ಇತ್ತೀಚಿನ ಸುದ್ದಿ
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಶೃಂಗೇರಿ ಭೇಟಿ: ಸ್ವಾಮೀಜಿ ಜತೆ ಚರ್ಚೆ; ರಾಮ ಮಂದಿರ ಉದ್ಘಾಟನೆಗೆ ಆಹ್ವಾನ?
05/10/2023, 18:22

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಶೃಂಗೇರಿಗೆ ಭೇಟಿ ನೀಡಿ ಶಾರದಾಂಭೆಯ ಆಶೀರ್ವಾದ ಪಡೆದರು.
ಭಾಗವತ್ ಅವರು ಶಾರದಾಂಬೆ ಪೀಠದ ಇಬ್ಬರು ಗುರುವತ್ರಯರ ಆಶೀರ್ವಾದ ಪಡೆದರು.
ಒಂದೂವರೆ ಗಂಟೆಗಳ ಕಾಲ ಗುರುಗಳ ಜೊತೆ ಭಾಗವತ್
ಚರ್ಚಿಸಿದರು. ಹಿರಿಯ ಗುರು ಭಾರತೀತೀರ್ಥ ಶ್ರೀಗಳು ಹಾಗೂ ಕಿರಿಯ ಗುರು ವಿಧುಶೇಖರ ಶ್ರೀಗಳ ಜೊತೆ ಚರ್ಚೆ ನಡೆಸಿದರು.
ಭಾಗವತ್ ಅವರು ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲು ಬಂದಿರುವುದು ಎನ್ನಲಾಗಿದೆ.
ಭಾಗವತ್ ಜೊತೆ ರಾಜ್ಯ ಮಟ್ಟದ ಐವರು ಆರ್.ಎಸ್.ಎಸ್.ಸದಸ್ಯರು ಉಪಸ್ಥಿತರಿದ್ದರು.
ಗುರುವತ್ರಯರ ಜೊತೆ ಚರ್ಚಿಸಿ, ಆಶೀರ್ವಾದ ಪಡೆದು ಮೋಹನ್ ಭಾಗವತ್ ನಿರ್ಗಮಿಸಿದರು.