ಇತ್ತೀಚಿನ ಸುದ್ದಿ
ಆರೆಸ್ಸೆಸ್ ನಾಯಕ ಡಾ. ಪ್ರಭಾಕರ್ ಭಟ್ ಆರೋಗ್ಯ ಚೇತರಿಕೆ: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
06/04/2022, 10:33

ಮಂಗಳೂರು(reporterkarnataka.com): ಆರೋಗ್ಯದಲ್ಲಿ ಏರುಪೇರಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾದ ಆರೆಸ್ಸೆಸ್ ಹಿರಿಯ ಮುಖಂಡ, ಕಲ್ಕಡ್ಕ ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ (72) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.
ಡಾ. ಭಟ್ ಅವರಿಗೆ ಮಂಗಳವಾರ ಸಂಜೆ ಲಘ ಹೃದಯಾಘಾತವಾಗಿದ್ದು, ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ.
ಮಂಗಳವಾರ ಸಂಜೆ ವರೆಗೂ ಕಲ್ಲಡ್ಕ ಶಾಲೆಯಲ್ಲೇ ಇದ್ದ ಪ್ರಭಾಕರ ಭಟ್ ಅವರಿಗೆ ಸಂಜೆ ಹೊತ್ತಿಗೆ ಶ್ವಾಸಕೋಶದ ಬಳಲಿಕೆ ಉಂಟಾಗಿತ್ತು. ಹೀಗಾಗಿ ನೇರವಾಗಿ ಎಜೆ ಆಸ್ಪತ್ರೆಗೆ ಕರೆತರಲಾಗಿತ್ತು. ತೀವ್ರ ಕಾರ್ಯದೊತ್ತಡದಿಂದ ಅವರ ಆರೋಗ್ಯದಲ್ಲಿ ಬಳಲಿಕೆ ಕಂಡು ಬಂದಿದೆ ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಲಘು ಹೃದಯಾಘಾತ ಆಗಿದೆ ಎಂದು ಖಚಿತ ಪಡಿಸಿದ್ದಾರೆ. ಅಲ್ಲದೆ, ಆ್ಯಂಜಿಯೋಗ್ರಾಮ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಇದೆ, ಹುಷಾರಿದ್ದಾರೆ ಎಂದು ಅವರ ಆಪ್ತ ತಿಳಿಸಿವೆ.