುವ ಪ್ರಬಂಧವು “ಖoಟe oಜಿ ಅo-ಔಠಿeಡಿಚಿಣive ಒovemeಟಿಣ iಟಿ Iಟಿಛಿಟusive ಆeveಟoಠಿmeಟಿಣ oಜಿ Iಟಿಜiಚಿ” ಪುಸ್ತಕದ ರೂಪದಲ್ಲಿ ಪ್ರಕಟನೆಯಾಗಿದ್ದು ಸಂಘದ ಸಾಧನೆಯ ಕೈಗನ್ನಡಿಯಾಗಿದೆ.
ರಾಜ್ಯದಲ್ಲೇ ಪ್ರಥಮ ಬಾರಿಗೆ ಎನ್ನುವಂತೆ ಸಂಘವು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಬೆಂಗಳೂರು ಇವರಿಂದ ನಡೆಸಲ್ಪಡುವ ೨೬ ವಾರಗಳ ಊಆಅಒ ದೂರ ಶಿಕ್ಷಣ ತರಬೇತಿ ತರಗತಿಯನ್ನು ಸಂಘದ ಪ್ರಧಾನ ಕಚೇರಿಯಲ್ಲಿ ವ್ಯವಸ್ಥೆಗೊಳಿಸಿದೆ. ಸಹಕಾರ ಸಂಘಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು, ಪದೋನ್ನತಿ ಹೊಂದಲು ಈ ಶಿಕ್ಷಣ ಬಹಳ ಪ್ರಾಮುಖ್ಯವಾಗಿದೆ. ಆತ್ಮಶಕ್ತಿಯು ಈ ಕೋರ್ಸಿನ ಮಂಗಳೂರು ವಿಭಾಗದ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇದುವರೆಗೆ ವಿವಿಧ ಸಹಕಾರಿ ಸಂಘಗಳಲ್ಲಿ ದುಡಿಯುತ್ತಿರುವ ೯೫೦ಕ್ಕೂ ಅಧಿಕ ಸಿಬ್ಬಂದಿಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಸAಘವು ಕೇವಲ ಆರ್ಥಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗಿರದೆ ತನ್ನ ಕಾರ್ಯಕ್ಷೇತ್ರವನ್ನು ಸಮಾಜಸೇವೆಯಲ್ಲಿ ಕೂಡಾ ವ್ಯಾಪಿಸಿಕೊಂಡಿದೆ. ಮುಖ್ಯವಾಗಿ ಸಾಮುದಾಯಿಕವಾಗಿ ಆರೋಗ್ಯ ತಪಾಸಣಾ, ೭೭ಕ್ಕೂ ಮಿಕ್ಕಿ ಉಚಿತ ವೈದ್ಯಕೀಯ ಶಿಬಿರ, ೬೦೦ಕ್ಕೂ ಮಿಕ್ಕಿ ಕಣ್ಣಿನ ಶಸ್ತçಚಿಕಿತ್ಸೆ, ೧೭,೦೦೦ಕ್ಕೂ ಮಿಕ್ಕಿ ಉಚಿತ ಕನ್ನಡಕ ವಿತರಣೆ, ಉಚಿತ ಔಷದಿ ವಿತರಣೆ, ಉಚಿತ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆ, ಸಾರ್ವಜನಿಕರ ಉಪಯೋಗಕ್ಕಾಗಿ ಬಸ್ಸು ತಂಗುದಾಣ ನಿರ್ಮಾಣ, ಮನೆ ನಿರ್ಮಾಣ, ವಿಮಾ ಸೌಲಭ್ಯ, ವಾರ್ಷಿಕೋತ್ಸವ ಸಂದರ್ಭದಲ್ಲಿ ಗ್ರಾಹಕರ ಭೇಟಿ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಸಂಘದ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರ, ವಾರ್ಷಿಕ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರಬುದ್ಧ ಮತ್ತು ಬದ್ಧತೆಯ ನಾಯಕತ್ವ, ಪ್ರತಿಗಾಮಿ ಆಡಳಿತ, ನಮ್ಯವಾದ ನಿಯಮಗಳು, ಮಾನವತೆಯ ಬಗ್ಗೆ ಕಾಳಜಿ, ತಕ್ಷಣದ ಸೇವೆ, ನಗುಮೊಗದ ಮತ್ತು ಸಹಕಾರದ ಭಾವ, ಸಾಮಾಜಿಕವಾದ ವಿನೂತನ ಯೋಜನೆ. ಇವೆಲ್ಲಾ ಆತ್ಮಶಕ್ತಿಯನ್ನು ಸಿಂಧುವಿನೆತ್ತರದತ್ತ ಏರಿಸುವಲ್ಲಿ ಸಹಾಯಕ ನಿಚ್ಚಣಿಕೆಯಾಗಿವೆ. ಸಾಮಾಜಿಕ ಸಹಭಾಗಿತ್ವವು ಆರ್ಥಿಕ ಸಾಹಸೋದ್ಯಮದಲ್ಲಿ ಪ್ರಗತಿದಾಯಕವಾಗಿ ಪರಿಣಮಿಸಿ, ಸಹಕಾರಿ ಕ್ಷೇತ್ರವು ಸರ್ವರಂಗದ ಅಭಿವೃದ್ಧಿಗೆ ಕಾರಣವಾಗಿ ಸಂಪದ್ಭರಿತ ಸಾಂಸ್ಥಿಕತೆ ಮತ್ತು ದೇಶೀಯತೆಯನ್ನು ಅನಾವರಣಗೊಳಿಸುತ್ತದೆ.